Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಮ್ಮು ಮತ್ತು ಕಾಶ್ಮೀರದ ಪ್ರತಿಭಾವಂತ ಯುವಕರು ಸ್ಟಾರ್ಟ್‌ಅಪ್‌ಗಳಲ್ಲಿ ಪ್ರವರ್ತಕ ಕೆಲಸ ಮಾಡುತ್ತಿದ್ದಾರೆ: ಪ್ರಧಾನ ಮಂತ್ರಿ


ಸ್ಟಾರ್ಟ್‌ಅಪ್‌ ಕ್ಷೇತ್ರದಲ್ಲಿ ಮುಂಚೂಣಿಯಾಗಿ ಕೆಲಸ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರದ ಪ್ರತಿಭಾವಂತ ಯುವಜನತೆಯೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಡೆಸಿದ ಸಂವಾದದ ಝಲಕ್ ಗಳು ಈ ವಿಡಿಯೊದಲ್ಲಿದೆ. 

ವಿಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು,

“ಸ್ಟಾರ್ಟ್‌ಅಪ್‌ಗಳಲ್ಲಿ ಮುಂಚೂಣಿಯಾಗಿ ಕೆಲಸ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರದ ಪ್ರತಿಭಾವಂತ ಯುವಜನತೆಯನ್ನು ನಿನ್ನೆ ಶ್ರೀನಗರದಲ್ಲಿ ಭೇಟಿ ಮಾಡಿ ಅವರ ಕೆಲಸಗಳನ್ನು ವೀಕ್ಷಿಸುವ ಅವರೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು. ಅವರೊಂದಿಗೆ ನಡೆಸಿದ ಸಂವಾದದ ಮುಖ್ಯಾಂಶಗಳು ಇಲ್ಲಿವೆ.” ಎಂದು ಬರೆದುಕೊಂಡಿದ್ದಾರೆ.
 

 

 

*****