ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ತಮಿಳುನಾಡಿನ ಕೊಲಾಚಲ್ ಬಳಿಯ ಎನಾಯಮ್ ನಲ್ಲಿ ಬೃಹತ್ ಬಂದರು ಸ್ಥಾಪಿಸಲು ತನ್ನ ತಾತ್ವಿಕ ಒಪ್ಪಿಗೆ ನೀಡಿದೆ.
ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.)ವನ್ನು ಈ ಬಂದರಿನ ಅಭಿವೃದ್ಧಿಗಾಗಿ ತಮಿಳುನಾಡಿನ ಮೂರು ಪ್ರಮುಖ ಬಂದರುಗಳ ಅಂದರೆ ವಿ.ಓ. ಚಿದಂಬರನಾರ್ ಬಂದರು ಪ್ರತಿಷ್ಠಾನ, ಚೆನ್ನೈ ಬಂದರು ನ್ಯಾಸ ಮತ್ತು ಕಾಮರಾಜರ್ ಬಂದರು ನಿಯಮಿತದ ಆರಂಭಿಕ ಈಕ್ವಿಟಿ ಬಂಡವಾಳದಲ್ಲಿ ರಚಿಸಲಾಗುವುದು. ಎಸ್.ಪಿ.ವಿ.ಯು ಹೂಳೆತ್ತುವ ಮತ್ತು ಸುಧಾರಣೆ, ಹಿನ್ನೀರು ನಿರ್ಮಾಣ, ಖಾತರಿ ಸಂಪರ್ಕ ಕೊಂಡಿಗಳು ಇತ್ಯಾದಿ ಸೇರಿದಂತೆ ಬಂದರಿನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ.
ಜಾಗತಿಕ ಸರಕು ನಿರ್ವಹಣೆ ಸಾಮರ್ಥ್ಯದ ಕರಡು ಮತ್ತು ಅದಕ್ಕೆ ಸರಿಹೊಂದುವಂಥ ಕೆಲವೇ ಬಂದರುಗಳು ಪ್ರಸ್ತುತ ಭಾರತದಲ್ಲಿವೆ. ಪ್ರಸ್ತುತ ಭಾರತದ ಎಲ್ಲ ಹಡಗಾಂತರಣ ಸಂಚಾರ ಕೊಲಂಬೋ, ಸಿಂಗಾಪೂರ ಮತ್ತು ಇತರ ಅಂತಾರಾಷ್ಟ್ರೀಯ ಬಂದರುಗಳಲ್ಲಿ ನಿರ್ವಹಿಸಲ್ಪಡುತ್ತಿದೆ. ಭಾರತೀಯ ಬಂದರು ಕೈಗಾರಿಕೆ ಪ್ರತಿ ವರ್ಷ 1500 ಕೋಟಿ ರೂಪಾಯಿಗಳವರೆಗೆ ಆದಾಯ ನಷ್ಟ ಅನುಭವಿಸುತ್ತಿದೆ.
ಎನಾಯಮ್ ನಲ್ಲಿ ಬೃಹತ್ ಬಂದರು ಸ್ಥಾಪನೆಯಾದರೆ, ಇದು ರಾಷ್ಟ್ರದ ಹೊರಗೆ ಹಡಗಾಂತರಣ ಸಂಚಾರ ಆಗುತ್ತಿರುವ ಭಾರತದ ಸರಕುಗಳಿಗೆ ಪ್ರಮುಖ ಹೆಬ್ಬಾಗಿಲಿನಂತಷ್ಟೇ ಕಾರ್ಯ ನಿರ್ಹವಹಿಸುದಿಲ್ಲ ಜೊತೆಗೆ ಇದು ಪೂರ್ವ –ಪಶ್ಚಿಮದ ಜಾಗತಿಕ ವಾಣಿಜ್ಯ ಮಾರ್ಗದಲ್ಲಿ ಹಡಗಾಂತರಣ ತಾಣವಾಗಿಯೂ ಕಾರ್ಯ ನಿರ್ವಹಿಸಲಿದೆ.
ಪ್ರಸ್ತುತ ಕೊಲಂಬೋ ಅಥವಾ ಇತರ ಬಂದರುಗಳಲ್ಲಿ ಹಡಗಾಂತರಣದಿಂದ ಹೆಚ್ಚುವರಿ ಬಂದರು ನಿರ್ವಹಣೆ ವೆಚ್ಚ ಭರಿಸುತ್ತಿರುವ ದಕ್ಷಿಣ ಭಾರತದ ರಫ್ತುದಾರರಿಗೆ ಮತ್ತು ಆಮದುದಾರರಿಗೆ ಎನಾಯಂ ಸರಕು ಸಾಗಣೆಯ ವೆಚ್ಚವನ್ನೂ ತಗ್ಗಿಸಲಿದೆ.
AKT/NT/VK