ತಮಿಳುನಾಡಿನ ಕೃಷ್ಣಗಿರಿಯ ಪಟಾಕಿ ಕಾರ್ಖಾನೆಯ ಬೆಂಕಿ ಅವಘಡದಲ್ಲಿ ಸಂಭವಿಸಿದ ಸಾವಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪಿ.ಎಂ.ಎನ್.ಆರ್.ಎಫ್. ನಿಧಿಯಿಂದ ರೂ. 2 ಲಕ್ಷಗಳನ್ನು ಮೃತರ ಅವಲಂಭಿತ ಸಂಬಂಧಿಕರಿಗೆ ನೀಡಲಾಗುವುದು ಮತ್ತು ಗಾಯಾಳುಗಳಿಗೆ ರೂ. 50,000 ಗಳ ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿ ಅವರು ಘೋಷಿಸಿದರು.
ಪ್ರಧಾನಮಂತ್ರಿ ಕಾರ್ಯಾಲಯವು ಈ ರೀತಿ ಟ್ವೀಟ್ ಮಾಡಿದೆ:
“ತಮಿಳುನಾಡಿನ ಕೃಷ್ಣಗಿರಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಘಟಿಸಿದ ಅಗ್ನಿ ದುರಂತದಿಂದ ಅಮೂಲ್ಯವಾದ ಜೀವಹಾನಿ ಸಂಭವಿಸಿದೆ. ಈ ಅತ್ಯಂತ ಕಷ್ಟಕರ ಸಮಯದಲ್ಲಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಪರಿಹಾರ ನಿಟ್ಟಿನಲ್ಲಿ ಪಿ.ಎಂ.ಎನ್.ಆರ್.ಎಫ್. ನಿಧಿಯಿಂದ ರೂ. 2 ಲಕ್ಷಗಳನ್ನು ಮೃತರ ಅವಲಂಭಿತ ಸಂಬಂಧಿಕರಿಗೆ ನೀಡಲಾಗುವುದು ಮತ್ತು ಗಾಯಾಳುಗಳಿಗೆ ರೂ. 50,000 ಗಳ ಸಹಾಯಧನವನ್ನು ಪರಿಹಾರವಾಗಿ ನೀಡಲಾಗುವುದು: ಪ್ರಧಾನಮಂತ್ರಿ
*****
Deeply saddened by the tragic mishap at a cracker factory in Krishnagiri, Tamil Nadu, resulting in the loss of precious lives. My thoughts and prayers are with the families of the victims during this extremely difficult time. May the injured recover soon. An ex-gratia of Rs. 2…
— PMO India (@PMOIndia) July 29, 2023