Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಿ20 ರಾಷ್ಟ್ರಗಳ ಶೃಂಗಸಭೆ ವೇಳೆ ಫ್ರಾನ್ಸ್ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿ ನಡುವೆ ದ್ವಿಪಕ್ಷೀಯ ಮಾತುಕತೆ

ಜಿ20 ರಾಷ್ಟ್ರಗಳ ಶೃಂಗಸಭೆ ವೇಳೆ  ಫ್ರಾನ್ಸ್ ಅಧ್ಯಕ್ಷರು ಮತ್ತು ಪ್ರಧಾನಮಂತ್ರಿ ನಡುವೆ ದ್ವಿಪಕ್ಷೀಯ ಮಾತುಕತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ ಅಧ್ಯಕ್ಷರಾದ ಗೌರವಾನ್ವಿತ ಎಮ್ಯಾನುಯೆಲ್ ಮ್ಯಾಕ್ರಾನ್ ಅವರ ನಡುವೆ 2021ರ ಅಕ್ಟೋಬರ್ 30ರಂದು ಇಟಲಿಯ ರೋಮ್ ನಲ್ಲಿ ಜಿ20 ಶೃಂಗಸಭೆ ವೇಳೆ ದ್ವಿಪಕ್ಷೀಯ ಸಭೆ ನಡೆಯಿತು. 
    ಉಭಯ ನಾಯಕರು ಭಾರತ ಮತ್ತು ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆ ವಿಸ್ತರಣೆ ಕುರಿತು ತೃಪ್ತಿ ವ್ಯಕ್ತಪಡಿಸಿದರು. 
ಪ್ರಧಾನಮಂತ್ರಿ ಅವರು, 2021ರ ಸೆಪ್ಟೆಂಬರ್ ನಲ್ಲಿ ಐರೋಪ್ಯ ಒಕ್ಕೂಟ ಬಿಡುಗಡೆ ಮಾಡಿದ ಇಂಡೋ-ಪೆಸಿಫಿಕ್ ಕಾರ್ಯತಂತ್ರವನ್ನು ಸ್ವಾಗತಿಸಿದರು ಮತ್ತು ಅದರಲ್ಲಿ ಫ್ರಾನ್ಸ್ ನಾಯಕತ್ವ ವಹಿಸಿದ್ದಕ್ಕಾಗಿ ಫ್ರಾನ್ಸ್ ಅಧ್ಯಕ್ಷರಿಗೆ ಧನ್ಯವಾದಗಳನ್ನು ಹೇಳಿದರು. ಅಲ್ಲದೆ ಉಭಯ ನಾಯಕರು ಇಂಡೋ-ಪೆಸಿಫಿಕ್ ನಲ್ಲಿ ಸಹಕಾರ ಬಲವರ್ಧನೆ ಕುರಿತು ಮತ್ತು ಆ ಪ್ರದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ವ್ಯವಸ್ಥೆ ರೂಪಿಸುವ ಹೊಸ ಹಾಗೂ ನವೀನ ಮಾರ್ಗಗಳ ಕುರಿತು ಉಭಯ ನಾಯಕರು ಬದ್ಧತೆಯನ್ನು ಪುನರುಚ್ಚರಿಸಿದರು. 
ಉಭಯ ನಾಯಕರು ಮುಂಬರುವ ಸಿಒಪಿ26 ಕುರಿತು ಮತ್ತು ಹವಾಮಾನ ಹಣಕಾಸಿಗೆ ಆದ್ಯತೆ ನೀಡುವ ವಿಚಾರಗಳ ಬಗ್ಗೆ ಚರ್ಚಿಸಿದರು. 
ಅಲ್ಲದೆ ಪ್ರಧಾನಮಂತ್ರಿ ಅವರು ಆದಷ್ಟು ಶೀಘ್ರ ಅವಕಾಶ ಮಾಡಿಕೊಂಡು ಭಾರತಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಮ್ಯಾಕ್ರಾನ್ ಅವರಿಗೆ ಆಹ್ವಾನ ನೀಡಿದರು. 

***