ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿಂದು ಜಿ-20 ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಮಾವೇಶ ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಇಂದೋರ್‌ಗೆ ಗಣ್ಯರನ್ನು ಸ್ವಾಗತಿಸಿದ ಪ್ರಧಾನ ಮಂತ್ರಿ, ಐತಿಹಾಸಿಕ ಮತ್ತು ರೋಮಾಂಚಕ ನಗರವು ತನ್ನ ಶ್ರೀಮಂತ ಪಾಕಶಾಲೆಯ ಸಂಪ್ರದಾಯಗಳನ್ನು ಹೊಂದಿದೆ. ಇಲ್ಲಿ ನೆರೆದಿರುವ ಗಣ್ಯರು ನಗರ ವೀಕ್ಷಿಸುವ ಜತೆಗೆ, ಆಹಾರದ ಸುವಾಸನೆಗಳನ್ನು ಆನಂದಿಸುತ್ತಾರೆ ಎಂದು ಆಶಿಸಿದರು.
ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಉದ್ಯೋಗ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಉದ್ಯೋಗ ರಂಗದ ಕೆಲವು ಮಹತ್ತರ ಬದಲಾವಣೆಗಳನ್ನು ತರುವ ಹೊಸ್ತಿಲಲ್ಲಿ ಇಡೀ ಜಗತ್ತು ನಿಂತಿದೆ. ಈ ಕ್ಷಿಪ್ರ ಸ್ಥಿತ್ಯಂತರಗಳನ್ನು ಎದುರಿಸಲು ಸ್ಪಂದನಾಶೀಲ ಮತ್ತು ಪರಿಣಾಮಕಾರಿ ಕಾರ್ಯತಂತ್ರಗಳನ್ನು ಸಿದ್ಧಪಡಿಸುವ ಅಗತ್ಯವಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. 4ನೇ ಕೈಗಾರಿಕಾ ಕ್ರಾಂತಿಯ ಈ ಯುಗದಲ್ಲಿ ತಂತ್ರಜ್ಞಾನವು ಉದ್ಯೋಗ ಸೃಷ್ಟಿಯ ಪ್ರಮುಖ ಚಾಲನಾಶಕ್ತಿಯಾಗಿ ಉಳಿಯಲಿದೆ. ಅಂತಹ ತಂತ್ರಜ್ಞಾನ ನೇತೃತ್ವದ ಕೊನೆಯ ರೂಪಾಂತರದ ಸಮಯದಲ್ಲಿ ಅಸಂಖ್ಯಾತ ತಂತ್ರಜ್ಞಾನ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಅಂತಹ ರೂಪಾಂತರಗಳ ಹೊಸ ಅಲೆಯನ್ನು ಮುನ್ನಡೆಸುವ ಅನೇಕ ಸ್ಟಾರ್ಟಪ್‌ಗಳಿಗೆ ನೆಲೆಯಾಗಿರುವ ಆತಿಥೇಯ ನಗರ ಇಂದೋರ್ ಎಂದು ಪ್ರಧಾನಿ ಹೇಳಿದರು.
ಸುಧಾರಿತ ತಂತ್ರಜ್ಞಾನಗಳು ಮತ್ತು ಪ್ರಕ್ರಿಯೆಗಳ ಬಳಕೆಯಿಂದ ಉದ್ಯೋಗಿಗಳನ್ನು ಕೌಶಲ್ಯಗೊಳಿಸಬೇಕು. ಕೌಶಲ್ಯ, ಮರುಕೌಶಲ್ಯ ಮತ್ತು ಕೌಶಲ್ಯ ಮೇಲ್ದರ್ಜೆಯು ಭವಿಷ್ಯದ ಉದ್ಯೋಗಿಗಳ ಮಂತ್ರಗಳಾಗಿವೆ ಎಂದು ಪ್ರಧಾನಿ, ಭಾರತದ ‘ಸ್ಕಿಲ್ ಇಂಡಿಯಾ ಮಿಷನ್’ನ ಉದಾಹರಣೆ ನೀಡಿದರು. ಇದುವರೆಗೆ ಭಾರತದ 12.5 ದಶಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಿದ ‘ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ’. “ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೊಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಡ್ರೋನ್‌ಗಳಂತಹ 4 ಪ್ರಮುಖ ಉದ್ಯಮ ಕ್ಷೇತ್ರಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸಲಾಗಿದೆ” ಎಂದು ಪ್ರಧಾನ ಮಂತ್ರಿ ಹೇಳಿದರು.
