Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಯಪ್ರಕಾಶ್ ನಾರಾಯಣ್ ಜಯಂತಿ: ಪ್ರಧಾನಮಂತ್ರಿ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ನಾನಾಜಿ ದೇಶಮುಖ್ ಅವರ ಜಯಂತಿಯಂದು ನಮನ ಸಲ್ಲಿಸಿದ್ದಾರೆ.

ಲೋಕನಾಯಕ ಜೆಪಿ ಅವರಿಗೆ ಅವರ ಜಯಂತಿಯ ದಿನದಂದು ನಮನ ಸಲ್ಲಿಸುತ್ತೇನೆ. ಭಾರತದ ಸ್ವಾತಂತ್ರ್ಯಕ್ಕಾಗಿ ಶೌರ್ಯದಿಂದ ಹೋರಾಡಿ, ನಮ್ಮ ಪ್ರಜಾಪ್ರಭುತ್ವದ ತತ್ವಗಳು ಆಕ್ರಮಣಕ್ಕೊಳಗಾದಾಗ, ಅದನ್ನು ರಕ್ಷಿಸಲು ಅವರು ಬಲವಾದ ಜನಾಂದೋಲನವನ್ನು ಮುನ್ನಡೆಸಿದರು. ಅವರಿಗೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನರ ಕಲ್ಯಾಣಕ್ಕಿಂತ ಮಿಗಿಲಾದ್ದು ಬೇರೆ ಏನೂ ಇರಲಿಲ್ಲ. ಎಂದು ಪ್ರಧಾನಿ ತಿಳಿಸಿದ್ದಾರೆ.

ಮಹಾನ್ ನಾಯಕ ನಾನಾಜಿ ದೇಶ್ ಮುಖ್ ಅವರು ಜೆಪಿ ಅವರ ನಿಷ್ಠಾವಂತ ಅನುಯಾಯಿಗಳಲ್ಲಿ ಒಬ್ಬರಾಗಿದ್ದರು. ಜೆಪಿ ಅವರ ಚಿಂತನೆಗಳು ಮತ್ತು ಆದರ್ಶಗಳನ್ನು ಜನಪ್ರಿಯಗೊಳಿಸಲು ಅವರು ಅವಿಶ್ರಾಂತವಾಗಿ ಶ್ರಮಿಸಿದರು. ಗ್ರಾಮೀಣಾಭಿವೃದ್ಧಿಯ ನಿಟ್ಟಿನಲ್ಲಿ ಅವರ ಕಾರ್ಯ ನಮಗೆ ಸ್ಫೂರ್ತಿ ನೀಡುತ್ತದೆ. ಭಾರತರತ್ನ ನಾನಾಜಿ ದೇಶ್ ಮುಖ್ ಅವರನ್ನು ಅವರ ಜಯಂತಿಯಂದು ಸ್ಮರಿಸುತ್ತೇನೆ.

ಲೋಕನಾಯಕ ಜೆಪಿ ಮತ್ತು ನಾನಾಜಿ ದೇಶಮುಖ್ ಅವರಂಥ ಮಹಾನ್ ವ್ಯಕ್ತಿಗಳು ಭೂಮಿಯಲ್ಲಿ ಜನಿಸಿದ್ದಾರೆ ಎಂದು ಭಾರತ ಹೆಮ್ಮೆ ಪಡುತ್ತದೆ. ನಮ್ಮ ರಾಷ್ಟ್ರಕ್ಕಾಗಿ ಅವರು ಹೊಂದಿದ್ದ ದೃಷ್ಟಿಕೋನವನ್ನು ಈಡೇರಿಸುವ ಕಡೆಗೆ ನಮ್ಮನ್ನು ಸಮರ್ಪಿಸಿಕೊಳ್ಳುವ ದಿನ ಇಂದು.ಎಂದು ಪ್ರಧಾನಿ ತಿಳಿಸಿದ್ದಾರೆ.

***