ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 30.09.2015ರಲ್ಲಿದ್ದಂತೆ ಡಿಸ್ಕಾಂನ ಬಾಕಿ ಸಾಲದ ಶೇ.50ರಷ್ಟನ್ನು ಉದಯ್ (ಉಜ್ವಲ್ ಡಿಸ್ಕಾಂ ಖಾತ್ರಿ ಯೋಜನೆ)-ಡಿಸ್ಕಾಂನ ಕಾರ್ಯಾಚರಣೆ ಮತ್ತು ಹಣಕಾಸು ವಹಿವಾಟಿನ ಒಂದು ಯೋಜನೆ, ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸಾಲಗಳು ಮತ್ತು ರಾಜ್ಯಗಳು ತೆಗೆದುಕೊಳ್ಳಲು ಕಾಲಮಿತಿಯನ್ನು ಹೆಚ್ಚಿಸುವುದಕ್ಕೆ ತನ್ನ ಅನುಮೋದನೆಯನ್ನು ನೀಡಿದೆ. ಈಗ ಕಾಲಮಿತಿಯನ್ನು ಈ ಹಿಂದಿನ ನಿಗದಿತ ಕಾಲಮಿತಿಯಾದ 2016ರ ಮಾರ್ಚ್ 31ರಿಂದ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಿದೆ. ಈ ನಿರ್ಧಾರವು ಉದಯ್ ಯೋಜನೆಯಲ್ಲಿ ಈ ಹಿಂದೆ ಸೇರದ ರಾಜ್ಯಗಳಿಗೆ ಯೋಜನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತದೆ.
ಉದಯ್ ಅಡಿಯಲ್ಲಿ ಯೋಜನೆಗೆ ಸೇರ್ಪಡೆಯಾಗಲು ಈಗಾಗಲೇ 19 ರಾಜ್ಯಗಳು ತಮ್ಮ ಸಮ್ಮತಿ ಸೂಚಿಸಿವೆ, ಆ ಪೈಕಿ 10 ರಾಜ್ಯಗಳು ಅಂದರೆ, ರಾಜಾಸ್ಥಾನ, ಉತ್ತರ ಪ್ರದೇಶ, ಛತ್ತೀಸ್ ಗಢ, ಜಾರ್ಖಂಡ್, ಪಂಜಾಬ್, ಬಿಹಾರ, ಹರಿಯಾಣ, ಗುಜರಾತ್, ಉತ್ತರ ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿವೆ. ಜಾರ್ಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರದ ಸಿ.ಪಿ.ಎಸ್.ಯು.ಗಳ ಸಾಲ ಬಾಕಿ ತೀರಿಸಲು 2015-16ನೇ ಸಾಲಿನಲ್ಲಿ 99,541 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಗಳನ್ನು ಯೋಜನೆಯಲ್ಲಿ ಪಾಲ್ಗೊಳ್ಳುವ ರಾಜ್ಯಗಳು ಬಿಡುಗಡೆ ಮಾಡಿವೆ. ಬಳಿಕ, 11,524 ಕೋಟಿ ರೂಪಾಯಿ ಮೌಲ್ಯದ ಡಿಸ್ಕಾಂ ಬಾಂಡ್ ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು 2016-17ನೇ ಸಾಲಿನಲ್ಲಿ 14,801 ಕೋಟಿ ರೂಪಾಯಿ ಮೌಲ್ಯದ ಬಾಂಡ್ ಗಳನ್ನು ಉತ್ತರ ಪ್ರದೇಶ ರಾಜ್ಯ ಬಿಡುಗಡೆ ಮಾಡುತ್ತಿದೆ.