ಕೋವಿಡ್ ಸಮಯದಲ್ಲಿ ಭಾರತದ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ ಕೌಶಲ್ಯ ಮತ್ತು ಸಮರ್ಪಣೆಯನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಇದು ಭಾರತದ ಸೇವೆ ಮತ್ತು ಸಹಾನುಭೂತಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ವಿಶ್ವದಲ್ಲಿ ನುರಿತ ಉದ್ಯೋಗಿಗಳನ್ನು ಒದಗಿಸುವ ಅತಿದೊಡ್ಡ ಪೂರೈಕೆದಾರರಲ್ಲಿ ಒಂದಾಗುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಜಾಗತಿಕವಾಗಿ ಮೊಬೈಲ್ ಕಾರ್ಯಪಡೆಯು ಭವಿಷ್ಯದಲ್ಲಿ ನಿಜವಾಗಲಿದೆ. ನಿಜವಾದ ಅರ್ಥದಲ್ಲಿ ಕೌಶಲ್ಯಗಳ ಅಭಿವೃದ್ಧಿ ಮತ್ತು ಹಂಚಿಕೆಯನ್ನು ಜಾಗತೀಕರಣಗೊಳಿಸುವಲ್ಲಿ ಜಿ-20 ಪಾತ್ರ ಪ್ರಮುಖವಾಗಿದೆ. ಕೌಶಲ್ಯ ಮತ್ತು ಅರ್ಹತೆಗಳ ಅಗತ್ಯತೆಗಳ ಮೂಲಕ ಉದ್ಯೋಗಗಳ ಅಂತಾರಾಷ್ಟ್ರೀಯ ಉಲ್ಲೇಖ ಪ್ರಾರಂಭಿಸಲು ಸದಸ್ಯ ರಾಷ್ಟ್ರಗಳ ಪ್ರಯತ್ನಗಳು ಶ್ಲಾಘನೀಯವಾಗಿವೆ. ಇದಕ್ಕೆ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮನ್ವಯದ ಹೊಸ ಮಾದರಿಗಳು, ವಲಸೆ ಮತ್ತು ಚಲನಶೀಲ ಪಾಲುದಾರಿಕೆಗಳ ಅಗತ್ಯವಿದೆ. ಉದ್ಯೋಗದಾತರು ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಅಂಕಿಅಂಶಗಳು, ಮಾಹಿತಿ ಮತ್ತು ದತ್ತಾಂಶವನ್ನು ಹಂಚಿಕೊಳ್ಳಬೇಕು. ಇದು ಉತ್ತಮ ಕೌಶಲ್ಯ, ಉದ್ಯೋಗಿಗಳ ಯೋಜನೆ ಮತ್ತು ಲಾಭದಾಯಕ ಉದ್ಯೋಗಕ್ಕಾಗಿ ಪುರಾವೆ ಆಧಾರಿತ ನೀತಿಗಳನ್ನು ರೂಪಿಸಲು ಜಗತ್ತಿನಾದ್ಯಂತ ದೇಶಗಳಿಗೆ ಅಧಿಕಾರ ನೀಡುತ್ತದೆ ಎಂದರು.
ಸಾಂಕ್ರಾಮಿಕ ಸೋಂಕಿನ ಸಮಯದಲ್ಲಿ ಹೊಂದಾಣಿಕೆಯ ಆಧಾರಸ್ತಂಭವಾಗಿ ಹೊರಹೊಮ್ಮಿದ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಆರ್ಥಿಕತೆಯಲ್ಲಿ ಹೊಸ ವರ್ಗಗಳ ಕಾರ್ಮಿಕರ ವಿಕಸನವೇ ಪರಿವರ್ತಕ ಬದಲಾವಣೆಯಾಗಿದೆ. ಇದು ಹೊಂದಾಣಿಕೆಯ ಕೆಲಸದ ವ್ಯವಸ್ಥೆಗಳನ್ನು ನೀಡುತ್ತದೆ, ಆದಾಯದ ಮೂಲಗಳಿಗೂ ಪೂರಕವಾಗಿದೆ. ಇದು ಲಾಭದಾಯಕ ಉದ್ಯೋಗಗಳನ್ನು ಸೃಷ್ಟಿಸುವ ಅಪಾರ ಸಾಮರ್ಥ್ಯ ಹೊಂದಿದೆ, ವಿಶೇಷವಾಗಿ ಯುವಕರಿಗೆ ಮತ್ತು ಮಹಿಳೆಯರ ಸಾಮಾಜಿಕ, ಆರ್ಥಿಕ ಸಬಲೀಕರಣಕ್ಕೆ ಪರಿವರ್ತಕ ಸಾಧನವಾಗಿದೆ. ಹಾಗಾಗಿ, ಅದರ ಸಾಮರ್ಥ್ಯವನ್ನು ಅರಿತುಕೊಳ್ಳುವ ಅಗತ್ಯವಿದೆ. ಈ ಹೊಸ ಯುಗದ ಕೆಲಸಗಾರರಿಗೆ ಹೊಸ ಯುಗದ ನೀತಿಗಳು ಮತ್ತು ಮಧ್ಯಸ್ಥಿಕೆಗಳನ್ನು