ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ, ಅರೆವಾಹಕ ಮತ್ತು ವಿದ್ಯುನ್ಮಾನ ಸಾಧನಗಳ ಉತ್ಪಾದನೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಾ, ಭಾರತ ತನ್ನ ಡಿಜಿಟಲ್ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಬರೆದಿರುವ ಲೇಖನವನ್ನು ಎಲ್ಲರೂ ಓದುವಂತೆ ಮಾಡಿರುವ ಮನವಿಯು ಪ್ರಧಾನಮಂತ್ರಿಗಳ ಕಚೇರಿಯ ಎಕ್ಸ್ ಪೋಸ್ಟ್ ನಲ್ಲಿ ಹೀಗಿದೆ:
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ), ಕೃತಕ ಬುದ್ಧಿಮತ್ತೆ (ಎಐ), ಅರೆವಾಹಕಗಳು (ಸೆಮಿಕಂಡಕ್ಟರ್) ಮತ್ತು ವಿದ್ಯುನ್ಮಾನ ಸಾಧನ (ಎಲೆಕ್ಟ್ರಾನಿಕ್ಸ್) ಗಳ ಉತ್ಪಾದನೆಯ ಮೇಲೆ ಆದ್ಯತೆಯ ಗಮನ ಹರಿಸುತ್ತಾ ಭಾರತವು ತನ್ನ ಡಿಜಿಟಲ್ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬ ಬಗ್ಗೆ ಕೇಂದ್ರ ಸಚಿವರಾದ ಶ್ರೀ @AshwiniVaishnaw ಅವರು ಸವಿಸ್ತಾರವಾಗಿ ತಿಳಿಸಿದ್ದಾರೆ. ನೀವೂ ಓದಿ!
*****
Union Minister Shri @AshwiniVaishnaw elaborates on how India is shaping its digital future with a strong focus on Digital Public Infrastructure (DPI), AI, semiconductor and electronics manufacturing. Do read! pic.twitter.com/wR7Va4n1ib
— PMO India (@PMOIndia) March 6, 2025