ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಬಾಂಗ್ಲಾದೇಶದ ಭೇಟಿಯ ಎರಡನೇ ದಿನ, ತಾಯಿ ಕಾಳಿಯ ಆಶೀರ್ವಾದ ಪಡೆದುಕೊಂಡರು. ಪೌರಾಣಿಕ ಸಂಪ್ರದಾಯದ ರೀತ್ಯ ಇರುವ 51ಶಕ್ತಿಪೀಠಗಳಲ್ಲಿ ಒಂದಾದ ಸತ್ಕಿರಾದ ಜೆಶೋರೇಶ್ವರಿ ಕಾಳಿ ಶಕ್ತಿಪೀಠದಲ್ಲಿ ವಿಶೇಷ ಪೂಜೆಯನ್ನು ಪ್ರಧಾನಮಂತ್ರಿ ಸಲ್ಲಿಸಿದರು. ಕೈಯಲ್ಲಿ ತಯಾರಿಸಿದ ಚಿನ್ನದ ಲೇಪನ ಮಾಡಿದ ಬೆಳ್ಳಿಯ ಮುಕುಟವನ್ನು ಕಾಳಿಕಾ ದೇವಿಗೆ ಪ್ರಧಾನ ಮಂತ್ರಿಯವರು ಸಮರ್ಪಿಸಿದರು. ಈ ಮುಕುಟವನ್ನು ಸ್ಥಳೀಯ ಕಲಾವಿದರು ಮೂರುವಾರಗಳ ಸಮಯದಲ್ಲಿ ಸಿದ್ಧಪಡಿಸಿದ್ದರು.
ಸ್ನೇಹ ಹಸ್ತವನ್ನು ವಿಸ್ತರಿಸಿದ ಪ್ರಧಾನಮಂತ್ರಿಯವರು, ದೇವಾಲಯಕ್ಕೆ ಹೊಂದಿಕೊಂಡಂತೆ ಸಮುದಾಯ ಭವನ ಮತ್ತು ಚಂಡಮಾರುತದ ವೇಳೆ ಆಶ್ರಯತಾಣ ನಿರ್ಮಾಣಕ್ಕೆ ಅನುದಾನವನ್ನು ಪ್ರಕಟಿಸಿದರು. ಈ ಕಟ್ಟಡವನ್ನು ವಾರ್ಷಿಕ ಕಾಳಿ ಪೂಜೆ ಮತ್ತು ದೇವಾಲಯದ ಮೇಳದ ವೇಳೆ ಭಕ್ತರು ಬಳಸಬಹುದಾಗಿದೆ ಜೊತೆಗೆ ಸಮಾಜದ ಎಲ್ಲ ನಂಬಿಕೆಗಳವರೂ ಸಮುದಾಯ ಸೌಲಭ್ಯವಾಗಿ, ಚಂಡಮಾರುತದ ವೇಳೆ ಆಶ್ರಯತಾಣವಾಗಿ ಬಳಸಬಹುದಾಗಿದೆ.
***
At the Jeshoreshwari Kali Temple. pic.twitter.com/XsXgBukg9m
— Narendra Modi (@narendramodi) March 27, 2021
Feeling blessed after praying at the Jeshoreshwari Kali Temple. pic.twitter.com/8CzSSXt9PS
— Narendra Modi (@narendramodi) March 27, 2021