Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಿಜಿಟಲ್ ಇಂಡಿಯಾದ ಫಲಾನುಭವಿಗಳೊಡನೆ ಪ್ರಧಾನ ಮಂತ್ರಿ ಅವರು ನಡೆಸಿದ ಸಂವಾದ


ಕಳೆದ ಕೆಲವು ದಿನಗಳಿಂದ ಸರ್ಕಾರದ ನಾನಾ ಯೋಜನೆಗಳ ಫಲಾನುಭವಿಗಳ ಜೊತೆಗೆ ಸಂವಾದ ನಡೆಸುವ ಅವಕಾಶ ನನಗೆ ಸಿಕ್ಕಿದ್ದು, ಅವರ ಮಾತನ್ನು ಆಲಿಸಿದ್ದೇನೆ. ಇದು ನನಗೊಂದು ಅದ್ಭುತ ಅನುಭವ ನೀಡಿದೆ. ಕಡತಗಳಿಗೆ ಹೊರತಾದ ಬದುಕು ಇದೆ ಎಂಬುದನ್ನು ನಾನು ನಂಬುತ್ತೇನೆ. ಈ ಯೋಜನೆಗಳು ಫಲಾನುಭವಿಗಳ ಬದುಕಿನಲ್ಲಿ ತಂದ ಬದಲಾವಣೆಗಳನ್ನು ಹಾಗೂ ಅವರೆಲ್ಲರ ಅನುಭವಗಳನ್ನು ಕೇಳಿ, ನನ್ನ ಹೃದಯ ತುಂಬಿ ಬಂದಿತು. ನನ್ನ ಕೆಲಸವನ್ನು ಮುಂದುವರಿಸಲು ನೀವು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬಿದ್ದೀರಿ. ಇಂದು ಡಿಜಿಟಲ್ ಇಂಡಿಯಾ ಯೋಜನೆಯ ಫಲಾನುಭವಿಗಳ ಜೊತೆಗೆ ಸಂವಾದ

ನಡೆಸುವ ಅವಕಾಶ ನನಗೆ ಸಿಕ್ಕಿದೆ.

ಇಂದಿನ ಕಾರ್ಯಕ್ರಮದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ದೇಶದ 3 ಲಕ್ಷ ಬಡಜನರ ಜೊತೆಗೆ ಸಂವಾದ ನಡೆಸಲು ಸಾಧ್ಯವಾಯಿತು ಎಂದು ನನಗೆ ತಿಳಿಸಲಾಗಿದೆ. ಈ ಸಿಎಸ್ಸಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು ನಿರ್ವಹಿಸುತ್ತಿರುವ ವಿಎಲ್ಇಗಳು ಮತ್ತು ಈ ಸೇವೆಗಳನ್ನು ಪಡೆದುಕೊ ಳ್ಳುತ್ತಿರುವ ಜನರು ಇಲ್ಲಿ ಉಪಸ್ಥಿತರಿದ್ದಾರೆ. ಜತೆಗೆ, ಎನ್ಐಸಿ ಮೂಲಕ ಡಿಜಿಟಲ್ ಇಂಡಿಯಾದ ಪ್ರಯೋಜನ ಪಡೆಯುತ್ತಿರುವವರು ಕೂಡ ಇಲ್ಲಿದ್ದಾರೆ. ಎನ್ಕೆಎನ್, ರಾಷ್ಟ್ರೀಯ ಜ್ಞಾನ ಕಾರ್ಯಜಾಲದೊಡನೆ ಸಂಪರ್ಕ ಹೊಂದಿರುವ 1600ಕ್ಕೂ ಹೆಚ್ಚು ಸಂಸ್ಥೆಗಳು ಮತ್ತು ಅವುಗಳ ವಿದ್ಯಾರ್ಥಿಗಳು,ಸಂಶೋಧಕರು, ವಿಜ್ಞಾನಿಗಳು ಮತ್ತು ಅಧ್ಯಾಪಕರುಗಳು ಕೂಡ ಇಲ್ಲಿದ್ದಾರೆ. ಸರ್ಕಾರದ ಯೋಜನೆಗಳ ಮೂಲಕ ದೇಶದೆಲ್ಲೆಡೆ ಆರಂಭವಾಗಿರುವ ಬಿಪಿಒಗಳ ಉದ್ಯೋಗಿಗಳೂ ಇಲ್ಲಿದ್ದಾರೆ. ಇಷ್ಟಲ್ಲದೆ, ಮೊಬೈಲ್ ಉತ್ಪಾದನೆ ಘಟಕಗಳ ನೌಕರರು ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದು, ತಮ್ಮ ಘಟಕಗಳನ್ನು ನಮಗೆ ತೋರಿಸಲಿದ್ದಾರೆ.

