Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಜರ್ಮನ್ ಗಾಯಕಿ ಕಸ್ಸಂದ್ರ ಮೇ ಸ್ಪಿಟ್‌ಮನ್ ಭೇಟಿಯಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಲ್ಲಡಂನಲ್ಲಿ ಜರ್ಮನ್ ಗಾಯಕಿ ಕಸ್ಸಂದ್ರ ಮೇ ಸ್ಪಿಟ್ಮನ್ ಮತ್ತು ಅವರ ತಾಯಿಯನ್ನು ಭೇಟಿ ಮಾಡಿದರು.

ಈ ಹಿಂದೆ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಸ್ಸಂದ್ರ ಮೇ ಸ್ಪಿಟ್‌ಮನ್ ಅವರ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಅವರು ಅನೇಕ ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನು, ವಿಶೇಷವಾಗಿ ಭಕ್ತಿಗೀತೆಗಳನ್ನು ಹಾಡುತ್ತಾರೆ.

ಇಂದು ಅವರು ಪ್ರಧಾನಿ ಮೋದಿಯವರ ಮುಂದೆ ಅಚ್ಯುತಮ್ ಕೇಶವಂ ಮತ್ತು ತಮಿಳು ಗೀತೆಯೊಂದನ್ನು ಹಾಡಿದ್ದಾರೆ.

ಈ ಬಗ್ಗೆ ವಿಡಿಯೊ ಹಂಚಿಕೊಂಡು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, “ನಮ್ಮ ಮಾತುಕತೆ ವೇಳೆ ನಾನು ಕಂಡಂತೆ ಕಸ್ಸಂದ್ರ ಮೇ ಸ್ಪಿಟ್‌ಮನ್‌ ಅವರಿಗೆ ಭಾರತದ ಮೇಲೆ ಇರುವ ಪ್ರೀತಿ ಅನುಕರಣೀಯವಾಗಿದೆ. ಅವರ ಮುಂದಿನ ಪಯಣಕ್ಕೆ ನನ್ನ ಶುಭಾಶಯಗಳು.” ಎಂದು ಬರೆದುಕೊಂಡಿದ್ದಾರೆ.

***