ಉದಯ್ ವಿದ್ಯುತ್ ಸರಬರಾಜು ಕಂಪನಿಗಳ (ಡಿಸ್ಕಾಂಗಳ) ಆರ್ಥಿಕ ವಹಿವಾಟು ಮತ್ತು ಪುನಶ್ಚೇತನಕ್ಕೆ ಅವಕಾಶ ನೀಡುತ್ತದೆ. ಮತ್ತು ಮುಖ್ಯವಾಗಿ ದೀರ್ಘಕಾಲೀನವಾದ ಈ ಸಮಸ್ಯೆಗೆ ಶಾಶ್ವತ ಮತ್ತು ಸುಸ್ಥಿರ ಪರಿಹಾರದ ಖಾತ್ರಿ ಒದಗಿಸುತ್ತದೆ.
ಉದಯ್ ವಲಯದ ಹಿಂದಿನ ಮತ್ತು ಸಮರ್ಥ ಭವಿಷ್ಯಕ್ಕೆ ಶಾಶ್ವತವಾದ ನಿರ್ಣಯವನ್ನು ಒದಗಿಸುತ್ತದೆ. ಇದು ಡಿಸ್ಕಾಂಗಳಿಗೆ ಮುಂದಿನ 2-3 ವರ್ಷಗಳಲ್ಲಿ ಲಾಭ-ನಷ್ಟ ಸರಿದೂಗಿಸಿಕೊಳ್ಳುವ ಶಕ್ತಿ ನೀಡುತ್ತದೆ. ಇದು ನಾಲ್ಕು ಉಪಕ್ರಮಗಳಲ್ಲಿ ನಡೆಯುತ್ತದೆ (1) ಡಿಸ್ಕಾಂಗಳ ಕಾರ್ಯಾಚರಣೆಯ ಸಾಮರ್ಥ್ಯ ಸುಧಾರಣೆ (2) ವಿದ್ಯುತ್ ವೆಚ್ಚ ತಗ್ಗಿಸುವುದು, (3) 2015ರ ಸೆಪ್ಟೆಂಬರ್ 30ರಲ್ಲಿದ್ದಂತೆ ಡಿಸ್ಕಾಂನ ಸಾಲದ ಪೈಕಿ ಶೇ.75ರಷ್ಟನ್ನು ಎರಡು ವರ್ಷಗಳಲ್ಲಿ ರಾಜ್ಯಗಳು ತೆಗೆದುಕೊಳ್ಳುವ ಮೂಲಕ ಅದರ ಬಡ್ಡಿಯ ಭಾರ ಇಳಿಸುವುದು, ಮತ್ತು ಉಳಿಕೆಯನ್ನು ಬಾಂಡ್ ಹಾಗೂ ಅಲ್ಪ ಬಡ್ಡಿ ದರದ ಸಾಲದ ಮೂಲಕ ಪುನರ್-ದರಗೊಳಿಸುವುದು. (4) ರಾಜ್ಯ ಹಣಕಾಸಿನೊಂದಿಗೆ ಹೊಂದಾಣಿಕೆ ಮಾಡಿ ಡಿಸ್ಕಾಂಗಳಲ್ಲಿ ಆರ್ಥಿಕ ಶಿಸ್ತು ಮೂಡಿಸುವುದು.