ದೇಶದೆಲ್ಲೆಡೆಯಿಂದ ಲಕ್ಷಾಂತರ ಮೈಗೌ ಸ್ವಯಂಸೇವಾಕರ್ತರು ನಮ್ಮ ಜೊತೆಗೆ ಕೂಡಿಕೊಂಡಿದ್ದಾರೆ. ಏಕೈಕ ವಿಷಯದ ಕುರಿತು ನಡೆಯುತ್ತಿರುವ ಸಂವಾದದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿರುವುದು ಒಂದು ವಿಶಿಷ್ಟ ಅನುಭವ ಎಂದು ನಾನು ಭಾವಿಸಿದ್ದೇನೆ. ಜನರ ಅನುಭವಗಳನ್ನು ಆಲಿಸುವ ಹಾಗೂ ಅವರೊಂದಿಗೆ ಒಡನಾಡುವ ಇದೊಂದು ವಿಶಿಷ್ಟ ಸಂದರ್ಭವಾಗಿದೆ.

ಡಿಜಿಟಲ್ ಇಂಡಿಯಾವನ್ನು ಆರಂಭಿಸಲು ಇದ್ದ ಏಕೈಕ ಉದ್ದೇಶವೆಂದರೆ, ಜನಸಾಮಾನ್ಯರು, ಬಡವರು, ರೈತರು, ಯುವಜನ ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿ, ಅವರನ್ನು ಸಬಲಗೊಳಿಸುವುದು. ಕಳೆದ ನಾಲ್ಕು ವರ್ಷದಲ್ಲಿ ನಾವು ಒಂದೇ ಗುರಿ ಮೇಲೆ ಗಮನವಿರಿಸಿದ್ದು, ಗ್ರಾಮಗಳನ್ನು  ಆಪ್ಟಿಕಲ್ಫೈಬರ್ ಕಾರ್ಯಜಾಲದ ಮೂಲಕ ಸಂಪರ್ಕಿಸುವುದು, ಕೋಟ್ಯಂತರ ಜನರನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡುವುದು, ಮೊಬೈಲ್ ಫೋನ್ಗಳ ಮೂಲಕ ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು, ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಅಭಿವೃದ್ಧಿಗೊಳಿಸುವುದು, ಸ್ಟಾರ್ಟ್ ಅಪ್ ಇಲ್ಲವೇ ದೂರಪ್ರದೇಶಗಳಲ್ಲಿ ಬಿಪಿಒಗಳನ್ನು ತೆರೆಯಲು ಪ್ರಚಾರಾಂದೋಲನ ಸೇರಿದಂತೆ ಡಿಜಿಟಲ್ ಇಂಡಿಯಾದ ಎಲ್ಲ ಆಯಾಮಗಳಲ್ಲೂ ಕೆಲಸ ಮಾಡಿದ್ದೇವೆ. ಇಂಥ ಹಲವು ಉಪಕ್ರಮಗಳಿವೆ. ಇಂದು ಹಿರಿಯ ನಾಗರಿಕರು ತಮ್ಮ ಪಿಂಚಣಿಯನ್ನು ಪಡೆಯಲು ಕೊಡಬೇಕಾದ ಅನುಮತಿಪತ್ರವನ್ನು ಪಡೆಯಲು ಹೆಚ್ಚು ದೂರ ಪ್ರಯಾಣಿಸಬೇಕಿಲ್ಲ. ಅವರು ತಮ್ಮ ಗ್ರಾಮದಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳಿಗೆ ಹೋಗಿ, ತಮ್ಮ ಕೆಲಸ ಮಾಡಿಸಿಕೊಳ್ಳ ಬಹುದು. ರೈತರು ಹವಾಮಾನ ಪರಿಸ್ಥಿತಿ, ಬೆಳೆಗಳು, ಮಣ್ಣು ಇನ್ನಿತರ ಮಾಹಿತಿಗಳನ್ನು ಪಡೆಯಬಹುದಲ್ಲದೆ, ತಮ್ಮ ಮೊಬೈಲ್ ಇಲ್ಲವೇ ಸಿಎಸ್ಸಿ ಮೂಲಕ ಇ-ನಾಮ್, ಡಿಜಿಟಲ್ ಮಾರುಕಟ್ಟೆಯ ನೆರವಿನಿಂದ ತಮ್ಮ ಉತ್ಪನ್ನಗಳನ್ನು ದೇಶದೆಲ್ಲೆಡೆ ಮಾರಬಹುದು.

ಇಂದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಶಾಲೆ ಇಲ್ಲವೇ ಕಾಲೇಜಿನಲ್ಲಿ ಲಭ್ಯವಿರುವ ಪುಸ್ತಕಗಳಿಗೆ ಸೀಮಿತವಾಗಿಲ್ಲ. ಅವರು ಡಿಜಿಟಲ್ ಗ್ರಂಥಾಲಯದ ಮೂಲಕ ಆನ್ಲೈನ್ನಲ್ಲಿ ಲಕ್ಷಾಂತರ ಪುಸ್ತಕಗಳನ್ನು ವಾಚಿಸಬಹುದು. ತಮ್ಮ ವಿದ್ಯಾರ್ಥಿವೇತನಕ್ಕಾಗಿ  ಶಾಲೆಗಳ ಯೋಜನಾ ವ್ಯವಸ್ಥೆಯನ್ನು ಅವರು ಆಧರಿಸ ಬೇಕಾಗಿಲ್ಲ. ಅವರ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಜಮೆಯಾಗುತ್ತದೆ. ಇದೆಲ್ಲವೂ ಸಾಧ್ಯವಾಗಿರುವುದು ತಂತ್ರಜ್ಞಾನ ಹಾಗೂ ಸಂವಹನ ಕ್ರಾಂತಿಯಿಂದಾಗಿ. ಕೆಲವು ವರ್ಷಗಳ ಹಿಂದೆ ಸಣ್ಣ ನಗರಗಳು ಹಾಗೂ ಗ್ರಾಮಗಳವರು ರೈಲ್ವೆ ನಿಲ್ದಾಣಗಳಲ್ಲಿ ಹಲವು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಲ್ಲದೆ ಟಿಕೆಟ್ ಪಡೆಯುವುದು ಅಥವಾ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡದೆ ಎಲ್ಪಿಜಿ ಸಿಲಿಂಡರ್ ಪಡೆಯುವುದು ಅಥವಾ ವಿದ್ಯುತ್, ನೀರಿನ ಬಿಲ್ ಮತ್ತು ತೆರಿಗೆಯನ್ನು ಸರ್ಕಾರಿ ಕಚೇರಿಗೆ ತೆರಳದೆ ಪಾವತಿಸುವುದು ಸಾಧ್ಯವೇ ಇರಲಿಲ್ಲ. ಆದರೆ, ಇಂದು ಈ ಎಲ್ಲ ಕೆಲಸಗಳನ್ನು ಒಂದೇ ಒಂದು ಕ್ಲಿಕ್ನಲ್ಲಿ ಮಾಡಬಹುದಾಗಿದೆ. ಇದು ಕೆಲವರಿಗೆ ಮಾತ್ರ ಸೀಮಿತವಲ್ಲದ, ಸಮಾಜದ ಎಲ್ಲ ವರ್ಗದವರಿಗೂ ಲಭ್ಯವಿರುವಂಥದ್ದಾಗಿದೆ. ದೇಶದೆಲ್ಲೆಡೆ ಇರುವ ಸಾಮಾನ್ಯ ಸೇವಾ ಕೇಂದ್ರ(ಸಿಎಸ್ಸಿ)ಗಳಿಗೆ ಶಕ್ತಿ ತುಂಬುವ ಮೂಲಕ ಎಲ್ಲ ನಾಗರಿಕರು ಮನೆಗಳ ಸಮೀಪದಲ್ಲೇ ಗರಿಷ್ಠ ಸೇವೆಗಳನ್ನು ಪಡೆದುಕೊಳ್ಳುವುದನ್ನು ಖಾತ್ರಿಗೊಳಿಸಲಾಗುತ್ತಿದೆ.

