Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳುನಾಡಿನಲ್ಲಿ ಪ್ರಮುಖ ಅನಿಲ ಮತ್ತು ತೈಲ ವಲಯದ ಯೋಜನೆಗಳ ಲೋಕಾರ್ಪಣೆ ಹಾಗು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

ತಮಿಳುನಾಡಿನಲ್ಲಿ ಪ್ರಮುಖ ಅನಿಲ ಮತ್ತು ತೈಲ ವಲಯದ ಯೋಜನೆಗಳ ಲೋಕಾರ್ಪಣೆ ಹಾಗು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಮಿಳುನಾಡಿನಲ್ಲಿ ಪ್ರಮುಖ ತೈಲ ಮತ್ತು ಅನಿಲ ವಲಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಲೋಕಾರ್ಪಣೆ ಮಾಡಿದರು. ಪ್ರಧಾನಮಂತ್ರಿಯವರು ರಾಮನಾಥಪುರಂತೂತುಕುಡಿ ನೈಸರ್ಗಿಕ ಅನಿಲ ಕೊಳವೆಮಾರ್ಗ ಮತ್ತು ಮನಾಲಿಯ ಚೆನ್ನೈ ಪೆಟ್ರೋಲಿಯಂ ನಿಗಮ ನಿಯಮಿತದ ಗ್ಯಾಸೋಲಿನ್ ಡಿಸಲ್ಫುರೈಸೇಶನ್ ಘಟಕವನ್ನು ದೇಶಕ್ಕೆ ಸಮರ್ಪಣೆ ಮಾಡಿದರು. ಅವರು ನಾಗಪಟ್ಟಣಂನಲ್ಲಿ ಕಾವೇರಿ ಕೊಳ್ಳದ ಶುದ್ಧೀಕರಣ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ತಮಿಳುನಾಡಿನ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

2019-20ರಲ್ಲಿ ಬೇಡಿಕೆಯನ್ನು ಪೂರೈಸಲು ಭಾರತವು ಪ್ರತಿಶತ 85ರಷ್ಟು ತೈಲ ಮತ್ತು ಶೇಕಡ 53ರಷ್ಟು ಅನಿಲವನ್ನು ಆಮದು ಮಾಡಿಕೊಂಡಿರುವ ವಿಷಯವನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು., ನಮ್ಮಂತಹ ವೈವಿಧ್ಯಮಯ ಮತ್ತು ಪ್ರತಿಭಾವಂತ ರಾಷ್ಟ್ರವು ಇಂಧನ ಆಮದು ಅವಲಂಬಿತವಾಗಿರಬೇಕೇ? ಎಂದು ಪ್ರಶ್ನಿಸಿದರು. ವಿಷಯಗಳ ಬಗ್ಗೆ ನಾವು ಮೊದಲೇ ಗಮನಹರಿಸಿದ್ದಿದ್ದರೆ, ನಮ್ಮ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರಲಿಲ್ಲ ಎಂದು ಅವರು ಒತ್ತಿ ಹೇಳಿದರು. ಈಗ, ಶುದ್ಧ ಮತ್ತು ಹಸಿರು ಇಂಧನ ಮೂಲಗಳತ್ತ ಕಾರ್ಯ ನಿರ್ವಹಿಸಲಾಗುತ್ತಿದೆ, ಇಂಧನ ಅವಲಂಬನೆಯನ್ನು ಕಡಿಮೆ ಮಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. “ನಮ್ಮ ಸರ್ಕಾರವು ಮಧ್ಯಮ ವರ್ಗದವರ ಕಾಳಜಿಗೆ ಸಂವೇದನಾತ್ಮಕವಾಗಿದೆಎಂದು ಅವರು ಒತ್ತಿ ಹೇಳಿದರು.

