ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಜೆಬು ದನಗಳ(ಪಶು) ಜೆನೊಮಿಕ್ಸ್ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬ್ರೆಜಿಲ್ ನಡುವೆ ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2016ರ ಅಕ್ಟೋಬರ್ ನಲ್ಲಿ ಅಂಕಿತ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಬ್ರೆಜಿಲ್ ನಡುವಿನ ಹಾಲಿ ಸ್ನೇಹ ಸಂಬಂಧವನ್ನು ಬಲಪಡಿಸಲಿದೆ ಮತ್ತು ಪರಸ್ಪರರು ಒಪ್ಪಿಗೆ ಸೂಚಿಸಿದ ಪ್ರಕ್ರಿಯೆಗಳ ಮೂಲಕ ಜಾರಿ ಮಾಡಬಹುದಾದ ಜಂಟಿ ಚಟುವಟಿಕೆಗಳ ಮೂಲಕ ಜಿನೋಮಿಕ್ಸ್ ಮತ್ತು ಪಶುಗಳಲ್ಲಿ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ಎ.ಆರ್.ಟಿ.ಎಸ್) ಅಭಿವೃದ್ದಿಯನ್ನು ಉತ್ತೇಜಿಸುತ್ತದೆ.
ನಿಯಮಿತವಾಗಿ ಚಟುವಟಿಕೆಗಳು ಮತ್ತು ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ರೂಪಿಸಲು ಮತ್ತು ತರುವಾಯ ಅವುಗಳ ಮೌಲ್ಯಮಾಪನಕ್ಕಾಗಿ ಪ್ರತಿ ಪಕ್ಷಕಾರರ ನಡುವೆ ಸಮಾನ ಸಂಖ್ಯೆಯ ಪ್ರತಿನಿಧಿಗಳನ್ನು ಒಳಗೊಂಡ ಜಾರಿ ಸಮಿತಿಯನ್ನು ರಚಿಸಲಾಗುವುದು.
ಅಸ್ತಿತ್ವದಲ್ಲಿರುವ ಜ್ಞಾನ ಮೂಲವನ್ನು ಸಮರ್ಥನೀಯ ಡೈರಿ ಅಭಿವೃದ್ಧಿ ಮತ್ತು ಸಾಂಸ್ಥಿಕ ಬಲಗೊಳಿಸುವಿಕೆಯನ್ನು ವಿಸ್ತರಿಸುವ ಉದ್ದೇಶಕ್ಕಾಗಿ ದನಗಳ ಮತ್ತು ಎಮ್ಮೆಗಳ ಸಂತಾನೋತ್ಪತ್ತಿ ಸುಧಾರಣೆ ಮಾಡುವ ಕ್ಷೇತ್ರದಲ್ಲಿ ಇದನ್ನು ಜಂಟಿ ಯೋಜನೆಗಳ ಮೂಲಕ ಮಾಡಲಾಗುತ್ತದೆ.
ಈ ತಿಳಿವಳಿಕೆ ಒಪ್ಪಂದವು (ಎ) ಜೆಬು ದನ ಮತ್ತು ಅದರ ಮಿಶ್ರ ತಳಿಗಳು ಹಾಗೂ ಎಮ್ಮೆಗಳ ಜೆನೋಮಿಕ್ ಬಳಕೆ (ಬಿ) ದನ ಮತ್ತು ಎಮ್ಮೆಗಳಲ್ಲಿ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನದ (ಎ.ಆರ್.ಟಿ.ಗಳು) ಬಳಕೆ (ಸಿ) ಜೆನೋಮಿಕ್ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನದಲ್ಲಿ ಸಾಮರ್ಥ್ಯ ವರ್ಧನೆ (ಡಿ) ಎರಡೂ ರಾಷ್ಟ್ರಗಳ ಆಯಾ ಕಾನೂನು ಮತ್ತು ನಿಯಂತ್ರಣಗಳಿಗೆ ಮತ್ತು ಭಾರತ ಸರ್ಕಾರದ (ವಾಣಿಜ್ಯ ವಹಿವಾಟು) ನಿಯಮ 1961ರ ಪರಿಶಿಷ್ಟ ಎರಡರ ನಿಯಮ 7 (ಡಿ) (ಐ) ವ್ಯಾಪ್ತಿಗೆ ಅನುಗುಣವಾಗಿ ಎ.ಆರ್.ಟಿ.ಗಳಲ್ಲಿ ಸಂಬಂಧಿತ ಸಂಶೋಧನೆ ಮತ್ತು ಜಿರೋಮಿಕ್ ಗಳಲ್ಲಿ ಅಭಿವೃದ್ಧಿ ಮೂಲಕ ಜೆಬು ದನಗಳ ಜೆನೋಮಿಕ್ ಆಯ್ಕೆ ಕಾರ್ಯಕ್ರಮ ಸ್ಥಾಪನೆಗೆ ಹಾಗೂ ವೈಜ್ಞಾನಿಕ ಸಹಕಾರಕ್ಕೆ ಅವಕಾಶ ನೀಡುತ್ತದೆ ಮತ್ತು ಉತ್ತೇಜಿಸುತ್ತದೆ.
*****