Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಟಿ.ಐ.ಆರ್. ಪುಕ್ಕಟೆ ಪರವಾನಗಿಯಡಿಯಲ್ಲಿ (ಟಿಐಆರ್ ಒಪ್ಪಂದ) ಅಂತಾರಾಷ್ಟ್ರೀಯ ಸರಕು ಸಾಗಣೆ ಕುರಿತ ಕಸ್ಟಂಮ್ಸ್ ಒಪ್ಪಂದದಲ್ಲಿ ಭಾರತದ ಪ್ರವೇಶಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಟಿ.ಐ.ಆರ್. ಪುಕ್ಕಟೆ ಪರವಾನಗಿಯಡಿಯಲ್ಲಿ (ಟಿಐಆರ್ ಒಪ್ಪಂದ)  ಅಂತಾರಾಷ್ಟ್ರೀಯ ಸರಕು ಸಾಗಣೆ ಕುರಿತ ಕಸ್ಟಂಮ್ಸ್ ಒಪ್ಪಂದದಲ್ಲಿ ಭಾರತದ ಪ್ರವೇಶಕ್ಕೆ ಮತ್ತು ಅದರ ಪ್ರವೇಶವ ಅನುಷ್ಠಾನಕ್ಕೆ ಬರಲು ಸ್ಥಿರೀಕರಣಕ್ಕಾಗಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು  ತನ್ನ ಅನುಮೋದನೆ ನೀಡಿದೆ.

ಈ ಒಪ್ಪಂದವು, ಭಾರತೀಯ ವ್ಯಾಪಾರಿಗಳಿಗೆ ಗಡಿಯಲ್ಲಿ ಒಪ್ಪಂದ ಮಾಡಿಕೊಂಡ ಇತರ ರಾಷ್ಟ್ರಗಳಿಗೆ  ರಸ್ತೆಯ ಮೂಲಕ ಅಥವಾ ಬಹು ಮಾದರಿ ವ್ಯವಸ್ಥೆಯಲ್ಲಿ ತ್ವರಿತ, ಸುಲಭ, ವಿಶ್ವಾಸಾರ್ಹ ಹಾಗೂ ತಡೆ ರಹಿತವಾದ ಅಂತಾರಾಷ್ಟ್ರೀಯ ಸಾಗಾಟ ವ್ಯವಸ್ಥೆಯನ್ನು ಪಡೆಯಲು ನೆರವಾಗುತ್ತದೆ.
ಈ ಒಪ್ಪಂದಕ್ಕೆ ಸೇರುವ ಮೂಲಕ, ಸೀಮಾ ಸುಂಕದ ಪರಸ್ಪರ ನಿಯಂತ್ರಣಗಳನ್ವಯ ಮಾರ್ಗದ ಮಧ್ಯಂತರ ಗಡಿಗಳಲ್ಲಿ ಸರಕುಗಳ ತಪಾಸಣೆ ಹಾಗೂ ಭೌತಿಕ ಬೆಂಗಾವಲು ತೊಡಕುಗಳು ತಪ್ಪುತ್ತವೆ. ಕಸ್ಟಮ್ಸ್ ಅನುಮತಿಯು ಆಂತರಿಕ ಕಸ್ಟಮ್ಸ್ ತಾಣಗಳಲ್ಲಿಯೇ ನಡೆಯುತ್ತದೆ, ಹೀಗಾಗಿ ಗಡಿ ದಾಟುವ ಕೇಂದ್ರಗಳಲ್ಲಿ ಮತ್ತು ಬಂದರುಗಳಲ್ಲಿ ಈ ತೊಂದರೆ ತಪ್ಪುತ್ತದೆ. ಟಿಐಆರ್ ಅಡಿಯಲ್ಲಿ ಆಗುವ ಸಾಗಾಟದಲ್ಲಿ ಸರಕು ವಿಭಾಗಗಳು ಮತ್ತು ಅದರ ಹೊರಗಿನ ಸ್ಥಿತಿಯನ್ನು ಹಾಗೂ ಮುದ್ರೆಯನ್ನು ಅಥವಾ ಕಂಟೈನರ್ ಗಳನ್ನು ಪರಿಶೀಲಿಸಲು ಅವಕಾಶವಿರುತ್ತದೆ, ಇದರಿಂದ ಗಡಿಯಲ್ಲಿ ಆಗುವ ವಿಳಂಬ, ಸಾಗಾಟ ಮತ್ತು ಸಾರಿಗೆ ವೆಚ್ಚ ಹೆಚ್ಚಳ ತಪ್ಪುತ್ತದೆ, ಆ ಮೂಲಕ ಹೆಚ್ಚಿನ ಸ್ಪರ್ಧಾತ್ಮಕತೆ ಮತ್ತು ವಾಣಿಜ್ಯ ಹಾಗೂ ಸಾರಿಗೆ ವಲಯದ ವೃದ್ಧಿಗೂ ಕಾರಣವಾಗುತ್ತದೆ.