ಕಾರ್ಯಾಚರಣೆಯ ಸಾಮರ್ಥ್ಯ ಸುಧಾರಣೆ ಅಂದರೆ ಕಡ್ಡಾಯ ಸ್ಮಾರ್ಟ್ ಸಭೆಗಳು, ಟ್ರಾನ್ಸ್ ಫಾರ್ಮರ್ ಗಳನ್ನು ಮೇಲ್ದರ್ಜೆಗೇರಿಸುವುದು, ಮೀಟರ್ ಇತ್ಯಾದಿ, ಇಂಧನ ದಕ್ಷತೆ ಕ್ರಮಗಳು ಅಂದರೆ ಸಮರ್ಥ ಎಲ್.ಇ.ಡಿ. ಬಲ್ಬ್ ಗಳು, ಕೃಷಿ ಪಂಪ್ ಗಳು, ಫ್ಯಾನ್ ಮತ್ತು ಹವಾನಿಯಂತ್ರಣ ಸಾಧನೆಗಳು ಇತ್ಯಾದಿ. ಇವು ಸರಾಸರಿ ಎಟಿ ಮತ್ತು ಸಿ ನಷ್ಟವನ್ನು ಸುಮಾರು ಶೇ.22ರಿಂದ ಶೇ.15ಕ್ಕೆ ತಗ್ಗಿಸುತ್ತವೆ. ಮತ್ತು ಸರಾಸರಿ ರಿಯಲೈಜ್ ಆದ ಆದಾಯ (ಎಆರ್ ಆರ್) ಮತ್ತು ಸರಾಸರಿ ಸರಬರಾಜು ವೆಚ್ಚ (ಎ.ಸಿ.ಎಸ್.) ನಡುವಿನ ಅಂತರವನ್ನು 2018-19ರ ಹೊತ್ತಿಗೆ ಇಲ್ಲವಾಗಿಸುತ್ತದೆ. ಅಗ್ಗದ ದರದ ಸ್ಥಳೀಯ ಕಲ್ಲಿದ್ದಲು ಸರಬರಾಜು, ಕಲ್ಲಿದ್ದಲು ಸಂಪರ್ಕ ತರ್ಕಬದ್ಧಗೊಳಿಸುವುದು, ಅಸಮರ್ಥ ಸ್ಥಾವರದ ಬದಲಾಗಿ ಸಮರ್ಥ ಸ್ಥಾವರಗಳಿಗೆ ಕಲ್ಲಿದ್ದಲು ವಿನಿಮಯ, ಜಿಸಿವಿ (ನಿವ್ವಳ ಶಾಖೋತ್ಪಾದನೆ ಮೌಲ್ಯ)ದ ಆಧಾರದ ಮೇಲೆ ಕಲ್ಲಿದ್ದಲು ದರ ತರ್ಕಬದ್ಧಗೊಳಿಸುವುದು, ಸ್ವಚ್ಛಗೊಳಿಸಿದ ಮತ್ತು ಪುಡಿ ಮಾಡಿದ ಕಲ್ಲಿದ್ದಲು ಸರಬರಾಜು ಮತ್ತು ಸರಬರಾಜು ಮಾರ್ಗಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲಾಗುತ್ತದೆ.
ಕಾಲಮಿತಿಯ ವಿಸ್ತರಣೆಯ ಈ ಅನುಮೋದನೆಯೊಂದಿಗೆ, ರಾಜ್ಯಗಳು 2015ರ ಸೆಪ್ಟೆಂಬರ್ 30ರಲ್ಲಿದ್ದಂತೆ ಡಿಸ್ಕಾಂನ ಸಾಲ ಬಾಕಿಯ ಶೇಕಡ 75ರಷ್ಟನ್ನು ಬಾಂಡ್ ಬಿಡುಗಡೆ ಮಾಡುವ ಮೂಲಕ 2017ರ ಮಾರ್ಚ್ 31ರವರೆಗೆ ಪಡೆಯಬಹುದಾಗಿದೆ, ಇದು ಸಾಲದ ಮೇಲಿನ ಬಡ್ಡಿಯ ಹೊರೆಯನ್ನು ಕಡಿಮೆ ಮಾಡುವ ಮಧ್ಯಪ್ರವೇಶವಾಗಿದೆ. ಈ ಅನುಮೋದನೆಯಿಂದ ಈವರೆಗೆ ಉದಯ್ ನಲ್ಲಿ ಸೇರ್ಪಡೆಯಾಗದ ರಾಜ್ಯಗಳಿಗೆ ಮತ್ತೊಂದು ಅವಕಾಶ ಲಭಿಸಲಿದೆ ಮತ್ತು ಡಿಸ್ಕಾಂ ಸುಧಾರಣೆ ಪರ್ಯಾಯಪಥದಲ್ಲಿ ಸಾಗಲಿದೆ.