ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2016-17ನೇ ಶೈಕ್ಷಣಿಕ ವರ್ಷದಿಂದಲೇ ಜಮ್ಮುವಿನ ಹಳೆಯ ಸರ್ಕಾರಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ ಸಂಚಾರಿ/ತಾತ್ಕಾಲಿಕ ಕ್ಯಾಂಪಸ್ ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಥಾಪನೆ/ಕಾರ್ಯಾರಂಭಕ್ಕೆ ತನ್ನ ಅನುಮೋದನೆ ನೀಡಿದೆ.
ಈ ಯೋಜನೆಗೆ ತಾತ್ಕಾಲಿಕ ಕ್ಯಾಂಪಸ್ ನಲ್ಲಿ ಆರಂಭಿಕ ನಾಲ್ಕು ವರ್ಷಗಳಲ್ಲಿ ಅಂದರೆ 2016-2020ರವರೆಗೆ 61.90 ಕೋಟಿ ರೂಪಾಯಿಗಳ ವೆಚ್ಚವಾಗಲಿದೆ. ಈ ವರ್ಷ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮಕ್ಕೆ (ಪಿಜಿಡಿಪಿ) ವಿದ್ಯಾರ್ಥಿಗಳ ಪ್ರವೇಶ 54 ಆಗಿದ್ದು, ನಾಲ್ಕು ವರ್ಷಗಳ ಅವಧಿಯಲ್ಲಿ ಸಂಚಿತವಾಗಿ 120 ಆಗಲಿದೆ. ಈ ಮಧ್ಯೆ, ಜಮ್ಮುವಿನಲ್ಲಿ ಕ್ಯಾಂಪಸ್ ಸ್ಥಾಪನೆಗೆ ಮತ್ತು ಕಾಶ್ಮೀರ ವಲಯದಲ್ಲಿ ಹೊರ-ಕ್ಯಾಂಪಸ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಶಾಶ್ವತ ಕ್ಯಾಂಪಸ್ ಗಾಗಿ ಸವಿವರವಾದ ಯೋಜನಾ ವರದಿ ಸಿದ್ಧತೆ ನಡೆದಿದೆ ಮತ್ತು ಆನಂತರ ಕ್ಯಾಂಪಸ್ ಸ್ಥಾಪನೆ ಪ್ರಕ್ರಿಯೆ ಆರಂಭವಾಗಲಿದೆ.
ಅಲ್ಲದೆ ಸಂಪುಟವು, ಸೊಸೈಟಿಗಳ ನೋಂದಣಿ ಕಾಯಿದೆ1860ರನ್ವಯ ಐಐಎಂ ಜಮ್ಮು ಸೊಸೈಟಿಯ ರಚನೆಗೂ ತನ್ನ ಅನುಮೋದನೆ ನೀಡಿದೆ. ಜಮ್ಮು ಐ.ಐ.ಎಂ. ಅನ್ನು ಸಂಸ್ಥೆಯ ಆಡಳಿತ ನಡೆಸುವ ಮತ್ತು ಸ್ಥಾಪನೆಗೆ ಹೊಣೆ ಮತ್ತು ಕಾರ್ಯಾಚರಣೆಯ ಹೊಣೆ ಹೊತ್ತ ಭಾರತ ಸರ್ಕಾರದಿಂದ ರಚಿಸಲಾಗುವ ಗೌರ್ನರ್ ಗಳ ಮಂಡಳಿಯೊಂದಿಗೆ ಸೊಸೈಟಿಯು ನಡೆಸಲಿದೆ ಮತ್ತು ನಿರ್ವಹಿಸಲಿದೆ..
ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಮಂತ್ರಿಯವರು ನೀಡಿರುವ ಅಭಿವೃದ್ಧಿ ಪ್ಯಾಕೇಜ್ ನ ಭಾಗವಾಗಿದೆ. ಜಮ್ಮುವಿನಲ್ಲಿ ಐಐಟಿ ಸ್ಥಾಪನೆಯು, ಶ್ರೀನಗರದ ಎನ್.ಐ.ಟಿ. ಆಧುನೀಕರಣವನ್ನು ಮತ್ತು ಕಾಶ್ಮೀರ ವಲಯ ಮತ್ತು ಜಮ್ಮು ವಲಯದಲ್ಲಿ ತಲಾ ಒಂದರಂತೆ ಎರಡು ಹೊಸ ಎ.ಐ.ಐ.ಎಂ.ಎಸ್.ಗಳ ಆರಂಭವನ್ನೂ ಒಳಗೊಂಡಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಉನ್ನತ ದರ್ಜೆಯ ಜೀವನ ಮತ್ತು ಶಿಕ್ಷಣದ ಅಗತ್ಯವನ್ನು ಪೂರೈಸಲಿದೆ.
ಹಿನ್ನೆಲೆ:
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ದೇಶದ ಪ್ರಮುಖ ಸಂಸ್ಥೆಯಾಗಿದ್ದು, ಮ್ಯಾನೇಜ್ಮೆಂಟ್ ಶಿಕ್ಷಣ ಮತ್ತು ಸಂಬಂಧಿತ ಕ್ಷೇತ್ರದ ಜ್ಞಾನದಲ್ಲಿ ವಿಶ್ವದ ಶೈಕ್ಷಣಿಕ ರಂಗದ ಮೈಲಿಗಲ್ಲಾಗುವ ಪ್ರಕ್ರಿಯೆ ಮತ್ತು ಉತ್ತಮ ಗುಣಮಟ್ಟ ಮತ್ತು ತರಬೇತಿಯನ್ನು ಒಳಗೊಂಡಿರುತ್ತದೆ.
ಪ್ರಸ್ತುತ, ದೇಶದಲ್ಲಿ 19 ಐ.ಐ.ಎಂ.ಗಳಿವೆ. ಈ ಪೈಕಿ 13 ಐ.ಐ.ಎಂ.ಗಳು ಅಹಮದಾಬಾದ್, ಬೆಂಗಳೂರು, ಕೋಲ್ಕತ್ತಾ, ಲಖನೌ, ಇಂದೋರ್, ಕೋಳಿಕ್ಕೋಡ್, ಶಿಲ್ಲಾಂಗ್, ರಾಂಚಿ, ರಾಯಪುರ, ರೋಹ್ಟಕ್, ಕಾಶಿಪುರ್, ಟ್ರಿಚಿ, ಉದಯ್ಪುರದಲ್ಲಿದೆ. ಉಳಿದ ಆರು ಐ.ಐ.ಎಂ.ಗಳು 2015ರಲ್ಲಿ ಆರಂಭವಾಗಿದ್ದು, ಅವು ಅಮೃತಸರ, ಸಿರ್ಮೂರ್, ನಾಗ್ಪುರ್, ಬೋಧಗಯ, ಸಂಬಾಲ್ಪುರ ಮತ್ತು ವಿಶಾಖಪಟ್ಟಣದಲ್ಲಿವೆ.
AKT/SH