ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ್ ಮಂಟಪದಲ್ಲಿಂದು ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಲ್ಪಿಸುವ ಅಂತಿಮ(ಯುನಿವರ್ಸಿಟಿ ಕನೆಕ್ಟ್ ಫಿನಾಲೆ) ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದರು. ಜಿ-20 ವಿಶ್ವವಿದ್ಯಾಲಯ ಸಂಪರ್ಕ ಉಪಕ್ರಮವನ್ನು ಭಾರತದ ಯುವಜನರಲ್ಲಿ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆಯ ಬಗ್ಗೆ ತಿಳುವಳಿಕೆ ಮೂಡಿಸಲು ಮತ್ತು ವಿವಿಧ ಜಿ-20 ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಪ್ರಧಾನ ಮಂತ್ರಿ ಅವರು ಈ ಸಂದರ್ಭದಲ್ಲಿ 4 ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ಅವುಗಳೆಂದರೆ ದಿ ಗ್ರ್ಯಾಂಡ್ ಸಕ್ಸಸ್ ಆಫ್ ಜಿ-20 ಭಾರತ್ ಪ್ರೆಸಿಡೆನ್ಸಿ: ದೂರದೃಷ್ಟಿಯ ನಾಯಕತ್ವ, ಅಂತರ್ಗತ ಕಾರ್ಯವಿಧಾನ; ಭಾರತದ ಜಿ-20 ಪ್ರೆಸಿಡೆನ್ಸಿ: ವಸುಧೈವ ಕುಟುಂಬಕಂ; ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮದ ಸಂಕಲನ; ಮತ್ತು ಜಿ-20ರಲ್ಲಿ ಭಾರತೀಯ ಸಂಸ್ಕೃತಿಯ ಪ್ರದರ್ಶನ.
2 ವಾರಗಳ ಹಿಂದೆ ಭಾರತ್ ಮಂಟಪದಲ್ಲಿ ನಡೆದ ಜಿ-20 ಶೃಂಗಸಭೆಯ ಸರಣಿ ಕಾರ್ಯಕ್ರಮಗಳನ್ನು ಸ್ಮರಿಸುವ ಮೂಲಕ ಪ್ರಧಾನಿ ತಮ್ಮ ಭಾಷಣ ಆರಂಭಿಸಿದರು. ಇದು ಸಂಪೂರ್ಣವಾಗಿ ಸರಣಿ ಕಾರ್ಯಕ್ರಮಗಳು ಸಂಭವಿಸಿದ ಸ್ಥಳವಾಗಿದೆ. ಇದೇ ವೇದಿಕೆ ಇಂದು ಭಾರತದ ಭವಿಷ್ಯಕ್ಕೆ ಸಾಕ್ಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಭಾರತವು ಜಿ-20 ಕಾರ್ಯಕ್ರಮವನ್ನು ಆಯೋಜಿಸುವ ಮಾನದಂಡಗಳನ್ನು ಎತ್ತಿ ಹಿಡಿದಿದೆ. ಇಡೀ ಜಗತ್ತು ಅದರ ಬಗ್ಗೆ ಅತ್ಯಂತ ಆಶ್ಚರ್ಯ ವ್ಯಕ್ತಪಡಿಸಿದೆ. ಇಂತಹ ಕಾರ್ಯಕ್ರಮದೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಭಾರತದ ಭರವಸೆಯ ಯುವಕರ ಬಗ್ಗೆ ತಾವು ಆಶ್ಚರ್ಯಪಡುವುದು ಮತ್ತೇನಿಲ್ಲ. “ಯುವಕರು ತಮ್ಮೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಾಗ ಅಂತಹ ಸರಣಿ ಘಟನೆಗಳು ಯಶಸ್ವಿಯಾಗುತ್ತವೆ”. ಭಾರತದಲ್ಲಿ ನಡೆದ ಈ ಎಲ್ಲಾ ಕಾರ್ಯಕ್ರಮಗಳ ಯಶಸ್ಸು ರಾಷ್ಟ್ರದ ಯುವ ಶಕ್ತಿಗೆ ಸಲ್ಲುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತವು ಅದ್ಭುತ ಸಂಭವಿಸಿದ ಸ್ಥಳವಾಗುತ್ತಿದೆ. ಕಳೆದ 30 ದಿನಗಳ ಚಟುವಟಿಕೆಗಳಿಂದ ಇದು ಸ್ಪಷ್ಟವಾಗಿದೆ. ಕಳೆದ 30 ದಿನಗಳ ಪುನರಾವರ್ತನೆಯನ್ನು ನೀಡಿದವರು, ಇಡೀ ವಿಶ್ವವೇ ‘ಭಾರತವು ಚಂದ್ರನ ಮೇಲಿದೆ’ ಎಂದು ಪ್ರತಿಧ್ವನಿಸಿದಾಗ, ಯಶಸ್ವಿ ಚಂದ್ರಯಾನ ಕಾರ್ಯಕ್ರಮವನ್ನು ಪ್ರಧಾನಿ ಸ್ಮರಿಸಿದರು. “ಆಗಸ್ಟ್ 23 ನಮ್ಮ ದೇಶದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಅಮರವಾಗಿದೆ”. ಈ ಯಶಸ್ಸಿನ ಮುಂದುವರಿಕೆಯಾಗಿ, ಭಾರತವು ತನ್ನ ಸೌರ ಮಿಷನ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿತು. ಚಂದ್ರಯಾನ 3 ಲಕ್ಷ ಕಿ.ಮೀ ಕ್ರಮಿಸಿದ್ದು, ಸೋಲಾರ್ ಯೋಜನೆ 15 ಲಕ್ಷ ಕಿ.ಮೀ ಕ್ರಮಿಸಲಿದೆ. “ಭಾರತದ ಅಗ್ರ ಶ್ರೇಣಿಯ ಈ ಯಶಸ್ಸಿಗೆ ಯಾವುದೇ ಹೋಲಿಕೆ ಇದೆಯೇ” ಎಂದು ಅವರು ಶ್ಲಾಘಿಸಿದರು.
