Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಿಸೆಂಬರ್ 26 ರಂದು ‘ವೀರ್ ಬಾಲ್ ದಿವಸ್ʼಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ


ನವದೆಹಲಿಯ ಭಾರತ್ ಮಂಟಪದಲ್ಲಿ 2023 ರ ಡಿಸೆಂಬರ್ 26 ರಂದು ಬೆಳಿಗ್ಗೆ 10:30 ಕ್ಕೆ ನಡೆಯಲಿರುವ ‘ವೀರ್ ಬಾಲ್ ದಿವಸ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ದೆಹಲಿಯಲ್ಲಿ ಯುವಕರಿಂದ ಪಥಸಂಚಲನಕ್ಕೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ.

ಸಾಹಿಬ್ಜಾಡೆಗಳ ಮಾದರಿ ಧೈರ್ಯದ ಕಥೆಯನ್ನು ನಾಗರಿಕರಿಗೆ, ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಅರಿವು ಮೂಡಿಸಲು ಮತ್ತು ಶಿಕ್ಷಣ ನೀಡಲು ಸರ್ಕಾರವು ದೇಶದಾದ್ಯಂತ ಮಕ್ಕಳು ಭಾಗವಹಿಸುವ ಕಾರ್ಯಕ್ರಮಗಳನ್ನು ಈ ದಿನದಂದು ಆಯೋಜಿಸುತ್ತಿದೆ. ದೇಶಾದ್ಯಂತ ಶಾಲೆಗಳು ಮತ್ತು ಶಿಶುಪಾಲನಾ ಸಂಸ್ಥೆಗಳಲ್ಲಿ ಸಾಹಿಬ್ಜಾಡೆಗಳ ಜೀವನ ಕಥೆ ಮತ್ತು ತ್ಯಾಗವನ್ನು ವಿವರಿಸುವ ಡಿಜಿಟಲ್ ಪ್ರದರ್ಶನವನ್ನು ಪ್ರದರ್ಶಿಸಲಾಗುತ್ತದೆ. ‘ವೀರ್ ಬಾಲ್ ದಿವಸ್’ ಕುರಿತಾದ ಚಿತ್ರವೂ ರಾಷ್ಟ್ರವ್ಯಾಪಿ ಪ್ರದರ್ಶನಗೊಳ್ಳಲಿದೆ. ಅಲ್ಲದೆ, ಮೈಭಾರತ ಮತ್ತು ಮೈಗೌ ಪೋರ್ಟಲ್ಗಳ ಮೂಲಕ ಆಯೋಜಿಸಲಾಗುವ ಸಂವಾದಾತ್ಮಕ ರಸಪ್ರಶ್ನೆಗಳಂತಹ ವಿವಿಧ ಆನ್ಲೈನ್ ಸ್ಪರ್ಧೆಗಳು ಈ ದಿನದಿಂದ ಇರುತ್ತವೆ.

ಶ್ರೀ ಗುರು ಗೋವಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್ಜಾದಾಸ್ ಬಾಬಾ ಜೋರಾವರ್ ಸಿಂಗ್ ಜಿ ಮತ್ತು ಬಾಬಾ ಫತೇ ಸಿಂಗ್ ಜಿ ಅವರ ಹುತಾತ್ಮರ ನೆನಪಿಗಾಗಿ ಡಿಸೆಂಬರ್ 26 ಅನ್ನು ‘ವೀರ್ ಬಾಲ್ ದಿವಸ್’ ಎಂದು ಆಚರಿಸಲಾಗುವುದು ಎಂದು ಶ್ರೀ ಗುರು ಗೋವಿಂದ್ ಸಿಂಗ್ ಅವರ ಜನ್ಮ ದಿನವಾದ ಪ್ರಕಾಶ್ ಪುರಬ್ ದಿನದಂದು (9 ಜನವರಿ 2022 ರಂದು)  ಪ್ರಧಾನಮಂತ್ರಿ ಅವರು ಘೋಷಿಸಿದರು.

***