ವಿನ್ಯಾಸಗೊಳಿಸಬೇಕು. ನಿಯಮಿತ ಕೆಲಸಕ್ಕೆ ಅವಕಾಶಗಳನ್ನು ಸೃಷ್ಟಿಸಲು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳಲು ಹೊಸ ಮಾದರಿಗಳೊಂದಿಗೆ ಬರಬೇಕು. ಸುಮಾರು 280 ದಶಲಕ್ಷ ನೋಂದಣಿಗಳನ್ನು ಕಂಡಿರುವ ಭಾರತದ ‘ಇಶ್ರಮ್ ಪೋರ್ಟಲ್’ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಈ ಕಾರ್ಮಿಕರಿಗೆ ಉದ್ದೇಶಿತ ಮಧ್ಯಸ್ಥಿಕೆಗಳಿಗಾಗಿ ಹತೋಟಿ ಹೊಂದಲಾಗುತ್ತಿದೆ. ಕೆಲಸದ ಸ್ವರೂಪವು ಬಹುರಾಷ್ಟ್ರೀಯವಾಗಿರುವುದರಿಂದ ದೇಶಗಳು ಇದೇ ರೀತಿಯ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜನರಿಗೆ ಸಾಮಾಜಿಕ ರಕ್ಷಣೆ ಒದಗಿಸುವುದು 2030ರ ಕಾರ್ಯಸೂಚಿಯ ಪ್ರಮುಖ ಅಂಶವಾಗಿದ್ದರೂ, ಅಂತಾರಾಷ್ಟ್ರೀಯ ಸಂಸ್ಥೆಗಳು ಅಳವಡಿಸಿಕೊಂಡಿರುವ ಪ್ರಸ್ತುತ ಮಾರ್ಗಸೂಚಿಯು ಕೆಲವು ಸಂಕುಚಿತ ರೀತಿಯಲ್ಲಿ ರಚನಾತ್ಮಕವಾಗಿರುವ ಪ್ರಯೋಜನಗಳನ್ನು ಮಾತ್ರ ಪರಿಗಣಿಸುತ್ತದೆ. ಇತರೆ ರೂಪಗಳಲ್ಲಿ ಒದಗಿಸಲಾದ ಹಲವಾರು ಪ್ರಯೋಜನಗಳನ್ನು ಒಳಗೊಂಡಿಲ್ಲ. ಈ ಮಾರ್ಗಸೂಚಿಯ ಅಡಿ, ಭಾರತದಲ್ಲಿ ಸಾಮಾಜಿಕ ಸಂರಕ್ಷಣಾ ವ್ಯಾಪ್ತಿಯ ಸರಿಯಾದ ಚಿತ್ರವನ್ನು ಗ್ರಹಿಸಲು, ಸಾರ್ವತ್ರಿಕ ಸಾರ್ವಜನಿಕ ಆರೋಗ್ಯ, ಆಹಾರ ಭದ್ರತೆ, ವಿಮೆ ಮತ್ತು ಪಿಂಚಣಿ ಕಾರ್ಯಕ್ರಮಗಳಂತಹ ಪ್ರಯೋಜನಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಪ್ರತಿಯೊಂದು ದೇಶದ ವಿಶಿಷ್ಟ ಆರ್ಥಿಕ ಸಾಮರ್ಥ್ಯಗಳು, ಬಲಗಳು ಮತ್ತು ಸವಾಲುಗಳನ್ನು ಪರಿಗಣಿಸಬೇಕು. ಏಕೆಂದರೆ ಸಾಮಾಜಿಕ ರಕ್ಷಣೆಯ ಸಮರ್ಥನೀಯ ಅಥವಾ ಸುಸ್ಥಿರ ಹಣಕಾಸಿಗಾಗಿ ಏಕಮುಖ ನೀತಿಯು ಕಾರ್ಯವಿಧಾನ ಸೂಕ್ತವಲ್ಲ ಎಂದರು.
ಈ ಸಭೆಯು ವಿಶ್ವಾದ್ಯಂತ ಎಲ್ಲ ಕಾರ್ಮಿಕರ ಕಲ್ಯಾಣಕ್ಕಾಗಿ ಬಲವಾದ ಸಂದೇಶವನ್ನು ರವಾನಿಸುತ್ತದೆ ಎಂಬ ವಿಶ್ವಾಸ ತಮಗಿದೆ. ಈ ಕ್ಷೇತ್ರದ ಕೆಲವು ತುರ್ತು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಲ್ಲಾ ಗಣ್ಯರು ಮಾಡುತ್ತಿರುವ ಪ್ರಯತ್ನವನ್ನು ಅವರು ಶ್ಲಾಘಿಸಿ, ಪ್ರಧಾನ ಮಂತ್ರಿ ಅವರು, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
***
Sharing my remarks at the G20 Labour and Employment Ministers' Meeting. @g20org https://t.co/lyCVUY5lwz
— Narendra Modi (@narendramodi) July 21, 2023