ಕಳೆದ 30 ದಿನಗಳಲ್ಲಿ ಭಾರತದ ರಾಜತಾಂತ್ರಿಕತೆಯು ಹೊಸ ಎತ್ತರಕ್ಕೆ ಏರಿದೆ. ಜಿ-20ಕ್ಕಿಂತ ಮೊದಲು ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಪ್ರಯತ್ನಗಳೊಂದಿಗೆ 6 ಹೊಸ ರಾಷ್ಟ್ರಗಳನ್ನು ಅದರ ಸದಸ್ಯರನ್ನಾಗಿ ಸೇರಿಸಲಾಯಿತು. ದಕ್ಷಿಣ ಆಫ್ರಿಕಾದ ನಂತರ, ಗ್ರೀಸ್‌ಗೆ ಪ್ರಯಾಣಿಸಿದ್ದನ್ನು ಪ್ರಧಾನಿ ಪ್ರಸ್ತಾಪಿಸಿದರು, ಇದು 4 ದಶಕಗಳಲ್ಲಿ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ. ಜಿ-20 ಶೃಂಗಸಭೆಗೆ ಮುನ್ನ ಇಂಡೋನೇಷ್ಯಾದಲ್ಲಿ ಹಲವಾರು ವಿಶ್ವ ನಾಯಕರನ್ನು ಭೇಟಿ ಮಾಡಿರುವುದನ್ನು ಅವರು ಉಲ್ಲೇಖಿಸಿದರು. ಇದೇ ಭಾರತ ಮಂಟಪದಲ್ಲಿ ವಿಶ್ವದ ಒಳಿತಿಗಾಗಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಜಾಗತಿಕವಾಗಿ ಧ್ರುವೀಕರಣಗೊಂಡ ವಾತಾವರಣದಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಸಾಮಾನ್ಯ ನೆಲೆ ಕಂಡುಕೊಂಡಿದ್ದು ಸರ್ಕಾರದ ವಿಶೇಷ ಸಾಧನೆಯಾಗಿದೆ. ಭಾರತವು ಹಲವಾರು ಪ್ರಮುಖ ಉಪಕ್ರಮಗಳು ಮತ್ತು ಫಲಿತಾಂಶಗಳನ್ನು ಮುನ್ನಡೆಸಿದೆ ಎಂದು ಉಲ್ಲೇಖಿಸಿದಾಗ “ಸರ್ವಾನುಮತದ ನವದೆಹಲಿ ಘೋಷಣೆಯು ಜಾಗತಿಕವಾಗಿ ಮುಖ್ಯದ್ದಾಗಿದೆ”. 21ನೇ ಶತಮಾನದ ದಿಕ್ಕನ್ನು ಸಂಪೂರ್ಣ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಜಿ-20ರ ಪರಿವರ್ತನೀಯ ನಿರ್ಧಾರಗಳ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಜಿ-20ರಲ್ಲಿ ಆಫ್ರಿಕಾ ಒಕ್ಕೂಟವನ್ನು ಕಾಯಂ ಸದಸ್ಯರನ್ನಾಗಿ ಮಾಡಲಾಯಿತು. ಜತೆಗೆ, ಭಾರತ ಮಧ್ಯಪ್ರಾಚ್ಯ ಯುರೋಪ್ ಕಾರಿಡಾರ್ ನೇತೃತ್ವದ ಅಂತಾರಾಷ್ಟ್ರೀಯ ಜೈವಿಕ ಇಂಧನ ಒಕ್ಕೂಟ ಸ್ಥಾಪನೆಯನ್ನು ಸಹ ಅವರು ಪ್ರಸ್ತಾಪಿಸಿದರು.
