ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ದೂರಸಂಪರ್ಕ ಇಲಾಖೆಯ (ಡಿ.ಒ.ಟಿ.) ಯ ಸಾರ್ವಜನಿಕ ರಂಗದ ಉದ್ಯಮವಾದ ಹೆಮಿಸ್ಪಿಯರ ಪ್ರಾಪರ್ಟೀಸ್ ಇಂಡಿಯಾ ಲಿಮಿಟೆಡ್ (ಎಚ್.ಪಿ.ಐ.ಎಲ್.) ನ ಆಡಳಿತಾತ್ಮಕ ನಿಯಂತ್ರಣವನ್ನು ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯಕ್ಕೆ ( ಎಂ.ಒ.ಎಚ್.ಯು.ಎ.) 700 ಕೋ.ರೂ.ಮೊತ್ತದ ಈಕ್ವಿಟಿ ಮತ್ತು ಭಾರತ ಸರಕಾರದಿಂದ 51 ಕೋ.ರೂ. ಸಾಲವನ್ನು ಕಂಪೆನಿಯಲ್ಲಿ ಹೂಡಿಕೆ ಮಾಡುವ ಹಾಗು ಹೆಚ್ಚುವರಿ ಭೂಮಿಯನ್ನು ವಿಭಜಿಸುವ ವ್ಯವಸ್ಥೆ ಕಾರ್ಯರೂಪಕ್ಕೆ ಬಂದ ಬಳಿಕ ವರ್ಗಾಯಿಸುವುದಕ್ಕೆ ಅನುಮೋದನೆ ನೀಡಿದೆ.
ವಿವರಗಳು:
1) ಹೆಮಿಸ್ಪಿಯರ್ ಪ್ರಾಪರ್ಟೀಸ್ ಇಂಡಿಯಾ ಲಿಮಿಟೆಡ್ (ಎಚ್.ಪಿ.ಐ.ಎಲ್.) ಗೆ 700 ಕೋ.ರೂ. ಮೊತ್ತದ ಈಕ್ವಿಟಿ ಹೂಡಿಕೆ. ಹೆಮಿಸ್ಪಿಯರ್ ಪ್ರಾಪರ್ಟೀಸ್ ಇಂಡಿಯಾ ಲಿಮಿಟೆಡ್ (ಎಚ್.ಪಿ.ಐ.ಎಲ್.) ಗೆ ತಲಾ 10 ರೂ. ಮೊತ್ತದ 70 ಕೋಟಿ ಕ್ಯುಮುಲೇಟಿವ್ ಪುನರ್ ನಗದೀಕರಣದ ಪ್ರಿಫರೆನ್ಸ್ ಶೇರುಗಳನ್ನು ಖರೀದಿಸುವುದಕ್ಕಾಗಿ 700 ಕೋ.ರೂ. ಮೊತ್ತದ ಈಕ್ವಿಟಿ ಹೂಡಿಕೆ., ಖಾಸಗಿ ವ್ಯವಸ್ಥೆ ಆಧಾರದಲ್ಲಿ ಮತ್ತು ಭಾರತ ಸರಕಾರದಿಂದ 51 ಕೋ.ರೂ. ಸಾಲವನ್ನು ಆರ್ಥಿಕ ವ್ಯವಹಾರಗಳ ಸಚಿವಾಲಯ ನಿಗದಿ ಮಾಡಿದ ದರದಲ್ಲಿ ಪಡೆದು ಕಾರ್ಯ ಯೋಜನೆಯನ್ನು ಅನುಷ್ಟಾನಿಸುವುದು.
2) ಸ್ಥಿರಾಸ್ತಿ ವ್ಯವಹಾರದಲ್ಲಿ ಎಚ್.ಪಿ. ಐ.ಎಲ್. ಗೆ ಭಾರತ ಸರಕಾರದ ವಿದೇಶೀ ನೇರ ಹೂಡಿಕೆಗೆ ಸಂಬಂಧಿಸಿದ ನೀತಿಯಿಂದ ವಿನಾಯಿತಿ ನೀಡಿಕೆ.
