Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಫೆಡರಲ್ ಗಣರಾಜ್ಯದ ಚಾನ್ಸಲರ್ ಅವರೊಂದಿಗೆ ಪ್ರಧಾನಮಂತ್ರಿಯವರ ಸಮಾಲೋಚನೆ.

ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಫೆಡರಲ್ ಗಣರಾಜ್ಯದ ಚಾನ್ಸಲರ್ ಅವರೊಂದಿಗೆ ಪ್ರಧಾನಮಂತ್ರಿಯವರ ಸಮಾಲೋಚನೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 27ರಂದು ಜರ್ಮನಿಯ ಶ್ಲೋಸ್ ಎಲ್ಮೌದಲ್ಲಿ ನಡೆದ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಫೆಡರಲ್ ಗಣರಾಜ್ಯದ ಚಾನ್ಸಲರ್ ಘನತೆವೆತ್ತ ಶ್ರೀ ಒಲಾಫ್ ಶೋಲ್ಜ್ ಅವರನ್ನು ಭೇಟಿಯಾದರು.

ಈ ವರ್ಷ ಉಭಯ ನಾಯಕರ ನಡುವೆ ನಡೆದ ಎರಡನೇ ಸಭೆ ಇದಾಗಿದೆ. ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಗಾಗಿ 2022ರ ಮೇ 2ರಂದು ಪ್ರಧಾನಮಂತ್ರಿಯವರು ಬರ್ಲಿನ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದಕ್ಕೂ ಮುನ್ನ ಉಭಯ ನಾಯಕರ ಸಭೆ ನಡೆದಿತ್ತು. ಜಿ-7 ಶೃಂಗಸಭೆಯ ಆಹ್ವಾನಕ್ಕಾಗಿ ಚಾನ್ಸಲರ್ ಶೋಲ್ಜ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದರು.

ಕಳೆದ ತಿಂಗಳು ಆರಂಭಿಸಿದ ತಮ್ಮ ಚರ್ಚೆಗಳನ್ನು ಮುಂದುವರಿಸುತ್ತಾ, ಉಭಯ ನಾಯಕರು ತಮ್ಮ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವ ಅಗತ್ಯವನ್ನು ಒತ್ತಿ ಹೇಳಿದರು. ಹವಾಮಾನ ಉಪಕ್ರಮ, ಹವಾಮಾನ ಹಣಕಾಸು ಒದಗಣೆ ಮತ್ತು ತಂತ್ರಜ್ಞಾನ ವರ್ಗಾವಣೆಯಂತಹ ವಿಷಯಗಳನ್ನು ಚರ್ಚಿಸಲಾಯಿತು. ವ್ಯಾಪಾರ, ಹೂಡಿಕೆ ಮತ್ತು ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಆಳಗೊಳಿಸುವ ಅಗತ್ಯದ ಬಗ್ಗೆ ಇಬ್ಬರೂ ನಾಯಕರು ಸಹಮತ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ, ವಿಶೇಷವಾಗಿ ಭಾರತದ ಮುಂಬರುವ ಜಿ-20 ಅಧ್ಯಕ್ಷತೆಯ ಸಂದರ್ಭದಲ್ಲಿ ಹೆಚ್ಚಿನ ಸಮನ್ವಯದ ಕುರಿತು ಚರ್ಚಿಸಲಾಯಿತು. ಉಭಯ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

******