ಜಿ-20 ಶೃಂಗಸಭೆ ಮುಗಿದ ತಕ್ಷಣ, ಸೌದಿ ಅರೇಬಿಯಾದ ಯುವರಾಜನನ್ನು ಭೇಟಿ ಮಾಡುವ ರಾಷ್ಟ್ರ ಪ್ರವಾಸವೂ ನಡೆಯಿತು. ಸೌದಿ ಅರೇಬಿಯಾ ಭಾರತದಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮಾಡಲು ಹೊರಟಿದೆ. ಕಳೆದ 30 ದಿನಗಳಲ್ಲಿ ವಿಶ್ವದ ಅರ್ಧದಷ್ಟು ಭಾಗವನ್ನು ಒಳಗೊಂಡ 85 ವಿಶ್ವ ನಾಯಕರನ್ನು ಭೇಟಿ ಮಾಡಿದ್ದೇನೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಬೆಳೆಯುತ್ತಿರುವ ಭಾರತದ ಅಂತಾರಾಷ್ಟ್ರೀಯ ಸಂಬಂಧದ ಪ್ರಯೋಜನಗಳನ್ನು ವಿವರಿಸಿದ ಪ್ರಧಾನಿ, ಇದರಿಂದಾಗಿ ಭಾರತವು ಹೊಸ ಅವಕಾಶಗಳು, ಹೊಸ ಸ್ನೇಹಿತರು ಮತ್ತು ಹೊಸ ಮಾರುಕಟ್ಟೆಗಳನ್ನು ಪಡೆಯುತ್ತದೆ, ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ಕಳೆದ 30 ದಿನಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು, ಬಡವರು ಮತ್ತು ಮಧ್ಯಮ ವರ್ಗದವರ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿದ ಪ್ರಧಾನಿ, ವಿಶ್ವಕರ್ಮ ಜಯಂತಿಯ ಶುಭ ಸಂದರ್ಭದಲ್ಲಿ ಕುಶಲಕರ್ಮಿಗಳು, ಕರಕುಶಲ ಕಸುಬುಗಾರರು ಮತ್ತು ಸಾಂಪ್ರದಾಯಿಕ ಕಾರ್ಮಿಕರಿಗಾಗಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಪ್ರಾರಂಭಿಸಲಾಗಿದೆ. 1 ಲಕ್ಷಕ್ಕೂ ಹೆಚ್ಚಿನ ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲು ರೋಜ್‌ಗಾರ್ ಮೇಳಗಳನ್ನು ಸಂಘಟಿಸಲಾಗಿದೆ. ರೋಜ್‌ಗಾರ್ ಮೇಳಗಳು ಪ್ರಾರಂಭವಾದಾಗಿನಿಂದ 6 ಲಕ್ಷಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಹೊಸ ಸಂಸತ್ತಿನ ಉದ್ಘಾಟನಾ ಅಧಿವೇಶನ ಆರಂಭವಾಗಿದೆ. ಅಲ್ಲಿ ಅಂಗೀಕರಿಸಲ್ಪಟ್ಟ ಮೊದಲ ಮಸೂದೆ ನಾರಿಶಕ್ತಿ ವಂದನಾ ಅಧಿನಿಯಮವಾಗಿದೆ.
ಎಲೆಕ್ಟ್ರಿಕ್ ವಾಹನಗಳ ಚಲನಶೀಲತೆಯ ಇತ್ತೀಚಿನ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ದೇಶದಲ್ಲಿ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಹೊಸ ಯೋಜನೆಯನ್ನು ಅನುಮೋದಿಸಲಾಗಿದೆ. ಹಲವು ಬೆಳವಣಿಗೆಗಳ ನಡುವೆಯೂ, ನವದೆಹಲಿಯ ದ್ವಾರಕಾದಲ್ಲಿ ಯಶೋಭೂಮಿ ಕನ್ವೆನ್ಷನ್ ಸೆಂಟರ್ ಉದ್ಘಾಟನೆ ಮಾಡಲಾಗಿದೆ. ವಾರಾಣಸಿಯಲ್ಲಿ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಶಂಕುಸ್ಥಾಪನೆ ಮತ್ತು 9 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಾಗಿದೆ. ನವೀಕರಿಸಬಹುದಾದ ಇಂಧನ ಐಟಿ ಪಾರ್ಕ್, ಮೆಗಾ ಕೈಗಾರಿಕಾ ಪಾರ್ಕ್ ಮತ್ತು ಮಧ್ಯಪ್ರದೇಶ ರಾಜ್ಯದಲ್ಲಿ 6 ಹೊಸ ಕೈಗಾರಿಕಾ ವಲಯಗಳ ಜೊತೆಗೆ ಸಂಸ್ಕರಣಾಗಾರದಲ್ಲಿ ಪೆಟ್ರೋಕೆಮಿಕಲ್ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. “ಈ ಎಲ್ಲಾ ಬೆಳವಣಿಗೆಗಳು ಉದ್ಯೋಗ ಸೃಷ್ಟಿ ಮತ್ತು ಯುವಕರ ಕೌಶಲ್ಯಗಳನ್ನು ಹೆಚ್ಚಿಸುವುದರೊಂದಿಗೆ ಸಂಬಂಧ ಹೊಂದಿವೆ” ಎಂದು ಶ್ರೀ ಮೋದಿ ಹೇಳಿದರು.