3) ಎಚ್.ಪಿ.ಐ.ಎಲ್.ಗೆ ಅದರ ಎಂ.ಒ.ಎ. ಯ ನಿಬಂಧನೆಗಳಾದ ಭೂಮಿ ಮಾರಾಟ, ಧೀರ್ಘಾವಧಿ ಲೀಸ್ ನೀಡಿಕೆ ಮತ್ತು ಭೂಮಿಯನ್ನು ವಿಲೇವಾರಿ ಮಾಡುವ ಉದ್ದೇಶಕ್ಕೆ ಸಂಬಂಧಿಸಿ ಅಧಿಕಾರ ನೀಡಿಕೆ.
4) ಎಚ್.ಪಿ.ಸಿ.ಎಲ್.ನ ಈಕ್ವಿಟಿ ಪಾಲು ಮತ್ತು ಆಡಳಿತದ ನಿಯಂತ್ರಣವನ್ನು ಸಂಪರ್ಕ ಮಂತ್ರಾಲಯದ ದೂರ ಸಂಪರ್ಕ ಇಲಾಖೆಯಿಂದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ (ಎಂ.ಒ.ಎಚ್.ಯು.ಎ.)ಕ್ಕೆ ವರ್ಗಾವಣೆ.
5) ಎಚ್.ಪಿ.ಐ.ಎಲ್. ನಲ್ಲಿಯ ಈಕ್ವಿಟಿ ಹಕ್ಕುಗಳನ್ನು ಸಂಪರ್ಕ ಮಂತ್ರಾಲಯದಿಂದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯಕ್ಕೆ (ಎಂ.ಒ.ಎಚ್. ಯು.ಎ.) ವರ್ಗಾಯಿಸಲು, ಈಕ್ವಿಟಿ ಹೂಡಿಕೆ ಮಾಡಲು ಮತ್ತು ಕಾರ್ಯಯೋಜನೆಯನ್ನು ಅನುಷ್ಟಾನಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ದೂರಸಂಪರ್ಕ ಇಲಾಖೆ (ಡಿ.ಒ.ಟಿ.)ಗೆ ಅಧಿಕಾರ.
ಲಾಭಗಳು:
ಇದು ಹೆಚ್ಚುವರಿ ಭೂಮಿಯನ್ನು ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ ನಿಂದ ವಿಭಜಿಸಿ ಹೆಮಿಸ್ಪಿಯರ್ ಪ್ರಾಪರ್ಟೀಸ್ ಇಂಡಿಯಾ ಲಿಮಿಟೆಡ್ (ಎಚ್.ಪಿ.ಐ. ಎಲ್.) ಗೆ ವರ್ಗಾಯಿಸಿ ಎಚ್.ಪಿ.ಐ.ಎಲ್. ನ ಸುಸೂತ್ರ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡುತ್ತದೆ.
ಅನುಷ್ಟಾನ ತಂತ್ರ ಮತ್ತು ಗುರಿಗಳು:
ಸಂಪುಟವು ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ ಬಳಿಕ , ಹೆಚ್ಚುವರಿ ಭೂಮಿಯನ್ನು ಸ್ಟ್ಯಾಂಪ್ ಡ್ಯೂಟಿ ಪಾವತಿ ಬಳಿಕ ಟಿ.ಸಿ.ಎಲ್. ನಿಂದ ಎಚ್.ಪಿ.ಐ.ಎಲ್.ಗೆ ವರ್ಗಾಯಿಸಲಾಗುವುದು. ಟಿ.ಸಿ.ಎಲ್. ತಿಳಿಸಿರುವಂತೆ ಈ ವ್ಯವಸ್ಥೆಗೆ ರಾಷ್ಟ್ರೀಯ ಕಂಪೆನಿಗಳ ಕಾನೂನು ಮಂಡಳಿಯಿಂದ (ಎನ್. ಸಿ.ಎಲ್.ಟಿ.) ಅನುಮೋದನೆ ಪಡೆಯಲು ಸುಮಾರು ಏಳರಿಂದ ಎಂಟು ತಿಂಗಳು ಬೇಕಾಗಬಹುದು. ಎನ್.ಸಿ.ಎಲ್.ಟಿ. ಅನುಮೋದನೆಯ ಬಳಿಕ , ಅದಕ್ಕೆ ಸಂಬಂಧಿಸಿದ ವಿವಿಧ ಹಂತಗಳನ್ನು ಅನುಷ್ಟಾನಿಸಲು ಸುಮಾರು 4 ರಿಂದ 5 ತಿಂಗಳು ಬೇಕಾಗುತ್ತವೆ. ಒಟ್ಟು ಒಂದು ವರ್ಷ ಕಾಲಾವಧಿ ಈ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಬೇಕಾಗುತ್ತದೆ.
