ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೋವಿಡ್-19 ಕ್ಕೆ ಆರ್ಥಿಕ ಸ್ಪಂದನೆಯ ಭಾಗವಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎ) ಯನ್ನು 2020 ಜುಲೈನಿಂದ ನವೆಂಬರ್ ವರೆಗೆ ಐದು ತಿಂಗಳ ಕಾಲ ವಿಸ್ತರಿಸಲು ಅನುಮೋದನೆ ನೀಡಿದೆ.
ಈ ಯೋಜನೆಯಡಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 (ಎನ್ಎಫ್ಎಸ್ಎ) ಅಡಿಯಲ್ಲಿ ಮುಂದಿನ ಐದು ತಿಂಗಳವರೆಗೆ– ಜುಲೈನಿಂದ ನವೆಂಬರ್ – ತಿಂಗಳಿಗೆ 1 ಕಿ.ಗ್ರಾಂ ಉಚಿತವಾಗಿ ಹಂಚಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 9.7 ಲಕ್ಷ ಮೆಟ್ರಿಕ್ ಟನ್ ಕಡಲೆಕಾಳು ವಿತರಿಸಲಾಗುವುದು. ಇದರ ಒಟ್ಟು ಅಂದಾಜು ವೆಚ್ಚ 6,849.24 ಕೋಟಿ ರೂ.ಗಳಾಗಿದೆ.
ಸುಮಾರು 19.4 ಕೋಟಿ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ವಿಸ್ತರಿತ ಪಿಎಂಜಿಕೆಎಯ ಎಲ್ಲಾ ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮುಂದಿನ ಐದು ತಿಂಗಳಲ್ಲಿ ಯಾವುದೇ ಅಡಚಣಣೆಗಳಿಂದ ಆಹಾರ ಧಾನ್ಯಗಳು ಲಭ್ಯವಿಲ್ಲದ ಕಾರಣಕ್ಕೆ ಯಾರೂ ಸಹ, ವಿಶೇಷವಾಗಿ ಯಾವುದೇ ಬಡ ಕುಟುಂಬವೂ ತೊಂದರೆಗೊಳಗಾಗದಂತೆ ನೋಡಿಕೊಳ್ಳುವ ಭಾರತ ಸರ್ಕಾರದ ಬದ್ಧತೆಗೆ ಅನುಗುಣವಾಗಿ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಕಡಲೆಕಾಳು ಉಚಿತ ವಿತರಣೆಯು ಈ ಐದು ತಿಂಗಳಲ್ಲಿ ಮೇಲೆ ತಿಳಿಸಿದ ಎಲ್ಲರಿಗೂ ಸಾಕಷ್ಟು ಪ್ರೋಟೀನ್ ಲಭ್ಯತೆಯನ್ನು ಖಚಿತಪಡಿಸುತ್ತದೆ.
ಪ್ಯಾಕೇಜ್ನ ದ್ವಿದಳ ಧಾನ್ಯಗಳ ವಿತರಣೆಯು 2015-2016ರಲ್ಲಿ ಸ್ಥಾಪಿಸಲಾದ ಬಫರ್ ಸಂಗ್ರಹದ ಲಭ್ಯತೆಯಿಂದ ಹೊರಹೊಮ್ಮಿದೆ ಪಿಎಂಜಿಕೆಎವೈ ವಿಸ್ತೃತ ಅವಧಿಯ ವಿತರಣೆಗಾಗಿ ಭಾರತ ಸರ್ಕಾರವು ಸಾಕಷ್ಟು ಕಡಲೆಕಾಳು ದಾಸ್ತಾನು ಹೊಂದಿದೆ.
ಪಿಎಂಜಿಕೆಎವೈನ ಮೊದಲ ಹಂತದಲ್ಲಿ (ಏಪ್ರಿಲ್ ನಿಂದ ಜೂನ್ 2020 ರವರೆಗೆ) ಈಗಾಗಲೇ 4.63 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ವಿತರಿಸಲಾಗಿದ್ದು, ದೇಶಾದ್ಯಂತ 18.2 ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆದಿವೆ.
ಹಿನ್ನೆಲೆ:
ಕೊರೊನಾ ವೈರಸ್ ಮತ್ತು ಲಾಕ್ ಡೌನ್ ನಿಂದ ಉಂಟಾದ ಆರ್ಥಿಕ ಅಡಚಣೆಗಳ ಕಾರಣದಿಂದಾಗಿ ದುರ್ಬಲರು ಅಥವಾ ಬಡವರು ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅನ್ನು 2020 ರ ನವೆಂಬರ್ ಅಂತ್ಯದವರೆಗೆ ವಿಸ್ತರಿಸುವುದಾಗಿ ಪ್ರಧಾನಿಯವರು 30.6.2020 ರಂದು ಘೋಷಿಸಿದ್ದರು.