Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾಗತಿಕ ಆರ್ಥಿಕತೆ ಉತ್ತೇಜನಕ್ಕೆ ಭಾರತದಲ್ಲೇ ತಯಾರಿಸಿ ಉಪಕ್ರಮದ ಯಶೋಗಾಥೆಗೆ ಪ್ರಧಾನಮಂತ್ರಿ ಮೆಚ್ಚುಗೆ 


ಜಾಗತಿಕ ಆರ್ಥಿಕ ವೃದ್ಧಿಗೆ ಭಾರತದಲ್ಲೇ ತಯಾರಿಸಿ (ಮೇಕ್ ಇನ್‌ ಇಂಡಿಯಾ) ಉಪಕ್ರಮದ ಯಶೋಗಾಥೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಭಾರತದ ಆರ್ಥಿಕತೆಯನ್ನು ಜಾಗತಿಕ ವೇದಿಕೆಗೆ ಕರೆದೊಯ್ಯುವಲ್ಲಿ ಹೇಗೆ ಮೇಕ್‌ ಇನ್‌ ಇಂಡಿಯಾ ಉಪಕ್ರಮ ಪೂರಕವಾಗಿದೆ ಎಂಬ ಬಗ್ಗೆ ಶ್ರೀ ನರೇಂದ್ರ ಮೋದಿ ಅವರು ಕಿರು ನೋಟವನ್ನು ಹಂಚಿಕೊಂಡಿದ್ದಾರೆ.

ಮೇಕ್‌ ಇನ್‌ ಇಂಡಿಯಾ ಉಪಕ್ರಮದ ಫಲವಾಗಿ ಭಾರತದಲ್ಲಿ ತಯಾರಿಸಲ್ಪಟ್ಟ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ದೊರೆಯುತ್ತಿರುವ ಬಗೆಗಿನ #MyGovIndia ದ ಎಕ್ಸ್ ಪೋಸ್ಟ್‌ ಗಳಿಗೆ ಪ್ರಧಾನಮಂತ್ರಿಗಳು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ:

“ಜಾಗತಿಕ ವೇದಿಕೆಯತ್ತ ಭಾರತದ ಆರ್ಥಿಕತೆಯನ್ನು “ಮೇಕ್‌ ಇನ್‌ ಇಂಡಿಯಾ””ಉಪಕ್ರಮ ತಂದಿರುವ ಬಗೆಯ ಬಗ್ಗೆ ಇಣುಕು ನೋಟ!”.

 

 

*****