Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಮ್ಮು ಮತ್ತು ಕಾಶ್ಮೀರದ ವಾಣಿಜ್ಯೋದ್ಯಮಿ ಮತ್ತು ಸರ್ಕಾರಿ ಫಲಾನುಭವಿ ಶ್ರೀ ನಜೀಮ್ ಅವರೊಂದಿಗೆ ಸೆಲ್ಫಿಗೆ ಪೋಸ್ ನೀಡಿದ ಪ್ರಧಾನಮಂತ್ರಿ


ವಿಕಸಿತ  ಭಾರತ ವಿಕಸಿತ ಜಮ್ಮು ಕಾಶ್ಮೀರ ಕಾರ್ಯಕ್ರಮದಲ್ಲಿ ಜನತೆಯೊಂದಿಗೆ ಸಂವಾದದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ವಾಣಿಜ್ಯೋದ್ಯಮಿ ಮತ್ತು ಸರ್ಕಾರಿ ಫಲಾನುಭವಿ ಶ್ರೀ ನಜೀಮ್ ಅವರ ಕೋರಿಕೆಯ ಮೇರೆಗೆ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಲ್ಫಿಗೆ ಪೋಸ್ ನೀಡಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

 “ನನ್ನ ಸ್ನೇಹಿತ ಶ್ರೀ ನಜೀಮ್ ಜೊತೆ ಒಂದು ಸ್ಮರಣೀಯ ಸೆಲ್ಫಿ. ಅವರು ಮಾಡುತ್ತಿರುವ ಒಳ್ಳೆಯ ಕೆಲಸದಿಂದ ನಾನು ಪ್ರಭಾವಿತನಾಗಿದ್ದೇನೆ. ಸಾರ್ವಜನಿಕ ಸಭೆಯಲ್ಲಿ ಅವರು ಸೆಲ್ಫಿಗೆ ವಿನಂತಿಸಿಕೊಂಡರು ಮತ್ತು ಅವರು ನನ್ನನ್ನು ಭೇಟಿ ಮಾಡಲು ಸಂತೋಷಪಟ್ಟರು. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು… ” 
 

***