Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ (ಎಲ್.ಎಚ್.ಡಿ.ಸಿ.ಪಿ.) ಪರಿಷ್ಕರಣೆಗೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ (ಎಲ್.ಎಚ್.ಡಿ.ಸಿ.ಪಿ.) ಪರಿಷ್ಕರಣೆಗೆ ತನ್ನ ಅನುಮೋದನೆ ನೀಡಿದೆ.

ಈ ಯೋಜನೆಯು ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಎನ್ಎಡಿಸಿಪಿ), ಎಲ್ಎಚ್ ಮತ್ತು ಡಿಸಿ ಮತ್ತು ಪಶು ಔಷಧಿ ಎಂಬ ಮೂರು ಘಟಕಗಳನ್ನು ಹೊಂದಿದೆ. ಎಲ್ಎಚ್ ಮತ್ತು ಡಿಸಿ ಮೂರು ಉಪ ಘಟಕಗಳನ್ನು ಹೊಂದಿದೆ. ಅವುಗಳೆಂದರೆ ನಿರ್ಣಾಯಕ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಸಿಎಡಿಸಿಪಿ), ಅಸ್ತಿತ್ವದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗಳು ಮತ್ತು ಔಷಧಾಲಯಗಳ ಸ್ಥಾಪನೆ ಮತ್ತು ಬಲಪಡಿಸುವುದು – ಸಂಚಾರಿ ಪಶುವೈದ್ಯಕೀಯ ಘಟಕ (ಇಎಸ್ ವಿ ಎಚ್ ಡಿ-ಎಂವಿಯು) ಮತ್ತು ಪ್ರಾಣಿ ರೋಗಗಳ ನಿಯಂತ್ರಣಕ್ಕಾಗಿ ರಾಜ್ಯಗಳಿಗೆ ನೆರವು (ಎಎಸ್ ಸಿ ಎಡಿ). ಪಶು ಔಷಧಿ ಎಲ್ ಎಚ್ ಡಿಸಿಪಿ ಯೋಜನೆಗೆ ಸೇರಿಸಲಾದ ಹೊಸ ಘಟಕವಾಗಿದೆ. ಈ ಯೋಜನೆಯ ಒಟ್ಟು ವೆಚ್ಚ 2024-25 ಮತ್ತು 2025-26ನೇ ಸಾಲಿಗೆ 3,880 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಜೆನೆರಿಕ್ ಪಶುವೈದ್ಯಕೀಯ ಔಷಧವನ್ನು ಒದಗಿಸಲು 75 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಮತ್ತು ಪಶು ಔಷಧಿ ಘಟಕದಡಿ ಔಷಧಿಗಳ ಮಾರಾಟಕ್ಕೆ ಪ್ರೋತ್ಸಾಹಧನ ನೀಡಲಾಗಿದೆ.

ಕಾಲು ಮತ್ತು ಬಾಯಿ ರೋಗ (ಎಫ್ಎಂಡಿ), ಬ್ರುಸೆಲ್ಲೋಸಿಸ್, ಪೆಸ್ಟೆ ಡೆಸ್ ಪೆಟಿಟ್ಸ್ ರುಮಿನಂಟ್ಸ್ (ಪಿಪಿಆರ್), ಸೆರೆಬ್ರೊಸ್ಪೈನಲ್ ಫ್ಲೂಯಿಡ್ (ಸಿಎಸ್ಎಫ್), ಲಂಪಿ ಚರ್ಮ ರೋಗ ಮುಂತಾದ ರೋಗಗಳಿಂದಾಗಿ ಜಾನುವಾರುಗಳ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಎಲ್ಎಚ್ ಡಿಸಿಪಿಯ ಅನುಷ್ಠಾನವು ರೋಗನಿರೋಧಕತೆಯ ಮೂಲಕ ರೋಗಗಳನ್ನು ತಡೆಗಟ್ಟುವ ಮೂಲಕ ಈ ನಷ್ಟಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಯೋಜನೆಯು ಸಂಚಾರಿ ಪಶುವೈದ್ಯಕೀಯ ಘಟಕಗಳ (ಇಎಸ್ ವಿ ಎಚ್ ಡಿ-ಎಂವಿಯು) ಉಪ ಘಟಕಗಳ ಮೂಲಕ ಜಾನುವಾರು ಆರೋಗ್ಯ ರಕ್ಷಣೆಯನ್ನು ಮನೆ ಬಾಗಿಲಿಗೆ ತಲುಪಿಸಲು ಮತ್ತು ಪಿಎಂ-ಕಿಸಾನ್ ಸಮೃದ್ಧಿ ಕೇಂದ್ರ ಮತ್ತು ಸಹಕಾರಿ ಸಂಘಗಳ ಜಾಲದ ಮೂಲಕ ಜೆನೆರಿಕ್ ಪಶುವೈದ್ಯಕೀಯ ಔಷಧಿ – ಪಶು ಔಷಧಿಯ ಲಭ್ಯತೆಯನ್ನು ಸುಧಾರಿಸಲು ಬೆಂಬಲಿಸುತ್ತದೆ.

ಹೀಗಾಗಿ, ಲಸಿಕೆ, ಕಣ್ಗಾವಲು ಮತ್ತು ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಜಾನುವಾರು ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಈ ಯೋಜನೆ ಸಹಾಯ ಮಾಡುತ್ತದೆ. ಅಲ್ಲದೆ, ಈ ಯೋಜನೆಯು ಉತ್ಪಾದಕತೆಯನ್ನು ಸುಧಾರಿಸುತ್ತದೆ, ಉದ್ಯೋಗವನ್ನು ಸೃಷ್ಟಿಸುತ್ತದೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ರೋಗದ ಹೊರೆಯಿಂದ ರೈತರ ಆರ್ಥಿಕ ನಷ್ಟವನ್ನು ತಡೆಯುತ್ತದೆ.

 

*****