ಇದರ ಸಾಧನೆಗಾಗಿ, ರೈತರಿಗೆ ಮತ್ತು ಗ್ರಾಹಕರಿಗೆ ನೆರವಾಗಲು ಭಾರತ ಈಗ, ಥೆನಾಲ್ ಹೆಚ್ಚಳಕ್ಕೆ ಗಮನ ಹರಿಸಿದೆ ವಲಯದಲ್ಲಿ ಮುಂಚೂಣಿಯಲ್ಲಿರಲು ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಉಳಿತಾಯವಾಗುವಂತೆ ಮಾಡಲು ಎಲ್..ಡಿ ಬಲ್ಬ್ ಗಳಂತಹ ಪರ್ಯಾಯ ಮೂಲಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಭಾರತ ಶ್ರಮಿಸುತ್ತಿರುವುದರ ಜೊತೆಗೆನಮ್ಮ ಇಂಧನ ಆಮದು ಅವಲಂಬನೆಯನ್ನು ತಗ್ಗಿಸುವ ಮತ್ತು ಆಮದು ಮೂಲಗಳನ್ನು ವೈವಿಧ್ಯಗೊಳಿಸಬೇಕಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಇದಕ್ಕಾಗಿ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. 2019-20ರಲ್ಲಿ ಭಾರತವು ಸಂಸ್ಕರಣಾ ಸಾಮರ್ಥ್ಯದಲ್ಲಿ ವಿಶ್ವದ 4ನೇ ಸ್ಥಾನದಲ್ಲಿತ್ತು. ಸುಮಾರು 65.2 ದಶಲಕ್ಷ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತೀಯ ತೈಲ ಮತ್ತು ಅನಿಲ ಕಂಪನಿಗಳು 27 ದೇಶಗಳಲ್ಲಿತಮ್ಮ ಅಸ್ತಿತ್ವ ಹೊಂದಿರುವ ಬಗ್ಗೆ ಮಾತನಾಡಿದ ಅವರು, ಹೂಡಿಕೆ ಅಂದಾಜು ಎರಡು ಲಕ್ಷ ಎಪ್ಪತ್ತು ಸಾವಿರ ಕೋಟಿ ರೂಪಾಯಿ ಆಗಿದೆ ಎಂದರು.

ಒಂದು ದೇಶ ಒಂದು ಅನಿಲ ಗ್ರಿಡ್ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, “ನಾವು ಮುಂದಿನ ಐದು ವರ್ಷಗಳಲ್ಲಿ ಅನಿಲ ಮತ್ತು ತೈಲ ಮೂಲಸೌಕರ್ಯ ನಿರ್ಮಾಣಕ್ಕಾಗಿ ಏಳೂವರೆ ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲು ಯೋಜಿಸಿದ್ದೇವೆ. 407 ಜಿಲ್ಲೆಗಳ ವ್ಯಾಪ್ತಿಯಲ್ಲಿ ನಗರ ಅನಿಲ ಪೂರೈಕೆ ಜಾಲವನ್ನು ವಿಸ್ತರಿಸಲು ಒತ್ತು ನೀಡಲಾಗಿದೆಎಂದು ತಿಳಿಸಿದರು.

ಗ್ರಾಹಕ ಕೇಂದ್ರಿತ ಯೋಜನೆಗಳಾದ ಪಹಾಲ್ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಗಳು  ಅನಿಲವನ್ನು ಪ್ರತಿಯೊಬ್ಬ ಭಾರತೀಯರ ಮನೆಗೆ ಒದಗಿಸಲು ಸಹಾಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ತಮಿಳುನಾಡಿನ  ಶೇ.95 ಎಲ್ಪಿಜಿ ಗ್ರಾಹಕರು ಪಹಾಲ್ ಯೋಜನೆಗೆ ಸೇರ್ಪಡೆಯಾಗಿದ್ದಾರೆ. ಶೇ.90ಕ್ಕಿಂತ ಹೆಚ್ಚು ಸಕ್ರಿಯ ಗ್ರಾಹಕರು ನೇರ ಸಬ್ಸಿಡಿ ವರ್ಗಾವಣೆಯನ್ನು ಪಡೆಯುತ್ತಿದ್ದಾರೆ. ಉಜ್ವಲಾ ಯೋಜನೆ ಅಡಿಯಲ್ಲಿ ತಮಿಳುನಾಡಿನ 32 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕುಟುಂಬಗಳಿಗೆ ಹೊಸ ಸಂಪರ್ಕಗಳನ್ನು ಒದಗಿಸಲಾಗಿದೆ. ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 31.6 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ಮರುಪೂರಣ ಸಿಲಿಂಡರ್ ಪ್ರಯೋಜನ ನೀಡಲಾಗಿದೆ ಎಂದು ಪ್ರಧಾನಮಂತ್ರಿಗೆ ಮಾಹಿತಿ ನೀಡಿದರು.

