ಜಮ್ಮು & ಕಾಶ್ಮೀರಕ್ಕೆ ದೀನದಯಾಳಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿಯಲ್ಲಿ ಬಡತನದ ಅನುಪಾತಕ್ಕೆ ಜೋಡಿಸದೆ ಅನುದಾನ ನೀಡಲು ಕೇಂದ್ರ ಸಂಪುಟ ಸಭೆ ಅಂಗೀಕಾರ
ಜಮ್ಮು & ಕಾಶ್ಮೀರಕ್ಕೆ ದೀನದಯಾಳ ಅಂತ್ಯೋದಯ ಯೋಜನೆ– ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿ ವಿಶೇಷ ಪ್ಯಾಕೇಜನ್ನು ಅನುಷ್ಠಾನಗೊಳಿಸಲು 2018-19ರ ಅವಧಿಯನ್ನು ಇನ್ನೊಂದು ವರ್ಷದ ತನಕ ವಿಸ್ತಾರಗೊಳಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರಸಂಪುಟ ಸಭೆ ಅನುಮೋದನೆ ನೀಡಿತು.
ರಾಜ್ಯ ಸರಕಾರಕ್ಕೆ ದೀನದಯಾಳ ಅಂತ್ಯೋದಯ ಯೋಜನೆ– ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿ ವಿಶೇಷ ಪ್ಯಾಕೇಜ್ನ್ನು ಬಡತನದ ಅನುಪಾತಕ್ಕೆ ಜೋಡಿಸದೆ ಆವಶ್ಯಕತೆಯ ಆಧಾರದ ಮೇಲೆ ಅನುಷ್ಠಾನಗೊಳಿಸುವುದಕ್ಕಾಗಿ ಅನುದಾನನೀಡಲು ಸಂಪುಟಸಭೆ ಅನುಮೋದನೆ ನೀಡಿದೆ. ಈ ಮೊದಲೇ ಅನುಮೋದನೆಗೊಂಡ ಮೂಲ ಆರ್ಥಿಕ ಮೊತ್ತ ರೂ 755.32 ಕೋಟಿಗಳ ಚೌಕಟ್ಟಿನೊಳಗೆಯಾವುದೇ ಹೆಚ್ಚುವರಿ ಆರ್ಥಿಕ ಬಾಧ್ಯತೆಗಳಾಗದಂತೆ ರಾಜ್ಯದಲ್ಲಿರುವ ಮೂರರಲ್ಲಿ ಎರಡು ಪಾಲಿನಷ್ಟು ದುರ್ಬಲ ಕುಟುಂಬಗಳನ್ನು ತಲುಪಲು ಸಮಯಾವಕಾಶವನ್ನು ವಿಸ್ತರಿಸಲಾಗಿದೆ. 2018-19ರ ಒಂದು ವರ್ಷದ ಅವಧಿಗೆ ರೂ 143.604ಕೋಟಿಯಷ್ಟುಮೊತ್ತದ ಅಗತ್ಯವಿದೆ.
ಪರಿಣಾಮ:
• ಇದುನಿರ್ಧಿಷ್ಟ ಕಾಲ ಮಿತಿಯೊಳಗೆ ರಾಜ್ಯ ಎಲ್ಲ ದುರ್ಬಲ ಕುಟುಂಬಗಳನ್ನು ವ್ಯಾಪ್ತಿಯೊಳಗೆ ತರಲು ಸಹಾಯಮಾಡುತ್ತದೆ. ( ಒಟ್ಟಾರೆ ಇರುವ ಕುಟುಂಬಗಳಲ್ಲಿ ಮೂರರಲ್ಲಿ ಎರಡು ಪಾಲಿನಷ್ಟು ಎಂದು ಅಂದಾಜಿಸಲಾಗಿದೆ)
• ಸಾಮಾಜಿಕ – ಆರ್ಥಿಕ ಜಾತಿ ಜನಗಣತಿ 2011ರಲ್ಲಿ ಪಟ್ಟಿ ಮಾಡಿರುವ ವಂಚಿತ ವರ್ಗಕ್ಕೆ ಸೇರಿದ ಕನಿಷ್ಟ ಒಂದು ಕುಟುಂಬ ಮತ್ತು ಸ್ವಯಂ ಸೇರ್ಪಡೆ ವರ್ಗದಡಿ ಕುಟುಂಬಗಳ ಸಂಚಲನವನ್ನು ಇದು ದೃಢೀಕರಿಸುತ್ತದೆ.
• ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಬ್ಲಾಕ್ಗಳೂ ದೀನದಯಾಳ ಅಂತ್ಯೋದಯ ಯೋಜನೆ– ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ನ ವ್ಯಾಪ್ತಿಯೊಳಗೆ ಬರುವುದನ್ನು ದೃಢೀಕರಿಸುತ್ತದೆ ಮತ್ತು ರಾಜ್ಯದಲ್ಲಿ ಸಾಮಾಜಿಕ ಒಳಗೊಳ್ಳುವಿಕೆ,ಸಾಮಾಜಿಕ ಅಭಿವೃದ್ಧಿ ಹಾಗೂ ಜೀವನೋಪಾಯಗಳಲ್ಲಿ ಸುಧಾರಣೆ ತರುವ ಮೂಲಕ ಬಡತನ ನಿರ್ಮೂಲನೆಗೆ ಒತ್ತು ನೀಡಲಾಗಿದೆ .
ಹಿನ್ನಲೆ:
ಮೇ.2013ರಲ್ಲಿ ಅಂಗಿಕರಿಸಿದ ವಿಶೇಷ ಪ್ಯಾಕೇಜ್ಗಳನ್ನು ರಾಜ್ಯದಲ್ಲಿದ್ದ ಗೊಂದಲದ ವಾತಾವರಣ ಮತ್ತು ತಡೆಗಟ್ಟಲಾಗದ ಕಾರಣಗಳಿಂದಾಗಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿಲ್ಲ.ಜಮ್ಮು ಮತ್ತು ಕಾಶ್ಮೀರಕ್ಕಾಗಿ ಈ ವಿಸ್ತರಿಸಿದ ಅವಧಿಯಲ್ಲಿ ಬಡತನದ ಅನುಪಾತವನ್ನು ಜೋಡಿಸದೆ, ಬೇಡಿಕೆಯಾಧಾರದಲ್ಲಿ ದೀನದಯಾಳ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿ ಅನುದಾನ ಬಿಡುಗಡೆಯನ್ನು ಮುಂದುವರಿಸಲು ಮತ್ತು ಈ ಹಿಂದೆ ಅನುಮೋದನೆಗೊಂಡ ಅನುಷ್ಠಾನದ ಅವಧಿಯ ವಿಸ್ತರಣೆಗಾಗಿ ಈಗ ರಾಜ್ಯ ಸರಕಾರವು ಭಾರತ ಸರಕಾರವನ್ನು ಪುನಃ ಮನವಿಮಾಡಿಕೊಂಡಿತ್ತು.ಆದುದರಿಂದ, ಸಂಪುಟ ಸಭೆಯ ಅಂಗೀಕಾರವು ಜಮ್ಮು ಮತ್ತು ಕಾಶ್ಮೀರದ ಗ್ರಾಮೀಣ ದುರ್ಬಲ ಕುಟುಂಬಗಳಿಗೆ ಕಾಯಕಲ್ಪವಾಗಲಿದೆ.
**