ಕೋಪನ್ ಹೇಗನ್ ನಲ್ಲಿರುವ ತಮ್ಮ ಅಮಾಲಿಯನ್ ಬೋರ್ಗ್ ಅರಮನೆಗೆ ಇಂದು ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಡೆನ್ಮಾರ್ಕ್ ನ ಮಹಾರಾಣಿ ಘನತೆವೆತ್ತ 2ನೇ( II ) ಮಾರ್ಗರೆಥೆ ಅವರು ಸ್ವಾಗತಿಸಿ ಬರಮಾಡಿಕೊಂಡರು.
ಡೆನ್ಮಾರ್ಕ್ ನ ಮಹಾರಾಣಿ ಘನತೆವೆತ್ತ 2ನೇ( II ) ಮಾರ್ಗರೆಥೆ ಅವರು ಡೆನ್ಮಾರ್ಕ್ ನ ಸಿಂಹಾಸನಕ್ಕೆ ಏರಿದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಘನತೆವೆತ್ತ ಮಹಾರಾಣಿ ಅವರನ್ನು ಗೌರವಿಸಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತ – ಡೆನ್ಮಾರ್ಕ್ ಸಂಬಂಧಗಳಲ್ಲಿ ಉತ್ತಮ ಸುಧಾರಣೆ, ಅದರಲ್ಲೂ ವಿಶೇಷವಾಗಿ ಹಸಿರು ಕಾರ್ಯತಂತ್ರದ ಸಹಭಾಗಿತ್ವದ ಕುರಿತು ಪ್ರಧಾನಮಂತ್ರಿ ಅವರು ಮಹಾರಾಣಿ ಅವರಿಗೆ ವಿವರಿಸಿದರು. ಸಾಮಾಜಿಕ ಕಾರ್ಯ- ಕಾರಣಗಳಿಗಾಗಿ ಡ್ಯಾನಿಶ್ ರಾಜಮನೆತನ ಹೊಂದಿರುವ ವಿಶೇಷ ಪಾತ್ರವನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿ ಶ್ಲಾಘಿಸಿದರು.
ತಮಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪ್ರಧಾನಮಂತ್ರಿಯವರು ಫನತೆವೆತ್ತ ಮಹಾರಾಣಿ ಅವರಿಗೆ ಧನ್ಯವಾದ ಹೇಳಿದರು.
***
Met Her Majesty, the Queen of the Kingdom of Denmark, Margrethe II in Copenhagen. pic.twitter.com/YZkS1BJbIH
— Narendra Modi (@narendramodi) May 3, 2022