Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಿಸೆಂಬರ್ 2022 ರಲ್ಲಿ ಭಾರತವು 12.8 ಲಕ್ಷ ಕೋಟಿ ರೂ. ಮೌಲ್ಯದ 782 ಕೋಟಿ ಯುಪಿಐ ವಹಿವಾಟುಗಳ ಮೈಲಿಗಲ್ಲನ್ನು ತಲುಪಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ‘ಯುಪಿಐ’ ಪಾವತಿಗಳ  ಜನಪ್ರಿಯತೆಯ ಬಗ್ಗೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದ್ದಾರೆ


2022ರ ಡಿಸೆಂಬರ್‌ನಲ್ಲಿ  ಭಾರತವು 12.8 ಲಕ್ಷ ಕೋಟಿ ರೂ. ಮೌಲ್ಯದ 782 ಕೋಟಿ ‘ಯುಪಿಐ’ ವಹಿವಾಟುಗಳ ಮೈಲಿಗಲ್ಲನ್ನು ದಾಖಲಿಸಿರುವ ಹಿನ್ನೆಲೆಯಲ್ಲಿ, ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಸಹ ಭಾರತೀಯರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಫಿನ್ಟೆಕ್ ತಜ್ಞರ ಟ್ವೀಟ್  ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿಯವರು ಈ ಕುರಿತು ಹೀಗೆ ಟ್ವೀಟ್ ಮಾಡಿದ್ದಾರೆ:

“ಯುಪಿಐನ ಜನಪ್ರಿಯತೆಯನ್ನು ನೀವು ಹೆಚ್ಚಿಸಿರುವ ಪರಿಯನ್ನು ನಾನು ಇಷ್ಟಪಡುತ್ತೇನೆ. ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಿದ್ದಕ್ಕಾಗಿ ನಾನು ನನ್ನ ಸಹ ಭಾರತೀಯರನ್ನು ಶ್ಲಾಘಿಸುತ್ತೇನೆ! ಅವರು ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಗಮನಾರ್ಹ ಹೊಂದಾಣಿಕೆಯನ್ನು ತೋರಿಸಿದ್ದಾರೆ.” 

*****