Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜನ್ ಧನ್ ಖಾತೆಗಳಲ್ಲಿನ ಪ್ರಗತಿಯಲ್ಲಿ ಮಹತ್ವದ ಮೈಲಿಗಲ್ಲು ತಲುಪಿದದ್ದಕಾಗಿ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಮಹತ್ವಪೂರ್ಣ ಮೈಲಿಗಲ್ಲು ತಲುಪಿದ ಜನ್ ಧನ್ ಖಾತೆಯ ಸಾದನೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಜನ್ ಧನ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿದೆ.

ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಖಾತೆಗಳು ನಮ್ಮ ನಾರಿ ಶಕ್ತಿಗೆ ಸೇರಿರುವುದು ಖುಷಿ ತಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪಿ.ಐ.ಬಿ. ಇಂಡಿಯಾ ಮಾಡಿದ ಟ್ವೀಟ್ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಅವರು ಈ ರೀತಿ ಹೇಳಿದ್ದಾರೆ;

“ಇದೊಂದು ಮಹತ್ವದ ಮೈಲಿಗಲ್ಲು.

ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಖಾತೆಗಳು ನಮ್ಮ ನಾರಿ ಶಕ್ತಿಗೆ ಸೇರಿರುವುದು ಖುಷಿ ತಂದಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ 67% ಖಾತೆಗಳನ್ನು ತೆರೆಯಲಾಗಿದ್ದು, ಆರ್ಥಿಕ ಸೇರ್ಪಡೆಯ ಪ್ರಯೋಜನಗಳು ನಮ್ಮ ರಾಷ್ಟ್ರದ ಮೂಲೆ ಮೂಲೆಗಳನ್ನು ತಲುಪುವಂತೆ ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ”.

***