ರಾಮನಾಥಪುರಂನಿಂದ ತೂತುಕುಡಿವರೆಗಿನ ಇಂಡಿಯನ್ ಆಯಿಲ್ 143 ಕಿ.ಮೀ. ಉದ್ದದ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಇಂದು ಆರಂಭಿಸಲಾಗುತ್ತಿದ್ದು, ಇದು .ಎನ್.ಜಿ.ಸಿ. ಅನಿಲ ಕ್ಷೇತ್ರದಿಂದ ಅನಿಲವನ್ನು ಪಡೆಯುತ್ತದೆ ಎಂದರು. ಇದು ದೊಡ್ಡ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಯೋಜನೆಯ ಭಾಗವಾಗಿದ್ದು, ಇದನ್ನು 4500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದೆ ಎಂದು ತಿಳಿಸಿದರು. ಇದರಿಂದ ಎಣ್ಣೋರ್, ತಿರುವಳ್ಳೂರ್, ಬೆಂಗಳೂರು, ಪುದುಚೇರಿ, ನಾಗಪಟ್ಟಣಂ, ಮದುರೈ ಮತ್ತು ತೂತುಕುಡಿಗಳಿಗೆ ಪ್ರಯೋಜನವಾಗಲಿದೆ ಎಂದರು

ಅನಿಲ ಕೊಳವೆ ಮಾರ್ಗ ಯೋಜನೆಗಳು ನಗರ ಅನಿಲ ಯೋಜನೆ ಅಭಿವೃದ್ಧಿಗೆ ಅವಕಾಶ ನೀಡಲಿದ್ದು, ತಮಿಳುನಾಡಿನ 10 ಜಿಲ್ಲೆಗಳಲ್ಲಿ 5 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು. .ಎನ್.ಜಿ.ಸಿ. ಕ್ಷೇತ್ರದಿಂದ ಅನಿಲವನ್ನು ಈಗ ತೂತುಕುಡಿಯ ದಕ್ಷಿಣದ ಪೆಟ್ರೋ ರಾಸಾಯನಿಕ ಕೈಗಾರಿಕೆ ನಿಗಮ ನಿಯಮಿತಕ್ಕೆ ಪೂರೈಸಲಾಗುವುದು. ಕೊಳವೆ ಮಾರ್ಗ ಅಗ್ಗದ ದರದಲ್ಲಿ ಎಸ್.ಪಿ..ಸಿ.ಗೆ ರಸಗೊಬ್ಬರ ತಯಾರಿಕೆಗಾಗಿ ಫೀಡ್ ಸ್ಟಾಕ್ ರೂಪದಲ್ಲಿ ನೈಸರ್ಗಿಕ ಅನಿಲವನ್ನು ಪೂರೈಸಲಿದೆ. ಫೀಡ್ ಸ್ಟಾಕ್ ಈಗ ನಿರಂತರವಾಗಿ ಲಭ್ಯವಿದ್ದು, ದಾಸ್ತಾನು ಮಾಡುವ ಅಗತ್ಯ ಇರುವುದಿಲ್ಲ. ಇದರ ಪರಿಣಾಮವಾಗಿ, ವಾರ್ಷಿಕ ಉತ್ಪಾದನೆಯಲ್ಲಿ 70ರಿಂದ 95 ಕೋಟಿ ರೂ. ಉಳಿತಾಯ ಆಗಲಿದೆ. ಇದು ರಸಗೊಬ್ಬರಗಳ ಅಂತಿಮ ದರವನ್ನು ತಗ್ಗಿಸಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ನಮ್ಮ ಇಂಧನ ಗುಚ್ಛದಲ್ಲಿ ಅನಿಲದ ಪಾಲನ್ನು ಶೇ.6.3ರಿಂದ ಶೇ.15ಕ್ಕೆ ಹೆಚ್ಚಿಸುವ ದೇಶದ ಯೋಜನೆಯ ಇಂಗಿತವನ್ನೂ  ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು.

