Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಿಸೆಂಬರ್ 17 ರಂದು ರಾಜಸ್ಥಾನಕ್ಕೆ ಪ್ರಧಾನಮಂತ್ರಿ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 17ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅವರು ರಾಜಸ್ಥಾನ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ‘ಏಕ ವರ್ಷ-ಪರಿಣಾಮ ಉತ್ಕರ್ಷ್‌’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಪ್ರಧಾನಿ ಅವರು ರಾಜಸ್ಥಾನದ ಜೈಪುರದಲ್ಲಿ ಸುಮಾರು 46,300 ಕೋಟಿ ರೂ. ಮೌಲ್ಯದ ಇಂಧನ, ರಸ್ತೆ, ರೈಲ್ವೆ ಮತ್ತು ನೀರಿಗೆ ಸಂಬಂಧಿಸಿದ 24 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅಲ್ಲದೆ, ಪ್ರಧಾನಮಂತ್ರಿ ಅವರು 7 ಕೇಂದ್ರ ಸರ್ಕಾರದ ಯೋಜನೆಗಳು ಮತ್ತು 2 ರಾಜ್ಯ ಸರ್ಕಾರದ ಯೋಜನೆಗಳನ್ನು ಒಳಗೊಂಡಂತೆ 11,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 9 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು 9 ಕೇಂದ್ರ ಸರ್ಕಾರದ ಯೋಜನೆಗಳು ಮತ್ತು 6 ರಾಜ್ಯ ಸರ್ಕಾರದ ಯೋಜನೆಗಳನ್ನು ಒಳಗೊಂಡಂತೆ 35,300 ಕೋಟಿ ರೂಪಾಯಿ ಮೌಲ್ಯದ 15 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉದ್ಘಾಟನೆಯಾಗಲಿರುವ ಯೋಜನೆಗಳಲ್ಲಿ ನವನೇರಾ ಬ್ಯಾರೇಜ್, ಸ್ಮಾರ್ಟ್ ವಿದ್ಯುತ್ ಪ್ರಸರಣಾ ಜಾಲ ಮತ್ತು ಆಸ್ತಿ ನಿರ್ವಹಣಾ ವ್ಯವಸ್ಥೆಯ ಯೋಜನೆಗಳು, ಭಿಲ್ದಿ- ಸಮ್ದಾರಿ-ಲುನಿ- ಜೋಧ್‌ಪುರ-ಮೆರ್ಟಾ ರಸ್ತೆ-ದೇಗಾನಾ-ರತನ್‌ಗಢ್ ವಿಭಾಗದ ರೈಲ್ವೆ ವಿದ್ಯುದ್ದೀಕರಣ ಮತ್ತು ಪ್ಯಾಕೇಜ್ 12ರಡಿ ಬರುವ ದೆಹಲಿ-ವಡೋದರಾ ಗ್ರೀನ್ ಫೀಲ್ಡ್ ಅಲೈನ್‌ಮೆಂಟ್‌ನ ( NH-148N) (ಮೇಜ್ ನದಿಯ ಮೇಲೆ ರಾಜ್ಯ ಹೆದ್ದಾರಿ 37ಎ ಜಂಕ್ಷನ್ ವರೆಗೆ ಪ್ರಮುಖ ಸೇತುವೆ) ಸೇರಿವೆ. ಈ ಯೋಜನೆಗಳು ಜನರಿಗೆ ಸುಲಭ ಪ್ರಯಾಣವನ್ನು ಒದಗಿಸಲು ಮತ್ತು ಪ್ರಧಾನಮಂತ್ರಿಯವರ ಹಸಿರು ಶಕ್ತಿಯ ದೂರದೃಷ್ಟಿಗೆ ಅನುಗುಣವಾಗಿ ರಾಜ್ಯದ ಇಂಧನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತವೆ.

ಪ್ರಧಾನಿ ಅವರು ಸುಮಾರು 9,400 ಕೋಟಿಗೂ ಅಧಿಕ ವೆಚ್ಚದ ರಾಮಗಢ ಬ್ಯಾರೇಜ್ ಮತ್ತು ಮಹಲ್ಪುರ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಮತ್ತು ನವನೇರಾ ಬ್ಯಾರೇಜ್‌ನಿಂದ ಬಿಸಲ್‌ಪುರ ಅಣೆಕಟ್ಟು ಮತ್ತು ಇಸರ್ದಾ ಅಣೆಕಟ್ಟಿಗೆ ಚಂಬಲ್ ನದಿಯ ಅಕ್ವೆಡೆಕ್ಟ್ ಮೂಲಕ ನೀರನ್ನು ವರ್ಗಾಯಿಸುವ ವ್ಯವಸ್ಥೆಗೆ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.

ಅಲ್ಲದೆ, ಪ್ರಧಾನಮಂತ್ರಿ ಅವರು ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಸೌರ ಮೇಲ್ಛಾವಣಿ ಸ್ಥಾವರಗಳ ಅಳವಡಿಕೆ, 2000 ಮೆಗಾವ್ಯಾಟ್ ಸೋಲಾರ್ ಪಾರ್ಕ್ ಮತ್ತು ಪೂಗಲ್ (ಬಿಕಾನೇರ್) ನಲ್ಲಿ 1000 ಮೆಗಾವ್ಯಾಟ್ ಸೌರ ಪಾರ್ಕ್ ಗಳ ಎರಡು ಹಂತಗಳ ಅಭಿವೃದ್ಧಿ ಮತ್ತು ಸೈಪೌ (ಧೋಲ್ಪುರ್) ನಿಂದ ಭರತ್‌ಪುರ್-ದೀಗ್-ಕುಮ್ಹೇರ್-ನಗರ-ಕಮಾನ್ ಮತ್ತು ಪಹಾರಿ ವರೆಗೆ ಕುಡಿಯುವ ನೀರಿನ ಪ್ರಸರಣ ಮಾರ್ಗ, ಮತ್ತು ಚಂಬಲ್-ಧೋಲ್‌ಪುರ್-ಭರತ್‌ಪುರ್ ರೆಟ್ರೋಫಿಟ್ಟಿಂಗ್ ಕೆಲಸಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಲುನಿ-ಸಮ್ದಾರಿ-ಭಿಲ್ಡಿ ಡಬಲ್ ಲೈನ್, ಅಜ್ಮೀರ್-ಚಂದೇರಿಯಾ ಜೋಡಿ ಮಾರ್ಗ ಮತ್ತು ಜೈಪುರ-ಸವಾಯಿ ಮಾಧೋಪುರ್  ರೈಲ್ವೆ ಜೋಡಿ ಮಾರ್ಗ ಯೋಜನೆ ಮತ್ತು ಇತರ ಇಂಧನ ಪ್ರಸರಣ ಸಂಬಂಧಿತ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ.

 

*****