Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಪಾನ್ ಪ್ರಧಾನಿ ಜತೆ ಪ್ರಧಾನ ಮಂತ್ರಿ ಮಾತುಕತೆ

ಜಪಾನ್ ಪ್ರಧಾನಿ ಜತೆ ಪ್ರಧಾನ ಮಂತ್ರಿ ಮಾತುಕತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 9 ಸೆಪ್ಟೆಂಬರ್, 2023 ರಂದು ನವದೆಹಲಿಯಲ್ಲಿ G-20 ಶೃಂಗಸಭೆಯ ನೇಪಥ್ಯದಲ್ಲಿ ಜಪಾನ್ ಪ್ರಧಾನಿ ಶ್ರೀ ಫುಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಆಯಾ G-20 ಮತ್ತು G-7 ಅಧ್ಯಕ್ಷತೆಯಲ್ಲಿ ತಮ್ಮ ಆದ್ಯತೆಗಳ ಕುರಿತು ವರ್ಷವಿಡೀ ಉಭಯ ದೇಶಗಳ ರಚನಾತ್ಮಕ ಸಂವಾದದ ಕುರಿತು ಸಭೆಯಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು.
ವಿಶೇಷವಾಗಿ ಜಾಗತಿಕ ದಕ್ಷಿಣದ ಕಾಳಜಿ ಮತ್ತು ಆಕಾಂಕ್ಷೆಗಳನ್ನು ಮುಂಚೂಣಿಗೆ ತರುವ ಕುರಿತು ಚರ್ಚೆ ನಡೆಸಲಾಯಿತು.

ಮೂಲಸೌಕರ್ಯ ಅಭಿವೃದ್ಧಿ, ತಾಂತ್ರಿಕ ಸಹಯೋಗ, ಹೂಡಿಕೆ ಮತ್ತು ಇಂಧನ ಸೇರಿದಂತೆ ಭಾರತ-ಜಪಾನ್ ದ್ವಿಪಕ್ಷೀಯ ಪಾಲುದಾರಿಕೆಯ ವಿವಿಧ ವಿಷಯಗಳ ಕುರಿತು ನಾಯಕರು ಸಮಾಲೋಚನೆ ನಡೆಸಿದರು.

ಇಬ್ಬರೂ ನಾಯಕರು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಬದ್ಧವಾಗಿದ್ದೇವೆ ಎಂದು ಉಭಯ ನಾಯಕರು ತಿಳಿಸಿದರು.

****