Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜೂನ್ 2024 ತಿಂಗಳ ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮಕ್ಕೆ ನಾಗರಿಕರು ಮಾಹಿತಿ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ಮೋದಿ ಮನವಿ 


ಸಾರ್ವತ್ರಿಕ ಚುನಾವಣೆಯ ಕಾರಣದಿಂದಾಗಿ ಅಲ್ಪ ವಿರಾಮ ಪಡೆದಿದ್ದ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ಪುನರಾರಂಭಗೊಳ್ಳುತ್ತಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮ ಜೂನ್ 30 ರ ಭಾನುವಾರದಂದು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಮನ್ ಕಿ ಬಾತ್‌ನ 111 ನೇ ಸಂಚಿಕೆಗಾಗಿ ಸಾರ್ವಜನಿಕರು ತಮ್ಮ ಆಲೋಚನೆ ಮತ್ತು ಮಾಹಿತಿಗಳನ್ನು MyGov Open Forum, ನಮೋ ಅಪ್ಲಿಕೇಶನ್‌ನಲ್ಲಿ ಬರೆಯುವ ಮೂಲಕ ಅಥವಾ 1800 11 7800 ಕ್ಕೆ ಸಂದೇಶ ಕಳುಹಿಸಬಹುದು ಎಂದು ಕೇಳಿಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿಗಳು:

“ಲೋಕಸಭೆ ಚುನಾವಣೆಯಿಂದಾಗಿ ಕೆಲವು ತಿಂಗಳ ವಿರಾಮ ನಂತರ, #MannKiBaat ಮತ್ತೆ ಪ್ರಸಾರವಾಗುತ್ತದೆ ಎಂದು ವಿಷಯ ತಿಳಿಸಲು ಸಂತೋಷವಾಗಿದೆ! ಈ ತಿಂಗಳ ಕಾರ್ಯಕ್ರಮವು ಜೂನ್ 30 ರ ಭಾನುವಾರದಂದು ನಡೆಯಲಿದೆ. ನಾಗರಿಕರು ನಿಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು MyGov Open Forum, NaMo App ನಲ್ಲಿ ಬರೆಯಿರಿ ಅಥವಾ 1800 11 7800 ಗೆ ಸಂದೇಶ ಕಳುಹಿಸಿ” ಎಂದು ಮನವಿ ಮಾಡಿದ್ದಾರೆ.
 

 

*****