ಈವರೆಗೆ ದೇಶದಲ್ಲಿ 3 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಭಾರಿ ಎನ್ನಬಹುದಾದ ಡಿಜಿಟಲ್ ಸೇವೆ ವಿತರಣೆ ಕೇಂದ್ರಗಳ ಜಾಲವು 1.83 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಪಿಸಿದೆ. ಇಂದು ಗ್ರಾಮಗಳಲ್ಲಿ ಲಕ್ಷಾಂತರ ಯುವ ಜನರು ಗ್ರಾಮ ಮಟ್ಟದ ಉದ್ಯಮಿ(ವಿಎಲ್ಇ)ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 52 ಸಾವಿರ ಮಂದಿ ಮಹಿಳೆಯರು ಎನ್ನುವುದು ಸಂತಸದ ವಿಷಯ.

ಈ ಕೇಂದ್ರಗಳು 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿವೆ. ಒಟ್ಟರ್ಥದಲ್ಲಿ ಹೇಳಬೇಕೆಂದರೆ, ಇವು ಸಬಲೀಕರಣದ ಕೇಂದ್ರಗಳು ಮಾತ್ರವಲ್ಲದೆ, ಶಿಕ್ಷಣ, ಉದ್ಯಮಶೀಲತೆ ಹಾಗೂ ಉದ್ಯೋಗವನ್ನು ಕೂಡ ಉತ್ತೇಜಿಸಿವೆ. ಮೈಗೌ ವೇದಿಕೆ ಮೂಲಕ 60 ಲಕ್ಷ ಸೇವಾಕರ್ತರು ಸಂಪರ್ಕದಲ್ಲಿದ್ದಾರೆ. ಒಂದರ್ಥದಲ್ಲಿ ಇದು ನಾಗರಿಕ ಕೇಂದ್ರಿತ ಸರ್ಕಾರವಾಗಿದೆ. ಸಲಹೆಗಳು ಹಾಗೂ ಆಲೋಚನೆಗಳನ್ನು ನೀಡುವುದು ಮಾತ್ರವಲ್ಲದೆ, ಭಾರಿ ಪ್ರಮಾಣದಲ್ಲಿ ಯುವಜನರು ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ನಾನಾ ಮಂತ್ರಾಲಯಗಳಿಗೆ ಸಾರ್ವಜನಿಕರ ಸಲಹೆಗಳನ್ನು ತಲುಪಿಸಲು, ಅವುಗಳ ಅನುಷ್ಠಾನದ ಸಾಧ್ಯತೆ ಮತ್ತು ಯುವಜನರನ್ನು ಒಟ್ಟುಗೂಡಿಸಲು  ಮೈಗೌ ಒಂದು ಪ್ರಭಾವಶಾಲಿ ವೇದಿಕೆಯಾಗಿ ಪರಿಣಮಿಸಿದೆ. ಜನರು ತಾವೇ ಮುಂದಾಗಿ ನೆರವು ನೀಡಿದ ಹಲವು ಉದಾಹರಣೆಗಳನ್ನು ನಾನು ಹೇಳಲು ಇಷ್ಟಪಡುತ್ತೇನೆ. ಈ ಸ್ವಯಂಸೇವಕರು ಸಂಗ್ರಹಿಸಿದ ಸಲಹೆಗಳನ್ನು ಕೇಂದ್ರ ಸರ್ಕಾರವು ಪ್ರತಿವರ್ಷದ ಬಜೆಟ್ನಲ್ಲಿ ಒಟ್ಟುಗೂಡಿಸುತ್ತದೆ. ಸ್ವಚ್ಛ ಬಾರತ ಆಂದೋಲನ, ಜನ ಧನ ಯೋಜನೆ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳ ಚಿನ್ಹೆ ಹಾಗೂ ಘೋಷಣೆಗಳನ್ನು ಮೈಗೌ ಮೂಲಕ ಜನರು ನೀಡಿದ ಸಲಹೆಗಳನ್ನು ಆಧರಿಸಿ ರೂಪಿಸಲಾಗಿದೆ. ಸರ್ಕಾರವು ಇದಕ್ಕಾಗಿ ತನ್ನ ಸಮಯವನ್ನು ಬಳಸಿಲ್ಲ. ಸರ್ಕಾರ ಈ ವೇದಿಕೆಯನ್ನು ಸಾರ್ವಜನಿಕರ ಸಹಭಾಗಿತ್ವದಿಂದ ರೂಪಿಸಿದ್ದು, ಸಾಮೂಹಿಕ ಮೂಲಗಳಿಗೆ ಹೋಲಿಸಿದರೆ ಒಂದು ಹೆಜ್ಜೆ ಮುಂದೆ ಇಟ್ಟಂತೆ ಆಗಿರಲಿದೆ.