ಹಿನ್ನೆಲೆ
ಮೆ/ ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ ( ಈಗ ಟಾಟಾ ಕಮ್ಯುನಿಕೇಶನ್ಸ್ ಲಿಮಿಟೆಡ್-ಟಿ.ಸಿ.ಎಲ್.) ಸಂಸ್ಥೆಯ ಹೂಡಿಕೆಯನ್ನು ಭಾರತ ಸರಕಾರ 2002 ರ ಫೆಬ್ರವರಿ 13 ರಂದು ಹಿಂಪಡೆದು , ಕಂಪೆನಿಯ ಆಡಳಿತವನ್ನು ವ್ಯೂಹಾತ್ಮಕ ಪಾಲುದಾರ ಸಂಸ್ಥೆಯಾದ ಮೆ/ ಪಾನಟೋನ್ ಫಿನ್ವೆಸ್ಟ್ ಲಿಮಿಟೆಡ್ (ಪಿ.ಎಫ್.ಎಲ್.) ಗೆ ನೀಡಿತ್ತು. ಈ ಪಿ.ಎಫ್.ಎಲ್.ಸಂಸ್ಥೆ ಟಾಟಾ ಗುಂಪಿನ ಕಂಪೆನಿಗಳ ಸ್ಪೆಶಲ್ ಪರ್ಪಸ್ ವೆಹಿಕಲ್ ಆಗಿದೆ.
ಬಂಡವಾಳ ಹಿಂತೆಗೆತದ ಸಮಯದಲ್ಲಿ 4 ನಗರಗಳಾದ ಪುಣೆ, ಕೋಲ್ಕೊತ್ತಾ, ಹೊಸದಿಲ್ಲಿ, ಮತ್ತು ಚೆನ್ನೈಗಳಲ್ಲಿ 5 ಪ್ರದೇಶಗಳಲ್ಲಿ ಹೊಂದಿರುವ ಹೆಚ್ಚುವರಿ 773.13 ಎಕರೆ ಭೂಮಿಯನ್ನು (ಒಟ್ಟು ಭೂಮಿ 1230.13 ಎಕರೆಯಲ್ಲಿ) ಗುರುತಿಸಿ , ವಿಭಜಿಸಿ ಈ ಹೆಚ್ಚುವರಿ ಭೂಮಿ ಹೂಡಿಕೆ ಹಿಂತೆಗೆತದ ಭಾಗವಾಗಿರುವುದಿಲ್ಲ ಎಂದು ನಿರ್ಧರಿಸಲಾಗಿತ್ತು.
ಪಾಲುದಾರಿಕೆ ಒಪ್ಪಂದದ / ಶೇರು ಖರೀದಿ ಒಪ್ಪಂದದ ಪ್ರಕಾರ, ಕಂಪೆನಿಗಳ ಕಾಯ್ದೆ , 1956 ರ 391 ರಿಂದ 394 ರವರೆಗಿನ ಸೆಕ್ಷನ್ ಗಳನ್ವಯ ಹೆಚ್ಚುವರಿ ಭೂಮಿಯನ್ನು ಸ್ಥಿರಾಸ್ತಿ ಕಂಪೆನಿಯಾಗಿ ವಿಭಜನೆ ಅಥವಾ ಅದನ್ನು ವಿಂಗಡಿಸುವ ಹೊಣೆಗಾರಿಕೆಯನ್ನು ಪಿ.ಇ.ಎಲ್ ವಹಿಸಿಕೊಂಡಿದೆ.