ಆಶಾವಾದ, ಅವಕಾಶಗಳು ಮತ್ತು ಮುಕ್ತತೆ ಇರುವಲ್ಲಿ ಯುವಕರು ಪ್ರಗತಿ ಹೊಂದುತ್ತಾರೆ. ಯುವಕರು ದೊಡ್ಡದಾಗಿ ಯೋಚಿಸಬೇಕು. “ನಿಮ್ಮನ್ನು ಮೀರಿದ ಸಾಧನೆಗೆ ಮಿತಿ ಇಲ್ಲ, ಇದಕ್ಕಾಗಿ ಇಡೀ ದೇಶವೇ ನಿಮ್ಮ ಹಿಂದೆ ಇದೆ. ಯಾವುದೇ ಸಂದರ್ಭವನ್ನು ಚಿಕ್ಕದಾಗಿ ಅಥವಾ ಲಘುವಾಗಿ ಪರಿಗಣಿಸಬಾರದು. ಪ್ರತಿಯೊಂದು ಚಟುವಟಿಕೆಯನ್ನು ಮಾನದಂಡವಾಗಿ ಪರಿವರ್ತಿಸಲು ಪ್ರಯತ್ನಿಸಬೇಕು. ಕೇವಲ ರಾಜತಾಂತ್ರಿಕ ಮತ್ತು ದೆಹಲಿ ಕೇಂದ್ರಿತ ಘಟನೆಯಾಗಬಹುದಾಗಿದ್ದ ಜಿ-20ರ ಉದಾಹರಣೆ ನೀಡುವ ಮೂಲಕ ಅವರು ಇದನ್ನು ವಿವರಿಸಿದರು. ಬದಲಾಗಿ, “ಭಾರತವು ಜಿ-20 ಅನ್ನು ಜನ-ಚಾಲಿತ ರಾಷ್ಟ್ರೀಯ ಚಳುವಳಿಯನ್ನಾಗಿ ಮಾಡಿದೆ”. ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚಿನ ವಿಶ್ವವಿದ್ಯಾಲಯಗಳ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಯುವಕರ ಭಾಗವಹಿಸುವಿಕೆಯನ್ನು ಶ್ಲಾಘಿಸಿದ ಅವರು, ಸರ್ಕಾರವು ಶಾಲೆಗಳು, ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳಲ್ಲಿ 5 ಕೋಟಿ ವಿದ್ಯಾರ್ಥಿಗಳನ್ನು ಜಿ-20 ಶೃಂಗಕ್ಕೆ ಸೇರಿಸಿತು. “ನಮ್ಮ ಜನರು ದೊಡ್ಡದಾಗಿ ಯೋಚಿಸುತ್ತಾರೆ ಮತ್ತು ಇನ್ನೂ ಹೆಚ್ಚಿನದನ್ನು ನೀಡುತ್ತಾರೆ” ಎಂದು ಅವರು ಹೇಳಿದರು.
ಅಮೃತ ಕಾಲದ ಮುಂದಿನ 25 ವರ್ಷಗಳ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಪ್ರಧಾನ ಮಂತ್ರಿ, ರಾಷ್ಟ್ರ ಮತ್ತು ಯುವ ಜನರಿಗೆ ಈ ಅವಧಿಯು ವಿಮರ್ಶಾತ್ಮಕತೆಯ ಕಾಲಘಟ್ಟವಾಗಿದೆ. ಕೊಡುಗೆ ನೀಡುವ ಅಂಶಗಳ ಒಮ್ಮುಖದ ಕುರಿತು ಮಾತನಾಡಿದ ಅವರು, ಭಾರತವು ಅತ್ಯಂತ ಕಡಿಮೆ ಸಮಯದಲ್ಲಿ 10ನೇ ಸ್ಥಾನದಿಂದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತದ ಬಗ್ಗೆ ಜಾಗತಿಕ ನಂಬಿಕೆ ಬಲವಾಗಿದೆ, ದೇಶದಲ್ಲಿ ದಾಖಲೆಯ ಪ್ರಮಾಣದ ವಿದೇಶಿ ಹೂಡಿಕೆ ಹರಿದುಬರುತ್ತಿದೆ. ರಫ್ತು, ಉತ್ಪಾದನೆ ಮತ್ತು ಸೇವಾ ವಲಯವು ಹೊಸ ಎತ್ತರಕ್ಕೆ ಏರುತ್ತಿದೆ. ಕೇವಲ 5 ವರ್ಷಗಳಲ್ಲಿ, 13.5 ಕೋಟಿ ಜನರು ಬಡತನದಿಂದ ಹೊರಬಂದು ಭಾರತದ ನವ-ಮಧ್ಯಮ ವರ್ಗಕ್ಕೆ ಪರಿವರ್ತನೆಗೊಂಡಿದ್ದಾರೆ. “ಭೌತಿಕ, ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿನ ಹೆಜ್ಜೆ ಗುರುತುಗಳು ಅಭಿವೃದ್ಧಿಯಲ್ಲಿ ಹೊಸ ವೇಗವನ್ನು ಖಾತ್ರಿಪಡಿಸುತ್ತಿವೆ. ಭೌತಿಕ ಮೂಲಸೌಕರ್ಯವು 10 ಲಕ್ಷ ಕೋಟಿರೂ. ಹೂಡಿಕೆಯನ್ನು ಎದುರು ನೋಡುತ್ತಿದೆ ಎಂದು ಅವರು ಹೇಳಿದರು.