ದೇಶದ ಎಲ್ಲ ಮೂಲಗಳಿಂದ ಜನರು ತಮ್ಮ ಸಲಹೆಗಳನ್ನು ನನಗೆ ಕಳುಹಿಸುತ್ತಿದ್ದು, ಪ್ರತಿ ತಿಂಗಳು “ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮೈಗೌ ವೇದಿಕೆಯ ಸ್ಫೂರ್ತಿದಾಯಕ ಕಥನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂದು ಡಿಜಿಟಲ್ ಇಂಡಿಯಾ ಕೋಟ್ಯಂತರ ಜನರ ಬದುಕನ್ನು ಬದಲಿಸಿದೆ. ಡಿಜಿಟಲ್  ಇಂಡಿಯ  4 ಇ ಅಂದರೆ, ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ ಹಾಗೂ ಸಬಲೀಕರಣದಲ್ಲಿ ಯಶಸ್ವಿಯಾಗಿದೆ. ಡಿಜಿಟಲ್ ಇಂಡಿಯಾವು ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸಲಿದೆ ಎನ್ನುವುದು ನನ್ನ ಅಭಿಪ್ರಾಯ. ಈ ನಿರೀಕ್ಷೆಯಿಂದ ನಾನು ಎಲ್ಲರಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಆದರೆ, ನಿಮ್ಮೆಲ್ಲರಲ್ಲೂ ನನ್ನ ಮನವಿಯೊಂದಿದೆ. ಸಾಮಾನ್ಯ ಸೇವಾ ಕೇಂದ್ರಗಳ ಸಿಬ್ಬಂದಿ ಮೇಲೆ ನಾನು ಬಹಳ ನಿರೀಕ್ಷೆ ಇರಿಸಿಕೊಂಡಿದ್ದೇನೆ. ಅವರು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಅದನ್ನು ನಾನು ಪರದೆಯಲ್ಲಿ ನೋಡುತ್ತಿದ್ದೇನೆ. ಸಾಮಾನ್ಯ ಸೇವಾ ಕೇಂದ್ರಗಳ ಸಿಬ್ಬಂದಿ ತಮ್ಮ ಕೈಗಳನ್ನು ಎತ್ತ ಬಹುದೇ? ನೀವು ನನಗೊಂದು ಉಪಕಾರ ಮಾಡಬಹುದೇ? ದಯವಿಟ್ಟು ನಿಮ್ಮ ಕೈಗಳನ್ನು ಮೇಲೆತ್ತಿ ಮತ್ತು ನನಗೆ ನೆರವು ನೀಡುವಿರಾ? ಇದರರ್ಥ ನಾನು ಬಿಪಿಒ ಉದ್ಯೋಗಿಗಳನ್ನು ಕೇಳುತ್ತಿಲ್ಲ ಎಂದರ್ಥವಲ್ಲ.

ನನಗೆ ಹೇಳಲು ಬಿಡಿ. ಬರೆದಿಟ್ಟುಕೊಳ್ಳಿ: ದಿನಾಂಕ ಜೂನ್ 20, ಸಮಯ ಮುಂಜಾನೆ 9.30ಕ್ಕೆ ನಾನು ರೈತರೊಂದಿಗೆ ಸಂವಾದ ನಡೆಸುತ್ತೇನೆ. ರೈತ ಸೋದರರು ಹಾಗೂ ಸೋದರಿಯರೊಂದಿಗೆ ಮಾತನ್ನಾಡುತ್ತೇನೆ. ನೀವು ನನಗೊಂದು ಸಹಾಯ ಮಾಡಬಹುದೇ? ಸಾಮಾನ್ಯ ಸೇವಾ ಕೇಂದ್ರದಲ್ಲಿ 10-20 ಮಂದಿ ಇದ್ದು, 20ನೇ ತಾರೀಕಿನಂದು 50-100 ರೈತರನ್ನು ಸೇವಾ ಕೇಂದ್ರಗಳಿಗೆ ಕರೆತರಲು ಸಾಧ್ಯವೇ? ನಾನು ಅವರೊಂದಿಗೆ ಮಾತನ್ನಾಡಲು ಇಚ್ಛಿಸುತ್ತೇನೆ. ಈ ಕೆಲಸ ಮಾಡಲು ಸಿದ್ಧವಿರುವವರು ತಮ್ಮ ಕೈಯನ್ನು ಮೇಲೆತ್ತಿ. ನಾವು ರೈತರೊಂದಿಗೆ ಅವರ ಸಮಸ್ಯೆಗಳ ಕುರಿತು ಸಂವಾದ ನಡೆಸೋಣ.

