Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಮ್ಮು ಮತ್ತು ಕಾಶ್ಮೀರದ ಸೌಂದರ್ಯ ಮತ್ತು ಆತಿಥ್ಯಕ್ಕೆ ನಾಗರಿಕರ ಪ್ರತಿಕ್ರಿಯೆಯನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬೈಸರನ್‌, ಅರು, ಕೋಕರ್ನಾಗ್‌, ಅಚ್ಛಬಲ್‌, ಗುಲ್ಮಾರ್ಗ್‌, ಶ್ರೀನಗರ ಮತ್ತು ದಾಲ್‌ ಸರೋವರದ ಸೌಂದರ್ಯವನ್ನು ಬಿಂಬಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಸೌಂದರ್ಯ ಮತ್ತು ಆತಿಥ್ಯಕ್ಕೆ ನಾಗರಿಕರ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.

ನಾಗರಿಕ ಶ್ರೀ ರಂಜೀತ್‌ ಕುಮಾರ್‌ ಅವರ ಟ್ವೀಟ್‌ಅನ್ನು ಉಲ್ಲೇಖಿಸಿರುವ ಪ್ರಧಾನಮಂತ್ರಿ ಅವರು, 2019 ರಲ್ಲಿ ಶ್ರೀನಗರಕ್ಕೆ ಭೇಟಿ ನೀಡಿದ ಚಿತ್ರವನ್ನು ಸಹ ಟ್ವೀಟ್‌ ಮಾಡಿದ್ದಾರೆ.

ನಾಗರಿಕರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಪ್ರಧಾನಮಂತ್ರಿ ಟ್ವೀಟ್‌ ಮಾಡಿದ್ದಾರೆ.

‘‘ ಅತ್ಯುತ್ತಮವಾಗಿದೆ. 2019 ರಲ್ಲಿ ಶ್ರೀನಗರಕ್ಕೆ ಭೇಟಿ ನೀಡಿದ ನನ್ನ ಚಿತ್ರವನ್ನು ಹಂಚಿಕೊಳ್ಳಲು ನಾನು ಪ್ರಚೋದಿಸಲ್ಪಟ್ಟಿದ್ದೇನೆ.’’ ಎಂದು ಹೇಳಿದ್ದಾರೆ.