Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಪಾನಿನ ವಿದೇಶಾಂಗ ಸಚಿವರಿಂದ ಪ್ರಧಾನಮಂತ್ರಿ ಭೇಟಿ

ಜಪಾನಿನ ವಿದೇಶಾಂಗ ಸಚಿವರಿಂದ ಪ್ರಧಾನಮಂತ್ರಿ ಭೇಟಿ

ಜಪಾನಿನ ವಿದೇಶಾಂಗ ಸಚಿವರಿಂದ ಪ್ರಧಾನಮಂತ್ರಿ ಭೇಟಿ


 

ಜಪಾನಿನ ವಿದೇಶಾಂಗ ಸಚಿವ ಘನತೆವೆತ್ತ ಶ್ರೀ ತರೊ ಕೊನೊ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು   ಭೇಟಿ ಮಾಡಿದರು.

 

ಅಕ್ಟೋಬರ್ 2018ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನಿಗೆ ಭೇಟಿ ನೀಡಿದ ನಂತರ ಈ ನಿಟ್ಟಿನಲ್ಲಿ ಇತ್ತೀಚೆಗಿನ ದಿನಗಳಲ್ಲಿ ನಡೆದಿರುವ ಪ್ರಕ್ರಿಯೆಗಳ ಮಾಹಿತಿ ನೀಡಿದರು.

 

ಅಕ್ಟೋಬರ್ 2018ರಲ್ಲಿ ಜಪಾನಿಗೆ ಯಶಸ್ವೀ ಭೇಟಿ ನೀಡಿದ್ದ ಬಗ್ಗೆ ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಭಾರತ ಮತ್ತು ಜಪಾನ್ ನಡುವೆ ಜಾಗತಿಕ ಪಾಲುದಾರಿಕೆ ಮತ್ತು ವಿಶೇಷ ವ್ಯೂಹಾತ್ಮಕ ಯೋಜನೆಗಳನ್ನು ಇನ್ನೂ ಸದೃಢಗೊಳಿಸುವ ನಿಟ್ಟಿನಲ್ಲಿ ಬದ್ಧವಾಗಿದ್ದೇನೆ ಎಂದು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

 

ಈ ವರ್ಷದ ಕೊನೆಯ ಭಾಗದಲ್ಲಿ ಜಪಾನಿನೊಂದಿಗೆ ಇನ್ನೊಂದು ವೃತ್ತದ ವಾರ್ಷಿಕ ಶೃಂಗಸಭೆಯನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.