ಇದರಿಂದ ನಿಮ್ಮ ಸಿಎಸ್ಸಿಗಳು ಬಲಗೊಳ್ಳುತ್ತವೆ. ದೇಶದ ಪ್ರಧಾನಿ ಮೂರು ಲಕ್ಷ ಸಿಎಸ್ಸಿಗಳ ಮೂಲಕ ಗ್ರಾಮಗಳ ಜನರೊಂದಿಗೆ ತನ್ನ ಆಲೋಚನೆಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ಉದಾಹರಣೆಗೆ, ಲಸಿಕೆ ಕಾರ್ಯಕ್ರಮಕ್ಕೆ ಮುನ್ನ ನಾನು ಜನರೊಂದಿಗೆ ಮಾತನ್ನಾಡುತ್ತೇನೆ ಎಂದಿಟ್ಟುಕೊಳ್ಳೋಣ. ಇದರಿಂದ ಲಸಿಕೆ ಆಂದೋಲನಕ್ಕೆ ಶಕ್ತಿ ತುಂಬಿದಂತೆ ಆಗಲಿದೆ. ಇದು ಟಿವಿ ಮೂಲಕ ಮಾಡುವ ಪ್ರಚಾರಕ್ಕಿಂತ ಹೆಚ್ಚು ಪರಿಣಾಮಕಾರಿ. 20ನೇ ತಾರೀಕು 9.30ಕ್ಕೆ ನಿಮ್ಮ ಸಿಎಸ್ಸಿಗಳಿಗೆ 50-100 ರೈತ ಸೋದರರು-ಸೋದರಿಯರನ್ನು ಕರೆತನ್ನಿ. ಕೃಷಿ ಕ್ಷೇತ್ರದಲ್ಲಿನ ಸ್ಥಿತ್ಯಂತರ ಕುರಿತು ಹಾಗೂ ನಾನಾ ಯೋಜನೆಗಳ ಸವಲತ್ತುಗಳನ್ನು ಗ್ರಾಮಸ್ಥರು ಹೇಗೆ ಪಡೆದುಕೊಳ್ಳಬಹುದು ಎಂದು ನಾನು ತಿಳಿಸಿ ಕೊಡುತ್ತೇನೆ. ಅವರ ಅನುಭವಗಳನ್ನು ಕೇಳಲು ನಾನು ಇಷ್ಟಪಡುತ್ತೇನೆ.

ಸ್ನೇಹಿತರೇ,

ಇದೊಂದು ಆಹ್ಲಾದಕರ ಅನುಭವ. ದೇಶದೆಲ್ಲೆಡೆ ಇಂಥ ಸ್ಥಿತ್ಯಂತರ ಸಾಧ್ಯವಾಗಿರುವುದು ನೀವು ಹಾಗೂ ನಿಮ್ಮ ಬೆರಳಿನ ತುದಿಗಳಿಂದ. ಸುಧಾರಣೆ, ಕಾರ್ಯ ನಿರ್ವಹಣೆ ಹಾಗೂ ಸ್ಥಿತ್ಯಂತರದ ಮೂಲಕ ಅಭಿವೃದ್ಧಿ ಹಾಗೂ ಪ್ರಗತಿಯನ್ನು ಸಾಧಿಸಲು ಸರ್ಕಾರ ಬದ್ಧವಾಗಿದೆ. ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಶುಭಾಶಯ ಹಾಗೂ ಧನ್ಯವಾದ. ನಮಸ್ತೆ