ಒಪ್ಪಂದದ ಅನುಸರಣೆಯು, ಸರಬರಾಜು ಸರಣಿಯಲ್ಲಿ ಹೆಚ್ಚಿನ ಭದ್ರತೆಯ ಖಾತ್ರಿ ಒದಗುಸುತ್ತದೆ, ಕಾರಣ ಅನುಮೋದಿತ ಸಾರಿಗೆದಾರರು ಮತ್ತು ವಾಹಗಳನ್ನು ಮಾತ್ರವೇ ಈ ಒಪ್ಪಂದದ ಅಡಿಯಲ್ಲಿ ಸಾಗಾಟಕ್ಕೆ ಅನುಮತಿಸಲಾಗುತ್ತದೆ. ಟಿಐಆರ್ ಪುಕ್ಕಟೆ ಪರವಾನಗಿಯು ಕಸ್ಟಮ್ಸ್ ಸುಂಕದ ಮತ್ತು ತೆರಿಗೆ ಮತ್ತು ಸಾಗಾಟದ ವೇಳೆಯಲ್ಲಿನ ಸಂಚಾರದ ಖಾತ್ರಿ ನೀಡುತ್ತದೆ. ಸಾಗಾಟದ ವೇಳೆ ಸುಂಕ ಮತ್ತು ಅಂಥ ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಟಿ.ಐ.ಆರ್. ಪುಕ್ಕಟೆ ಪರವಾನಗಿಯು ಕಸ್ಟಮ್ಸ್ ಘೋಷಣೆಯಾಗಿಯೂ ಸೇವೆ ಸಲ್ಲಿಸುತ್ತದೆ ಮತ್ತು ಇದು ವಿವಿಧ ಸಾಗಾಟದ ರಾಷ್ಟ್ರಗಳಲ್ಲಿನ ಕಾನೂನನ್ನು ತೃಪ್ತಿಪಡಿಸಲು ಹಲವು ಬಾರಿ ಘೋಷಣೆ ಸಲ್ಲಿಕೆ ತಪ್ಪಿಸುತ್ತದೆ.  ಟಿ.ಐ.ಆರ್. ಒಪ್ಪಂದವು, ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಮಾರ್ಗದ (ಐ.ಎನ್.ಎಸ್.ಟಿ.ಸಿ.) ಕಾರಿಡಾರ್ ಗಳಲ್ಲಿ ಸರಕುಗಳ ಸಾಗಾಟಕ್ಕೆ ಸಾಧನವಾಗುತ್ತದೆ ಮತ್ತು ಇದು ಮಧ್ಯ ಏಷ್ಯಾ ಗಣರಾಜ್ಯಗಳು ಮತ್ತು ಇತರ ಸ್ವತಂತ್ರ ಕಾಮನ್ ವೆಲ್ತ್ ರಾಷ್ಟ್ರಗಳ (ಸಿಐಎಸ್)ಲ್ಲಿ ಅದರಲ್ಲೂ ಛಬಹರ್ ಬಂದರು ಬಳಕೆ ಮಾಡುವ ರಾಷ್ಟ್ರಗಳಲ್ಲಿ ವಾಣಿಜ್ಯ ಉತ್ತೇಜನಕ್ಕೆ ನೆರವಾಗುತ್ತದೆ.
 ಈ ಪ್ರಸ್ತಾವನೆಯಿಂದ ಭಾರತ ಸರ್ಕಾರಕ್ಕೆ ಯಾವುದೇ ನೇರವಾದ ಆರ್ಥಿಕ ಪರಿಣಾಮಗಳು ಆಗುವುದಿಲ್ಲ, ಕಾರಣ, ಇದು ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಭಾರತದ ಪ್ರವೇಶಕ್ಕೆ ಸಂಬಂಧಿಸಿದ್ದಾಗಿದೆ.
ಹಿನ್ನೆಲೆ

ಟಿಐಆರ್ ಪುಕ್ಕಟೆ ಪರವಾನಗಿ 1975 (ಟಿಐಆರ್ ಒಪ್ಪಂದ)ದ ಅಡಿಯಲ್ಲಿ ಅಂತಾರಾಷ್ಟ್ರೀಯ ಸರಕು ಸಾಗಣೆಯ ಕಸ್ಟಮ್ಸ್ ಒಪ್ಪಂದವು, ಒಪ್ಪಂದದಡಿ ಬರುವ ಎಲ್ಲ ರಾಷ್ಟ್ರಗಳಲ್ಲಿ ತಡೆ ರಹಿತವಾದ ಸರಕು ಸಾಗಾಟಕ್ಕೆ  ಯೂರೋಪ್ ಕುರಿತ ವಿಶ್ವಸಂಸ್ಥೆಯ ಆರ್ಥಿಕ ಆಯೋಗದ (ಯುಎನ್.ಇ.ಸಿ.ಇ.) ಆಶ್ರಯದ ಅಂತಾರಾಷ್ಟ್ರೀಯ ಸಾಗಣೆ ವ್ಯವಸ್ಥೆಯಾಗಿದೆ. ಪ್ರಸ್ತುತ ಐರೋಪ್ಯ ಒಕ್ಕೂಟ ಸೇರಿದಂತೆ ಈ ಒಪ್ಪಂದದಲ್ಲಿ 70 ಪಕ್ಷಕಾರ ರಾಷ್ಟ್ರಗಳಿವೆ.

******

AKT/VBA/SH