ಯುವಕರಿಗೆ ಇರುವ ಹೊಸ ಅವಕಾಶಗಳ ಕುರಿತು ಮಾತನಾಡಿದ ಪ್ರಧಾನಿ, ಇಪಿಎಫ್‌ಒ ವೇತನದಾರರ ಸುಮಾರು 5 ಕೋಟಿ ನೋಂದಣಿಗಳು ನಡೆದಿವೆ. ಇವುಗಳಲ್ಲಿ, 3.5 ಕೋಟಿ ನೋಂದಣಿಗಳು ಮೊದಲ ಬಾರಿಗೆ ಇಪಿಎಫ್‌ಒ ವ್ಯಾಪ್ತಿಗೆ ಬಂದಿವೆ, ಅಂದರೆ ಇದು ಅವರ ಮೊದಲ ಔಪಚಾರಿಕ ನಿಲುಗಡೆ ಆಗಿದೆ. 2014ರ ನಂತರ ದೇಶದಲ್ಲಿ 100ಕ್ಕಿಂತ ಕಡಿಮೆ ಇದ್ದ ಸ್ಟಾರ್ಟಪ್‌ಗಳು ಇದೀಗ 1 ಲಕ್ಷಕ್ಕಿಂತ ಹೆಚ್ಚಿಗೆ ಬೆಳವಣಿಗೆ ದಾಖಲಿಸಿವೆ. “ಭಾರತವು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕ ದೇಶವಾಗಿದೆ. 2014ಕ್ಕೆ ಹೋಲಿಸಿದರೆ ರಕ್ಷಣಾ ರಫ್ತು 23 ಪಟ್ಟು ಹೆಚ್ಚಾಗಿದೆ. ಮುದ್ರಾ ಯೋಜನೆಯು ಯುವಜನರನ್ನು ಉದ್ಯೋಗ ಸೃಷ್ಟಿಕರ್ತರನ್ನಾಗಿ ಮಾಡುತ್ತಿದೆ”. ಈ ಯೋಜನೆಯಲ್ಲಿ 8 ಕೋಟಿ ಜನರನ್ನು ಮೊದಲ ಬಾರಿಗೆ ಉದ್ಯಮಶೀಲರನ್ನಾಗಿ ರೂಪಿಸಲಾಗಿದೆ. ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ 5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಜಕೀಯ ಸ್ಥಿರತೆ, ನೀತಿ ಸ್ಪಷ್ಟತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ದೇಶದಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬೆಳವಣಿಗೆಗಳಿಗೆ ಪ್ರಧಾನಿ ಮೋದಿ ಮನ್ನಣೆ ನೀಡಿದರು. ಕಳೆದ 9 ವರ್ಷಗಳಲ್ಲಿ ಭ್ರಷ್ಟಾಚಾರ ನಿಗ್ರಹಿಸಲು ಸರ್ಕಾರವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದೆ, ಮಧ್ಯವರ್ತಿಗಳನ್ನು ನಿಯಂತ್ರಿಸಲು ಮತ್ತು ವ್ಯವಸ್ಥೆಯಲ್ಲಿನ ಸೋರಿಕೆ ತಡೆಯಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳ ಅನುಷ್ಠಾನ ಮಾಡಲಾಗಿದೆ. “ಇಂದು, ಪ್ರಾಮಾಣಿಕರಿಗೆ ಬಹುಮಾನ ನೀಡಲಾಗುತ್ತಿದ್ದು, ಅಪ್ರಾಮಾಣಿಕರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.