ಸ್ಥಳೀಯ ನಗರಗಳಿಗೆ ಪ್ರಯೋಜನಗಳನ್ನು ಪಟ್ಟಿಮಾಡಿದ ಪ್ರಧಾನಮಂತ್ರಿಯವರು, ನಾಗಪಟ್ಟಣಂನಲ್ಲಿ ಸಿಪಿಸಿಎಲ್‌. ಹೊಸ ಸಂಸ್ಕರಣಾಗಾರವು ಸುಮಾರು ಶೇ.80ರಷ್ಟು ಸ್ಥಳೀಯ ಸಾಮಗ್ರಿಗಳು ಮತ್ತು ಸೇವೆಗಳ ಮೂಲವನ್ನು ನಿರೀಕ್ಷಿಸುತ್ತದೆ ಎಂದು ಹೇಳಿದರು. ಸಂಸ್ಕರಣಾಗಾರವು ಸಾರಿಗೆ ಸೌಲಭ್ಯಗಳು, ಕೆಳಮಟ್ಟದ ಪೆಟ್ರೋ ರಾಸಾಯನಿಕ ಕೈಗಾರಿಕೆಗಳು ಮತ್ತು ಪ್ರದೇಶದ ಪೂರಕ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಯನ್ನು ಹೆಚ್ಚಿಸಲಿದೆ. ನವೀಕರಿಸಬಹುದಾದ ಇಂಧನ ಮೂಲಗಳ ಪಾಲನ್ನು ಹೆಚ್ಚಿಸುವ ಕುರಿತಂತೆ ಭಾರತದ ಮೇಲಿನ ಒತ್ತಡವನ್ನ ಪ್ರಸ್ತಾಪಿಸಿ, 2030 ವೇಳೆಗೆ ಎಲ್ಲಾ ಇಂಧನದ ಶೇ. 40ರಷ್ಟು ಹಸಿರು ಇಂಧನ ಮೂಲಗಳಿಂದ ಉತ್ಪತ್ತಿಯಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಉದ್ಘಾಟನೆಯಾದ ಮನಾಲಿಯಲ್ಲಿನ ಸಂಸ್ಕರಣಾಗಾರದಲ್ಲಿ ಸಿಪಿಸಿಎಲ್‌. ಹೊಸ ಗ್ಯಾಸೋಲಿನ್ ಡೀಸಲ್ಫ್ಯೂರೈಸೇಶನ್ ಘಟಕ ಹಸಿರಿನ ಭವಿಷ್ಯದ ಮತ್ತೊಂದು ಪ್ರಯತ್ನವಾಗಿದೆ ಎಂದರು.

ಕಳೆದ ಆರು ವರ್ಷಗಳಲ್ಲಿ ತಮಿಳುನಾಡಿನಲ್ಲಿ  50 ಸಾವಿರ ಕೋಟಿ ಮೌಲ್ಯದ ತೈಲ ಮತ್ತು ಅನಿಲ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ ಎಂದರುಇದೇ ಅವಧಿಯಲ್ಲಿ, 2014ಕ್ಕೆ ಮೊದಲು ಮಂಜೂರಾದ 9100 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಇದರ ಜೊತೆಗೆ 4300 ಕೋಟಿ ರೂ. ಮೌಲ್ಯದ ಯೋಜನೆಗಳು ಪ್ರಗತಿಯಲ್ಲಿವೆ ಎಂದರು. ತಮಿಳುನಾಡಿನ ಎಲ್ಲ ಯೋಜನೆಗಳು ಭಾರತದ ಸುಸ್ಥಿರ ಪ್ರಗತಿಗಾಗಿಗ ಜಂಟಿ ಪ್ರಯತ್ನ, ನಮ್ಮ ಸ್ಥಿರವಾದ ನೀತಿ ಮತ್ತು ಉಪಕ್ರಮಗಳ ಫಲವಾಗಿದೆ ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣ ಮುಗಿಸಿದರು.

***