ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಇಂಡೋನೇಷ್ಯಾ ಅಧ್ಯಕ್ಷರಾದ ಹೆಚ್.ಇ. ಜೋಕೋವಿಡೋಡುರವರ ಆಹ್ವಾನದ ಮೇರೆಗೆ 17ನೇ ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸಲು ನವೆಂಬರ್ 14 ರಿಂದ 16 ರ ವರೆಗೆ ಇಂಡೋನೇಷ್ಯಾದ ,ಬಾಲಿಗೆ ಭೇಟಿನೀಡಲಿದ್ದಾರೆ.
ಬಾಲಿ ಶೃಂಗ ಸಭೆಯ ಸಮಯದಲ್ಲಿ ,ಜಿ-20 ಸಮಿತಿಯ ನಾಯಕರು “ಒಟ್ಟಾಗಿ ಚೇತರಿಸಿಕೊಳ್ಳಿ ಸಧೃಢವಾಗಿ ಚೇತರಿಸಿಕೊಳ್ಳಿ” ಎನ್ನುವ ಸಭೆಯ ಧೇಯ್ಯವಾಕ್ಯದಡಿಯಲ್ಲಿ ಜಾಗತಿಕವಾಗಿ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ವಿಸ್ತಾರವಾಗಿ ಚರ್ಚೆಸಿಲಿದ್ದಾರೆ.
ಶೃಂಗ ಸಭೆಯ ಕಾರ್ಯಕ್ರಮದ ಭಾಗವಾಗಿ ಆಹಾರ ಮತ್ತು ಇಂಧನ ಭಧ್ರತೆ;ಆರೋಗ್ಯ: ಮತ್ತು ಡಿಜಿಟಲ್ ಬದಲಾವಣೆ ಬಗ್ಗೆ ಮೂರು ಕಾರ್ಯಕಾರಿಣಿ ಸಭೆಗಳು ನಡೆಯಲಿವೆ.
ಶೃಂಗ ಸಭೆಯ ಸಮಾರೋಪ ಸಭೆಯಲ್ಲಿ ಅಧ್ಯಕ್ಷರಾದ ಹೆಚ್.ಇ. ಜೋಕೋವಿಡೋಡುರ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಜಿ-20 ಅಧ್ಯಕ್ಷತೆಯನ್ನು ಸಾಂಕೇತಿಕವಾಗಿ ಹಸ್ತಾಂತರಿಸುವರು.ಭಾರತವು ಡಿಸೆಂಬರ್ 1,2022 ರಿಂದ ಅಧಿಕೃತವಾಗಿ ಅಧ್ಯಕ್ಷತೆಯನ್ನುವಹಿಸಿಕೊಳ್ಳುವುದು,ಸಭೆಯ ಇನ್ನೊಂದು ಬದಿಯಲ್ಲಿ ,ಪ್ರಧಾನಿಯವರು ಅವರ ಕೆಲವು ಸಹ ಸದಸ್ಯ ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವರು.
ಪ್ರಧಾನಿ ಮಂತ್ರಿಯವರು ಬಾಲಿಯಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವರರು ಮತ್ತು ಸಂವಾದ ನಡೆಸುವರು.
*****