“ದೇಶದ ಅಭಿವೃದ್ಧಿಯ ಪ್ರಯಾಣ ಮುಂದುವರಿಸಲು ಸ್ವಚ್ಛ, ಸ್ಪಷ್ಟ ಮತ್ತು ಸ್ಥಿರ ಆಡಳಿತ ಕಡ್ಡಾಯವಾಗಿದೆ”. ಭಾರತದ ಯುವಕರು ಸಂಕಲ್ಪ ತೊಟ್ಟರೆ, 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ಮತ್ತು ಆತ್ಮನಿರ್ಭರ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತ ಮತ್ತು ಅದರ ಯುವಕರ ಸಾಮರ್ಥ್ಯವನ್ನು ಜನರು ಈಗ ಗುರುತಿಸಿರುವುದರಿಂದ ಇಡೀ ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ. ವಿಶ್ವದ ಪ್ರಗತಿಗೆ ಭಾರತ ಮತ್ತು ಅದರ ಯುವ ಜನತೆಯ ಪ್ರಗತಿ ಅತ್ಯಂತ ಮುಖ್ಯವಾಗಿದೆ. ರಾಷ್ಟ್ರದ ಪರವಾಗಿ ಬದ್ಧತೆಗಳನ್ನು ಮಾಡಲು ಪ್ರಧಾನಿಯನ್ನು ಶಕ್ತಗೊಳಿಸುವುದು ಯುವಕರ ಮನೋಭಾವವಾಗಿದೆ. ಪ್ರಧಾನಿ ವಿಶ್ವ ವೇದಿಕೆಯಲ್ಲಿ ಭಾರತದ ದೃಷ್ಟಿಕೋನ ಮಂಡಿಸಿದಾಗ ಭಾರತದ ಯುವಕರು ಅವರ ಹಿಂದಿನ ಸ್ಫೂರ್ತಿಯಾಗಿದ್ದಾರೆ. “ನನ್ನ ಶಕ್ತಿಯು ಭಾರತದ ಯುವಕರಲ್ಲಿದೆ” ಎಂದು ಉದ್ಗರಿಸಿದ ಪ್ರಧಾನ ಮಂತ್ರಿ, ಭಾರತದ ಯುವಜನರ ಉತ್ತಮ ಭವಿಷ್ಯಕ್ಕಾಗಿ ದಣಿವರಿಯದೆ ಎಲ್ಲರೂ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಸ್ವಚ್ಛ ಭಾರತ ಅಭಿಯಾನ ಯಶಸ್ವಿಗೊಳಿಸುವಲ್ಲಿ ಯುವಕರ ಕೊಡುಗೆಗಳಿಂದ ಪ್ರಭಾವಿತರಾದ ಪ್ರಧಾನ ಮಂತ್ರಿ, 2023 ಅಕ್ಟೋಬರ್ 1ರಂದು ರಾಷ್ಟ್ರದಾದ್ಯಂತ ನಡೆಯಲಿರುವ ವ್ಯಾಪಕ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವಂತೆ ಯವಜನರಿಗೆ ಮನವಿ ಮಾಡಿದರು. ಜಯಂತ್ ಅವರ 2ನೇ ವಿನಂತಿಯು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವುದಾಗಿದೆ. ಒಂದು ವಾರದೊಳಗೆ ಕನಿಷ್ಠ 7 ಜನರಿಗೆ ಯುಪಿಐ ಮೂಲಕ ಆಪರೇಟ್ ಮಾಡಲು ಕಲಿಸಿ ಎಂದು ಕೇಳಿದರು. ಅವರ ಮೂರನೇ ವಿನಂತಿಯು ವೋಕಲ್ ಫಾರ್ ಲೋಕಲ್ ಬಗ್ಗೆ. ಹಬ್ಬಗಳ ಸಂದರ್ಭದಲ್ಲಿ ‘ಮೇಡ್ ಇನ್ ಇಂಡಿಯಾ’ ಉಡುಗೊರೆಗಳನ್ನು ಖರೀದಿಸುವಂತೆ ಅವರು ಕೇಳಿಕೊಂಡರು. ಅವುಗಳ ಮೂಲದಲ್ಲಿ ಸ್ಥಳೀಯ ವಸ್ತುಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು. ದಿನನಿತ್ಯದ ಬಳಕೆಯ ವಸ್ತುಗಳ ಪಟ್ಟಿಯನ್ನು ಮಾಡುವ ಅಭ್ಯಾಸ ಮಾಡಲು ಮತ್ತು ಅವುಗಳಲ್ಲಿ ಎಷ್ಟು ವಿದೇಶಿ ನಿರ್ಮಿತವಾಗಿವೆ ಎಂಬುದನ್ನು ಪರಿಶೀಲಿಸಲು ಅವರು ಕೇಳಿಕೊಂಡರು. ನಮಗೆ ಗೊತ್ತಿರದ ಹಲವು ವಿದೇಶಿ ನಿರ್ಮಿತ ವಸ್ತುಗಳು ನಮ್ಮ ಬದುಕನ್ನು ಅತಿಕ್ರಮಿಸಿಕೊಂಡಿದ್ದು, ಇವುಗಳಿಂದ ಮುಕ್ತಿ ಪಡೆಯುವುದೇ ದೇಶವನ್ನು ಉಳಿಸಲು ಮುಖ್ಯವಾಗಿದೆ ಎಂದರು.
ಭಾರತದ ಕಾಲೇಜು ಮತ್ತು ವಿಶ್ವವಿದ್ಯಾಲಯ ಕ್ಯಾಂಪಸ್‌ಗಳು ‘ಲೋಕಲ್ ಫಾರ್ ವೋಕಲ್’ ಗೆ ನಿರ್ಣಾಯಕ ಕೇಂದ್ರಗಳಾಗಬಹುದು. ಖಾದಿಯನ್ನು ಕ್ಯಾಂಪಸ್‌ನ ಫ್ಯಾಶನ್ ಸ್ಟೇಟ್‌ಮೆಂಟ್ ಮಾಡಬೇಕು ಎಂದು ವಿದ್ಯಾರ್ಥಿಗಳನ್ನು ಒತ್ತಾಯಿಸಿದರು. ಕಾಲೇಜು ಸಾಂಸ್ಕೃತಿಕ ಉತ್ಸವಗಳಲ್ಲಿ ಖಾದಿ ಫ್ಯಾಶನ್ ಶೋಗಳನ್ನು ನಡೆಸಿ ವಿಶ್ವಕರ್ಮರ ಕಾರ್ಯವನ್ನು ಉತ್ತೇಜಿಸಬೇಕು. ಪ್ರಧಾನ ಮಂತ್ರಿ ಮಾಡಿರುವ 3 ಮನವಿಗಳು ಇಂದಿನ ಯುವ ಜನತೆ ಹಾಗೂ ಮುಂದಿನ ಪೀಳಿಗೆಯ ಶ್ರೇಯೋಭಿವೃದ್ಧಿಗಾಗಿ. ಹಾಗಾಗಿ, ಈ ದೃಢ ಸಂಕಲ್ಪದೊಂದಿಗೆ ಯುವಕರು ಇಂದು ಭಾರತ ಮಂಟಪದಿಂದ ನಿರ್ಗಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟದ ದಿಗ್ಗಜರಂತೆ ನಮಗೆ ದೇಶಕ್ಕಾಗಿ ಮಡಿಯುವ ಅವಕಾಶ ನಮಗಿಲ್ಲ, ಆದರೆ ದೇಶಕ್ಕಾಗಿ ಬದುಕುವ ಎಲ್ಲ ಅವಕಾಶವೂ ನಮಗಿದೆ ಎಂದು ಪ್ರಧಾನಿ ಹೇಳಿದರು. ಒಂದು ಶತಮಾನದ ಹಿಂದೆ ದಶಕಗಳ ಹಿಂದಿನ ಯುವಕರು ಸ್ವಾತಂತ್ರ್ಯದ ಭವ್ಯ ಗುರಿಗಳನ್ನು ನಿರ್ಧರಿಸಿದ್ದಾರೆ. ರಾಷ್ಟ್ರವ್ಯಾಪಿ ಶಕ್ತಿಯು ವಸಾಹತುಶಾಹಿ ಶಕ್ತಿಗಳಿಂದ ರಾಷ್ಟ್ರವನ್ನು ಮುಕ್ತಗೊಳಿಸಿತು. “ಸ್ನೇಹಿತರೇ, ಬನ್ನಿ ನನ್ನೊಂದಿಗೆ ನಡೆಯಿರಿ, ನಾನು ನಿಮ್ಮನ್ನು ಆಹ್ವಾನಿಸುತ್ತೇನೆ, 25 ವರ್ಷಗಳು ನಮ್ಮ ಮುಂದೆ ಇವೆ. 100 ವರ್ಷಗಳ ಹಿಂದೆ ಏನಾಯಿತು, ಅವರು ಸ್ವರಾಜ್ಯಕ್ಕಾಗಿ ಹೋರಾಡಿದರು, ನಾವು ಸಮೃದ್ಧಿ (ಸಮೃದ್ಧಿ)ಗಾಗಿ ಮುನ್ನಡೆಯಬಹುದು ಎಂದು ಪ್ರಧಾನಿ ಯುವಜನರನ್ನು ಉತ್ತೇಜಿಸಿದರು. “ಆತ್ಮನಿರ್ಭರ್ ಭಾರತ್ ಸಮೃದ್ಧಿಯ ಹೊಸ ಬಾಗಿಲುಗಳನ್ನು ತೆರೆಯುತ್ತದೆ, ಆತ್ಮವಿಶ್ವಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ”. ಭಾರತವನ್ನು ಅಗ್ರ 3 ಆರ್ಥಿಕತೆಗಳಿಗೆ ಕೊಂಡೊಯ್ಯುವ ಭರವಸೆಯನ್ನು ಅವರು ಪುನರುಚ್ಚರಿಸಿದರು, “ಅದಕ್ಕಾಗಿಯೇ ನನಗೆ ಭಾರತ ಮಾತೆ ಮತ್ತು 140 ಕೋಟಿ ಭಾರತೀಯರಿರಾದ ನಿಮ್ಮ ಬೆಂಬಲ ಮತ್ತು ಸಹಕಾರ ಬೇಕು” ಎಂದು ಪ್ರಧಾನಿ ಭಾಷಣ ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು.
ಹಿನ್ನೆಲೆ
ಜಿ-20 ಜನ ಭಾಗಿದಾರಿ ಆಂದೋಲನವು ದೇಶಾದ್ಯಂತ ವಿವಿಧ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳಿಂದ 5 ಕೋಟಿಗಿಂತ ಹೆಚ್ಚಿನ ಯುವಕರ ದಾಖಲೆಯ ಭಾಗವಹಿಸುವಿಕೆಯನ್ನು ಕಂಡಿತು. ಜಿ-20 ವಿಶ್ವವಿದ್ಯಾಲಯ ಸಂಪರ್ಕ ಉಪಕ್ರಮವನ್ನು ಭಾರತದ ಯುವಜನರಲ್ಲಿ ಭಾರತದ ಜಿ-20 ಅಧ್ಯಕ್ಷತೆ ಬಗ್ಗೆ ತಿಳುವಳಿಕೆ ಮೂಡಿಸಲು ಮತ್ತು ವಿವಿಧ ಜಿ-20 ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ. ಕಾರ್ಯಕ್ರಮವು ದೇಶಾದ್ಯಂತ ವಿಶ್ವವಿದ್ಯಾಲಯಗಳಿಂದ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿದೆ. ಭಾರತದ 75 ವರ್ಷಗಳ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥವಾಗಿ 75 ವಿಶ್ವವಿದ್ಯಾಲಯಗಳಿಗೆ ಆರಂಭದಲ್ಲಿ ಯೋಜಿಸಲಾಗಿತ್ತು, ಈ ಉಪಕ್ರಮವು ಅಂತಿಮವಾಗಿ ದೇಶದ 101 ವಿಶ್ವವಿದ್ಯಾಲಯಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿತು.
