Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಿ.20 ಶೃಂಗ 2019 ರ ಹಿನ್ನೆಲೆಯಲ್ಲಿ ರಶ್ಯಾ-ಭಾರತ –ಚೀನಾ (ಅರ್.ಐ.ಸಿ.) ನಾಯಕರ ಜೊತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಡೆಸಿದ ಅನೌಪಚಾರಿಕ ಸಭೆಯ ವೇಳೆ ಪ್ರಧಾನ ಮಂತ್ರಿಗಳ ಆರಂಭಿಕ ಮಾತುಗಳ ಅನುವಾದ


 

  ಗೌರವಾನ್ವಿತರಾದ ಮತ್ತು ನನ್ನ ಸ್ನೇಹಿತರಾದ ಅಧ್ಯಕ್ಷ  ಕ್ಸಿ ಮತ್ತು ಅಧ್ಯಕ್ಷ ಪುಟಿನ್ ಅವರೇ

 ನಾವು ಮೂರು ದೇಶದವರು ಕಳೆದ ವರ್ಷ ಅರ್ಜೆಂಟೀನಾದಲ್ಲಿ ಶೃಂಗ ಮಟ್ಟದ  ಸಭೆಯನ್ನು ನಡೆಸಿದ್ದೆವು. ವಿಶ್ವಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಬಗ್ಗೆ ಪರಸ್ಪರ ಉಪಯುಕ್ತ ಅಭಿಪ್ರಾಯಗಳ ವಿನಿಮಯದ ಬಳಿಕ ನಾವು ಮತ್ತೊಮ್ಮೆ ಭವಿಷ್ಯದಲ್ಲಿ ಸಭೆ ಸೇರಲು ನಿರ್ಧರಿಸಿದ್ದೆವು. ಇಂದು ನಾನು ಈ ಆರ್.ಐ.ಸಿ.ಗಳ  ಅನೌಪಚಾರಿಕ ಸಭೆಗೆ ನಿಮ್ಮನ್ನು ಸ್ವಾಗತಿಸಲು ಸಂತೋಷಪಡುತ್ತೇನೆ.

ವಿಶ್ವದ ಪ್ರಮುಖ ಆರ್ಥಿಕತೆಗಳಾಗಿ , ಆರ್ಥಿಕತೆ, ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿಗಳಿಗೆ ಅನ್ವಯಿಸಿ ನಮ್ಮ ನಡುವಿನ ಅಭಿಪ್ರಾಯ ವಿನಿಮಯ ಬಹಳ ಮುಖ್ಯವಾದುದು. ಇಂದಿನ ನಮ್ಮ ತ್ರಿಪಕ್ಷೀಯ ಸಭೆ ಪ್ರಮುಖ ಜಾಗತಿಕ ವಿಷಯಗಳಿಗೆ ಸಂಬಂಧಿಸಿ ಚರ್ಚೆಗೆ ಮತ್ತು ಸಮನ್ವಯಕ್ಕೆ ಬಹಳ ಉಪಯುಕ್ತ ಮಾದ್ಯಮ.

ಈ ವರ್ಷದ ಫೆಬ್ರವರಿಯಲ್ಲಿ ಚೀನಾದಲ್ಲಿ ನಡೆದ ನಮ್ಮ ವಿದೇಶಾಂಗ ಸಚಿವರ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ನಾವು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೆವು. ಭಯೋತ್ಪಾದನೆ ತಡೆ, ಅಂತಾರಾಷ್ಟ್ರೀಯ ಅಪಾಯಕ್ಕೆ ಸಂಬಂಧಿಸಿದ ವಿಷಯಗಳು , ಸುಧಾರಿತ ಬಹುಪಕ್ಷೀಯತೆ, ವಾತಾವರಣ ಬದಲಾವಣೆ ಮತ್ತು ಅರ್.ಐ.ಸಿ. ಅಡಿಯಲ್ಲಿ ಸಹಕಾರ ವಿಷಯಗಳು ಇದರಲ್ಲಿ ಸೇರಿದ್ದವು.

ನಾನೀಗ ಗೌರವಾನ್ವಿತ ಅಧ್ಯಕ್ಷರಾದ ಕ್ಸಿ ಅವರು ತಮ್ಮ ಆರಂಭಿಕ ಅಭಿಪ್ರಾಯ ಮಂಡಿಸಬೇಕು ಎಂದು ಕೋರುತ್ತೇನೆ.

 (ಅಧ್ಯಕ್ಷರಾದ ಕ್ಸಿ ಅವರ ಆರಂಭಿಕ ಅಭಿಪ್ರಾಯ ಮಂಡನೆ ಬಳಿಕ)

ಧನ್ಯವಾದಗಳು ಅಧ್ಯಕ್ಷರಾದ ಕ್ಸಿ ಅವರಿಗೆ.

ಈಗ ನಾನು ಗೌರವಾನ್ವಿತರಾದ , ಅಧ್ಯಕ್ಷ ಪುಟಿನ್ ಅವರು ತಮ್ಮ ಆರಂಭಿಕ ಮಾತುಗಳನ್ನಾಡಬೇಕು ಎಂದು ಕೋರುತ್ತೇನೆ.

ಧನ್ಯವಾದಗಳು ಅಧ್ಯಕ್ಷರಾದ ಪುಟಿನ್ ಅವರಿಗೆ.