Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಿ-20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಜರ್ಮನಿಯ ಫೆಡರಲ್ ರಿಪಬ್ಲಿಕ್‌ ಚಾನ್ಸಲರ್ ಘನತೆವೆತ್ತ ಡಾ. ಏಂಜೆಲಾ ಮರ್ಕೆಲ್ ಅವರೊಂದಿಗೆ ಪ್ರಧಾನಿ ಮೋದಿ ಸಭೆ

ಜಿ-20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಜರ್ಮನಿಯ ಫೆಡರಲ್ ರಿಪಬ್ಲಿಕ್‌ ಚಾನ್ಸಲರ್ ಘನತೆವೆತ್ತ ಡಾ. ಏಂಜೆಲಾ ಮರ್ಕೆಲ್ ಅವರೊಂದಿಗೆ ಪ್ರಧಾನಿ ಮೋದಿ ಸಭೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 31ರಂದು ಇಟಲಿಯ ರೋಮ್ ನಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಜರ್ಮನಿಯ ಫೆಡರಲ್ ಗಣರಾಜ್ಯದ ಚಾನ್ಸಲರ್ ಡಾ. ಏಂಜೆಲಾ ಮರ್ಕೆಲ್ ಅವರನ್ನು ಭೇಟಿ ಮಾಡಿದರು.

ಮರ್ಕೆಲ್‌ ಅವರೊಂದಿಗಿನ ದೀರ್ಘಕಾಲೀನ ಸಹಕಾರ ಮತ್ತು ವೈಯಕ್ತಿಕ ಸ್ನೇಹವನ್ನು ಸ್ಮರಿಸಿದ ಪ್ರಧಾನಿ, ಜರ್ಮನಿಯಲ್ಲಿ ಮಾತ್ರವಲ್ಲದೆ ಯುರೋಪಿಯನ್ ಮತ್ತು ಜಾಗತಿಕ ಮಟ್ಟದಲ್ಲಿ ಚಾನ್ಸಲರ್ ಮರ್ಕೆಲ್ ಅವರ ನಾಯಕತ್ವವನ್ನು ಶ್ಲಾಘಿಸಿದರು. ಡಾ. ಮರ್ಕೆಲ್ ಅವರ ಉತ್ತರಾಧಿಕಾರಿಯೊಂದಿಗೆ ನಿಕಟ ವ್ಯೂಹಾತ್ಮಕ ಪಾಲುದಾರಿಕೆಯನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಮೋದಿ ಅವರು ವ್ಯಕ್ತಪಡಿಸಿದರು.

ಭಾರತ ಮತ್ತು ಜರ್ಮನಿ ನಡುವಿನ ನಿಕಟ ದ್ವಿಪಕ್ಷೀಯ ಸಹಕಾರದ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಜೊತೆಗೆ, ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಸಂಕಲ್ಪ ತೊಟ್ಟರು. ಭಾರತ-ಜರ್ಮನಿ ತಂತ್ರ ಕುಶಲತೆಯ ಪಾಲುದಾರಿಕೆ ವ್ಯಾಪ್ತಿಯನ್ನು ಹಸುರು ಹೈಡ್ರೋಜನ್ ಸೇರಿದಂತೆ ಹೊಸ ಕ್ಷೇತ್ರಗಳಿಗೆ ವಿಸ್ತರಿಸಲು ಅವರು ಸಹಮತ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ಡಾ. ಮರ್ಕೆಲ್ ಅವರ ಭವಿಷ್ಯಕ್ಕಾಗಿ ಶುಭ ಹಾರೈಸಿದರು, ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

***