G-20 ಯೂನಿವರ್ಸಿಟಿ ಕನೆಕ್ಟ್ ಉಪಕ್ರಮದ ಅಡಿಯಲ್ಲಿ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಯಿತು. ಅವರು ಉನ್ನತ ಶಿಕ್ಷಣ ಸಂಸ್ಥೆಗಳ ವ್ಯಾಪಕ ಭಾಗವಹಿಸುವಿಕೆಯನ್ನು ವೀಕ್ಷಿಸಿದರು. ಇದಲ್ಲದೆ, ಆರಂಭದಲ್ಲಿ ವಿಶ್ವವಿದ್ಯಾನಿಲಯಗಳ ಕಾರ್ಯಕ್ರಮವಾಗಿ ಪ್ರಾರಂಭವಾದವು ಶೀಘ್ರವಾಗಿ ಶಾಲೆಗಳು ಮತ್ತು ಕಾಲೇಜುಗಳನ್ನು ಒಳಗೊಂಡಂತೆ ಬೆಳೆಯಿತು, ಇನ್ನೂ ಹೆಚ್ಚಿನ ಪ್ರೇಕ್ಷಕರನ್ನು ತಲುಪಿತು.
G20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆಯಲ್ಲಿ ಸುಮಾರು 3,000 ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಭಾಗವಹಿಸುವ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ಭಾಗವಹಿಸಿದ್ದರು ಮತ್ತು ದೇಶಾದ್ಯಂತದ ವಿದ್ಯಾರ್ಥಿಗಳು ಲೈವ್ ಈವೆಂಟ್‌ಗೆ ಸೇರಿದರು.
*****
India is witnessing positive transformations powered by Yuva Shakti. Delighted to join energetic youth during the G20 University Connect Finale. https://t.co/BGgttzmvws
— Narendra Modi (@narendramodi) September 26, 2023
Our Yuva Shakti has made India a happening place. pic.twitter.com/5sMko3aPgt
— PMO India (@PMOIndia) September 26, 2023
G20 में कुछ फैसले ऐसे हुए हैं, जो 21वीं सदी की पूरी Direction ही Change करने की क्षमता रखते हैं। pic.twitter.com/WqNqm75kU7
— PMO India (@PMOIndia) September 26, 2023
पिछले 30 दिनों में SC-ST-OBC के लिए, गरीबों और मिडिल क्लास के लिए, उनको Empower करने के लिए भी कई कदम उठाए गए हैं: PM @narendramodi pic.twitter.com/FtpqJHm0FQ
— PMO India (@PMOIndia) September 26, 2023
Youth progress only where there is optimism, opportunities and openness.
— PMO India (@PMOIndia) September 26, 2023
My message to the youth is - 'Think Big': PM @narendramodi pic.twitter.com/TQKceNYYCx
G20 Summit could have been limited to only a diplomatic and Delhi-centric programme.
— PMO India (@PMOIndia) September 26, 2023
But India made it a people-driven national movement. pic.twitter.com/feqx3jF6pi
आज भारत पर दुनिया का भरोसा बुलंद है। pic.twitter.com/0QPXqGY2IV
— PMO India (@PMOIndia) September 26, 2023
दुनिया की प्रगति के लिए भारत की प्रगति, और भारत के युवाओं की प्रगति आवश्यक है। pic.twitter.com/ucKM2Un5E4
— PMO India (@PMOIndia) September 26, 2023
आज हमारे युवाओं की वजह से पूरा भारत एक ‘Happening Place’ बन गया है। पिछले 30 दिनों में इसके कई उदाहरण हमें देखने को मिले हैं… pic.twitter.com/2Y6iWUAjMS
— Narendra Modi (@narendramodi) September 26, 2023
युवा वहीं आगे बढ़ते हैं, जहां Optimism, Opportunities और Openness होती है। आज के भारत में ये सब कुछ है। pic.twitter.com/WiPM985sbO
— Narendra Modi (@narendramodi) September 26, 2023
भारत के युवा इसलिए मेरी असली ताकत और सामर्थ्य हैं… pic.twitter.com/n03TYikeI8
— Narendra Modi (@narendramodi) September 26, 2023
मुझे विश्वास है कि आप देश के लिए इन तीन संकल्पों को जरूर पूरा करेंगे… pic.twitter.com/nEc4akO7pX
— Narendra Modi (@narendramodi) September 26, 2023