Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾರ್ಖಂಡ್ ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ

ಜಾರ್ಖಂಡ್ ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ

ಜಾರ್ಖಂಡ್ ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ

ಜಾರ್ಖಂಡ್ ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಜಾರ್ಖಂಡ್ ನ ಸಾಹೇಬ್ ಜಂಗ್ ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಗಂಗಾ ನದಿಯ ಮೇಲೆ ಒಂದು ಬಹು ಮಾದರಿ ಟರ್ಮಿನಲ್ ಮತ್ತು ನಾಲ್ಕು ಪಥದ ಸೇತುವೆ ಕಾಮಗಾರಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಬಹು ಮಾದರಿ ಟರ್ಮಿನಲ್ ವಾರಾಣಸಿಯಿಂದ ಹಾಲ್ಡಿಯಾವರೆಗಿನ ರಾಷ್ಟ್ರೀಯ ಜಲ ಮಾರ್ಗ 1ರ ಮಹತ್ವದ ಸಾಧನವಾಗಿದೆ.

ಪ್ರಧಾನಮಂತ್ರಿಯವರು 311 ಕಿ.ಮೀ. ಉದ್ದದ ಗೋವಿಂದಪುರ್-ಜಮ್ತಾರ –ದುಮ್ಕಾ-ಸಾಹೇಬ್ ಗಂಜ್ ಹೆದ್ದಾರಿ ಉದ್ಘಾಟಿಸಿದರು ಮತ್ತು ಸಾಹೇಬ್ ಗಂಜ್ ಜಿಲ್ಲಾ ನ್ಯಾಯಾಲಯ ಆವರಣ ಮತ್ತು ಸಾಹೇಬ್ ಗಂಜ್ ಜಿಲ್ಲಾ ಆಸ್ಪತ್ರೆಯಲ್ಲಿ ಸೌರ ವಿದ್ಯುತ್ ಸೌಲಭ್ಯವನ್ನು ದೇಶಕ್ಕೆ ಸಮರ್ಪಿಸಿದರು.
ಪ್ರಧಾನಮಂತ್ರಿಯವರು ಫಾರಿಯಾ ವಿಶೇಷ ಭಾರತೀಯ ಮೀಸಲು ತುಕಡಿಯ ಕಾನ್ಸ್ ಟೇಬಲ್ ಗಳಿಗೆ ನೇಮಕಾತಿ ಪ್ರಮಾಣ ಪತ್ರವನ್ನು ಹಾಗೂ ಸ್ವ ಸಹಾಯ ಗುಂಪುಗಳ ಮಹಿಳಾ ಉದ್ದಿಮೆದಾರರಿಗೆ ಸ್ಮಾರ್ಟ್ ಫೋನ್ ಗಳನ್ನು ಸಾಂಕೇತಿಕವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಅಭಿವೃದ್ಧಿ ಯೋಜನೆಗಳು ಸಂತಾಲ್ ಪರಗಣ ಪ್ರದೇಶಕ್ಕೆ ಲಾಭತರಲಿದೆ, ಮತ್ತು ಜೊತೆಗೆ ಗುಡ್ಡಗಾಡು ಸಮುದಾಯದ ಸಬಲೀಕರಣಕ್ಕೆ ಕಾರಣವಾಗಲಿದೆ ಎಂದರು. ಭಾರತದಲ್ಲಿನ ಬಡಜನರು ಗೌರವದ ಜೀವನ ನಡೆಸಲು ಬಯಸುತ್ತಾರೆ, ಮತ್ತು ಅದಕ್ಕಾಗಿ ತಮಗೆ ಅವಕಾಶಗಳನ್ನು ಕೇಳುತ್ತಾರೆ. ಅವರ ಸಾಮರ್ಥ್ಯದ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಭಾರತದಲ್ಲಿ ಈಗ ಪ್ರಾಮಾಣಿಕತೆಯ ಯುಗ ಆರಂಭವಾಗಿದೆ ಎಂದು ಪ್ರಧಾನಿ ಹೇಳಿದರು. ಬಡವರು ತಮ್ಮ ಬಾಕಿ ಪಡೆಯುವುದನ್ನು ಖಾತ್ರಿಪಡಿಸುವ ತಮ್ಮ ಪ್ರಯತ್ನಕ್ಕೆ ಹರಸುವಂತೆ ಜನತೆಯನ್ನು ಪ್ರಧಾನಿ ಕೋರಿದರು.

****

AKT/NT