Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಿನೀವಾದಲ್ಲಿ ಸ್ವಿಸ್ ಸಿ.ಇ.ಓ.ಗಳನ್ನು ಭೇಟಿ ಮಾಡಿದ ಪ್ರಧಾನಿ, ಆರ್ಥಿಕ ಬಾಂಧವ್ಯವನ್ನು ಬಲಪಡಿಸಲು ಗಮನ

ಜಿನೀವಾದಲ್ಲಿ ಸ್ವಿಸ್ ಸಿ.ಇ.ಓ.ಗಳನ್ನು ಭೇಟಿ ಮಾಡಿದ ಪ್ರಧಾನಿ, ಆರ್ಥಿಕ ಬಾಂಧವ್ಯವನ್ನು ಬಲಪಡಿಸಲು ಗಮನ

ಜಿನೀವಾದಲ್ಲಿ ಸ್ವಿಸ್ ಸಿ.ಇ.ಓ.ಗಳನ್ನು ಭೇಟಿ ಮಾಡಿದ ಪ್ರಧಾನಿ, ಆರ್ಥಿಕ ಬಾಂಧವ್ಯವನ್ನು ಬಲಪಡಿಸಲು ಗಮನ


ವಾಣಿಜ್ಯದಲ್ಲಿ ಸಹಯೋಗ, ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಮತ್ತು ಪುನರ್ನವೀಕರಿಸುವ ಇಂಧನ ಕುರಿತು ಸ್ವಿಸ್ ಅಧ್ಯಕ್ಷರೊಂದಿಗೆ ಚರ್ಚೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಐದು ರಾಷ್ಟ್ರಗಳ ಪ್ರವಾಸದ ಮೂರನೇ ಚರಣದಲ್ಲಿಂದು ಜಿನೀವಾದಲ್ಲಿ ಸ್ವಿಸ್ ಸಿ.ಇ.ಓ.ಗಳೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಚರ್ಚೆ ನಡೆಸಿದರು. ವಿವಿಧ ವಲಯಗಳ ಸಿ.ಇ.ಓ.ಗಳು ಸಭೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಆರ್ಥಿಕ ಬಾಂಧವ್ಯವನ್ನು ಬಲಪಡಿಸುವ ಬಗ್ಗೆ ಗಮನಹರಿಸಲಾಯಿತು. ಎ.ಬಿ.ಸಿ., ಲಫಾರ್ಜ್, ನೊವಾರ್ಟಿಸ್, ನೆಸ್ಲೆ, ರಿಯೇಟರ್, ರೋಚೆ ಇತ್ಯಾದಿ ಕಂಪನಿಗಳು ಸೇರಿದಂತೆ ಸ್ವಿಸ್ ವ್ಯಾಪಾರದ ವಾಸ್ತವ ಸಂಸ್ಥೆಗಳು ಪ್ರಧಾನಿಯವರೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದರು

ವಾಣಿಜ್ಯೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಭಾರತದ ಆರ್ಥಿಕತೆಯು ತ್ವರಿತವಾಗಿ ಬೆಳೆಯುತ್ತಿದೆ ಮತ್ತು ನಮ್ಮ ಅಭಿವೃದ್ಧಿಯ ಅಗತ್ಯಗಳಿಗೆ ಅನುಗುಣವಾಗಿ ನಮ್ಮೊಟ್ಟಿಗೆ ಬರುತ್ತಿವೆ ಹಾಗೂ ಸ್ವಿಸ್ ಶಕ್ತಿ ಕೂಡ ಲಾಭದಾಯಕವಾಗಿದೆ ಎಂದರು. ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ನಂಟು ಬಲಯುತ ಹಾಗೂ ಚೈತನ್ಯದಾಯಕವಾಗಿದೆ ಎಂದು ಹೇಳಲು ನಾನು ಹರ್ಷಿತನಾಗಿದ್ದೇನೆ ಎಂದರು. ಭಾರತ ಕೇವಲ 125 ಕೋಟಿ ಜನರ ಮಾರುಕಟ್ಟೆಯಲ್ಲ, ನಮ್ಮಲ್ಲಿ ಕೌಶಲವಿದೆ ಮತ್ತು ಸರ್ಕಾರ ವ್ಯಾಪಾರ ಕ್ಷೇತ್ರಕ್ಕೆ ಮುಕ್ತವಾಗಿದೆ ಎಂದರು. ಭಾರತವು ವಿಶ್ವದರ್ಜೆಯ ಉತ್ಪಾದನೆಯನ್ನು ಬಯಸುತ್ತದೆ ಹೀಗಾಗಿ ಸ್ವಿಸ್ ಮಾದರಿಯ ಕೌಶಲ ಅಭಿವೃದ್ಧಿ ಇದಕ್ಕೆ ಅತ್ಯಂತ ಸೂಕ್ತವಾಗಿದೆ ಎಂದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಸ್ವಿಸ್ ಅಧ್ಯಕ್ಷ ಷ್ನೇಯ್ಡರ್-ಅಮ್ಮನ್ ಅವರೊಂದಿಗೆ ಭಾರತ ಮತ್ತು ಸ್ವಿಜರ್ಲ್ಯಾಂಡ್ ನ ಬಹುಶ್ರುತ ದ್ವಿಪಕ್ಷೀಯ ಬಾಂಧವ್ಯದ ಪರಾಮರ್ಶೆ ನಡೆಸಿದರು. ವಾಣಿಜ್ಯದ ಸಹಯೋಗ, ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ಪುನರ್ನವೀಕರಿಸುವ ಇಂಧನದ ವಿಚಾರಗಳು ಮಾತುಕತೆಯ ವೇಳೆ ಚರ್ಚೆಗೆ ಬಂದವು. ಪ್ರಧಾನಮಂತ್ರಿಯವರು ಭಾರತ- ಸ್ವಿಜರ್ಲ್ಯಾಂಡ್ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲ ಸಾಮಾನ್ಯ ಬದ್ಧತೆ, ಮೌಲ್ಯಗಳು, ಜನರಿಂದ ಜನರಿಗೆ ಮತ್ತು ಆರ್ಥಿಕ ಬಾಂಧವ್ಯದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಜೀನಿವಾದಲ್ಲಿಂದು ಸಿ.ಇ.ಆರ್.ಎನ್ ನಲ್ಲಿ ಭಾರತೀಯ ವಿಜ್ಞಾನಿಗಳ ಮತ್ತು ವಿದ್ಯಾರ್ಥಿಗಳ ಗುಂಪು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿತು.