ಮಧ್ಯಪ್ರದೇಶದಲ್ಲಿ ಜನ್ ಜಾತಿಯಾ ಗೌರವ್ ದಿವಸ್ ಮಹಾಸಮ್ಮೇಳನದಲ್ಲಿ ಜನ್ ಜಾತಿಯಾ ಸಮುದಾಯದ ಅನೇಕ ಕಲ್ಯಾಣ ಕಾರ್ಯಕ್ರಮಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. “ರೇಷನ್ ಆಪ್ಕೆ ಗ್ರಾಮ್” ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಮಧ್ಯಪ್ರದೇಶದ ಸಿಕೆಲ್ ಸೆಲ್ ಅಭಿಯಾನಕ್ಕೂ ಚಾಲನೆ ನೀಡಿದರು. ದೇಶಾದ್ಯಂತ 50 ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರು ಅಡಿಪಾಯ ಹಾಕಿದರು. ಮಧ್ಯಪ್ರದೇಶದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಲ್ಲದೇ ಕೇಂದ್ರ ಸಚಿವರಾದ ಡಾ. ವಿರೇಂದ್ರ ಕುಮಾರ್, ಶ್ರೀ ನರೇಂದ್ರ ಸಿಂಗ್ ತೋಮರ್, ಶ್ರೀ ಜ್ಯೋತಿರಾಧಿತ್ಯಾ ಸಿಂಧಿಯಾ, ಕೇಂದ್ರ ಸಂಪುಟದ ರಾಜ್ಯ ಸಚಿವರಾದ ಶ್ರೀ ಪ್ರಹ್ಲಾದ್ ಎಸ್. ಪಟೇಲ್, ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಡಾ.ಎಲ್. ಮುರುಗನ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತ ಇಂದು ಮೊದಲ ಜನ್ ಜಾತಿಯಾ ಗೌರವ್ ದಿವಸ್ ಆಚರಿಸುತ್ತಿದೆ. “ ಸ್ವಾತಂತ್ರ್ಯೋತ್ತರದಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೇಶದ ಎಲ್ಲಾ ಬುಡಕಟ್ಟು ಸಮುದಾಯದ ಕಲೆ, ಸಂಸ್ಕೃತಿ ಅನಾವರಣಗೊಳ್ಳುತ್ತಿದೆ. ಸ್ವಾತಂತ್ರ್ಯ ಸಂಗ್ರಾಮ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಬುಡಕಟ್ಟು ಜನರ ಕೊಡುಗೆಯನ್ನು ಸ್ಮರಿಸಿಕೊಳ್ಳುವುದು ಮತ್ತು ಗೌರವಿಸುವುದು ನಮಗೆ ಹಮ್ಮೆ” ಎಂದು ಹೇಳಿದರು. ಬುಡಕಟ್ಟು ಸಮಾಜದೊಂದಿಗೆ ತಮ್ಮದೇ ಆದ ಸುದೀರ್ಘ ಒಡನಾಟದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಬುಡಕಟ್ಟು ಜನರ ಆದ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಶ್ರೀಮಂತಿಕೆಯನ್ನು ಶ್ಲಾಘಿಸಿದರು ಮತ್ತು ಹಾಡುಗಳು ಮತ್ತು ನೃತ್ಯ ಸೇರಿದಂತೆ ಬುಡಕಟ್ಟು ಜನಾಂಗದ ಪ್ರತಿಯೊಂದು ಸಾಂಸ್ಕೃತಿಕ ಸೊಗಡು ಹಾಗೂ ಜೀವನದ ಪಾಠ ಹೊಂದಿದೆ ಮತ್ತು ಇದರಿಂದ ತುಂಬಾ ಕಲಿಯುವುದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ದೇಶದ ಸ್ವಾತಂತ್ರ್ಯ ಸಂಗ್ರಾಮದ ಪೂರ್ವದಲ್ಲಿ ಬುಡಕಟ್ಟು ಸಮುದಾಯದ ನಾಯಕರು ಮತ್ತು ನಾಯಕಿಯರ ಸ್ಫೂರ್ತಿದಾಯಕ ಕಥೆಗಳನ್ನು ಹೊರತೆಗೆಯುವುದು ನಮ್ಮ ಕರ್ತವ್ಯವಾಗಿದೆ ಮತ್ತು ಹೊಸ ಪೀಳಿಗೆಗೆ ಇವರನ್ನು ಪರಿಚಯಿಸಬೇಕಿದೆ. ಗುಲಾಮಗಿರಿಯ ಸಮಯದಲ್ಲಿ ಖಾಸಿಗಾರೋ ಚಳವಳಿ, ಮಿಜೋ ಚಳವಳಿ, ಕೋಲ್ ಚಳವಳಿ ಒಳಗೊಂಡಂತೆ ಹಲವು ಹೋರಾಟಗಳು ವಿದೇಶೀಯರ ವಿರುದ್ಧ ನಡೆದಿತ್ತು. “ಗೋಂಡ ಮಹಾರಾಣಿ ವೀರನಾರಿ ದುರ್ಗಾವತಿಯ ಶೌರ್ಯವಾಗಲಿ ಅಥವಾ ರಾಣಿ ಕಮಲಾಪತಿಯ ತ್ಯಾಗವನ್ನಾಗಲೀ ಮರೆಯಲು ಸಾಧ್ಯವಿಲ್ಲ. ಹೆಗಲಿಗೆ ಹೆಗಲು ಕೊಟ್ಟು ಹೋರಾಡಿ ತ್ಯಾಗ ಬಲಿದಾನ ಮಾಡಿದ ವೀರ ಮಹಾರಾಣಾ ಪ್ರತಾಪ್ ಸಿಂಗ್ ಅವರ ಹೋರಾಟವನ್ನು ಊಹಿಸಲು ಸಾಧ್ಯವಿಲ್ಲ” ಎಂದು ಪ್ರಧಾನಮಂತ್ರಿ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಆದರ್ಶನಗಳನ್ನು ಬಾಬಾಸಾಹೇಬ ಪುರಂದರೆ ಅವರು ದೇಶದ ಜನರ ಮುಂದೆ ಅತ್ಯುತ್ತಮವಾಗಿ ಅನಾವರಣಗೊಳಿಸಿದ್ದು, ಈ ಆದರ್ಶಗಳು ನಮಗೆ ನಿರಂತರವಾಗಿ ಸ್ಪೂರ್ತಿದಾಯಕವಾಗಿವೆ. ಬಾಬಾಸಾಹೇಬ್ ಪುರಂದರೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಬಾಬಾ ಸಾಹೇಬ ಪುರಂದರೆ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದು, ಅವರಿಗೆ ಗೌರವ ಸಲ್ಲಿಸುವುದಾಗಿ ಹೇಳಿದರು.
“ ದೇಶದ ಸುಧಾರಣಾ ವಲಯದಲ್ಲಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಬುಡಕಟ್ಟು ಸಮಾಜದ ಕೊಡುಗೆ ಬಗ್ಗೆ ನಾವೀಗ ಚರ್ಚೆ ನಡೆಸುತ್ತಿದ್ದು, ಕೆಲವು ಜನ ನಮಗೆ ಸ್ಪೂರ್ತಿಯಾಗಿದ್ದಾರೆ. ಭಾರತದ ಸಾಂಸ್ಕೃತಿಕ ವಲಯವನ್ನು ಬಲಪಡಿಸಲು ಬುಡಕಟ್ಟು ಜನರ ಕೊಡುಗೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಕಾರಣವೆಂದರೆ ಬುಡಕಟ್ಟು ಜನರ ಕೊಡುಗೆಯನ್ನು ದೇಶಕ್ಕೆ ತಿಳಿಸಲಿಲ್ಲ ಮತ್ತು ತಿಳಿಸಿದ್ದರೂ ಅದು ಸೀಮಿತ ಪ್ರಮಾಣದಲ್ಲಿದೆ. “ ಇವೆಲ್ಲಾ ಏಕೆ ಸಾಧ್ಯವಾಗಲಿಲ್ಲ ಎಂದರೆ ದಶಕಗಳ ಕಾಲ ಆಡಳಿತ ನಡೆಸಿದವರು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಆದ್ಯತೆ ನೀಡಿದರು ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಇವತ್ತು ಬುಡಕಟ್ಟು ಪ್ರದೇಶಗಳಲ್ಲಿ ಬಡವರಿಗೆ ಮನೆ, ಶೌಚಾಲಯಗಳು, ಉಚಿತ ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕ, ಶಾಲೆಗಳು, ರಸ್ತೆ ಮತ್ತು ಉಚಿತ ಚಿಕಿತ್ಸೆಯನ್ನು ದೇಶದ ಇತರೆ ಪ್ರದೇಶಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಬುಡಕಟ್ಟು ಜನ ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಜಾರಿಗೆ ಪ್ರಧಾನ ಆದ್ಯತೆ ನೀಡಲಾಗುತ್ತಿದೆ. ದೇಶದ ಬುಡಕಟ್ಟು ವಲಯ ಯಾವಾಗಲೂ ಸಂಪತ್ತು ಮತ್ತು ಸಂಪನ್ಮೂಲದಲ್ಲಿ ಶ್ರೀಮಂತವಾಗಿದೆ. ಆದರೆ “ ಈ ಹಿಂದೆ ಆಡಳಿತದಲ್ಲಿದ್ದವರು ಇಲ್ಲಿನ ಪ್ರದೇಶಗಳನ್ನು ಶೋಷಿಸುವ ನೀತಿ ಅನುಸರಿಸಿದರು. ಈ ಕ್ಷೇತ್ರಗಳ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುವ ನೀತಿಯನ್ನು ನಾವು ಅನುಸರಿಸುತ್ತಿದ್ದೇವೆ” ಎಂದರು. ಅರಣ್ಯ ಕಾನೂನುಗಳನ್ನು ಬದಲಾಯಿಸುವ ಮೂಲಕ ಬುಡಕಟ್ಟು ಸಮಾಜಕ್ಕೆ ಅರಣ್ಯ ಸಂಪತ್ತು ಇದೀಗ ಲಭ್ಯವಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು, ಬುಡಕಟ್ಟು ಸಮಾಜದವರು ರಾಷ್ಟ್ರಪತಿ ಭವನ ಆಗಮಿಸುವುದನ್ನು ನೋಡಿ ಜಗತ್ತು ವಿಸ್ಮಯಕ್ಕೆ ಒಳಗಾಯಿತು. ಬುಡಕಟ್ಟು ಮತ್ತು ಗ್ರಾಮೀಣ ಸಮಾಜದಲ್ಲಿ ಕೆಲಸ ಮಾಡುವವರು ದೇಶದ ನಿಜವಾದ ವಜ್ರಗಳು ಎಂದು ಶ್ಲಾಘಿಸಿದರು. ಬುಡಕಟ್ಟು ವಲಯದ ಕರಕುಶಲ ಕರ್ಮಿಗಳ ಉತ್ಪನ್ನಗಳನ್ನು ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಉತ್ತೇಜಿಸಲಾಗುತ್ತಿದೆ. ಈ ಹಿಂದೆ 8 ರಿಂದ 10 ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದ್ದು, ಇದೀಗ ಈ ಪ್ರಮಾಣವನ್ನು 90 ಅರಣ್ಯ ಉತ್ಪನ್ನಗಳಿಗೆ ವಿಸ್ತರಿಸಲಾಗಿದೆ. ಇಂತಹ ಮಹತ್ವಾಂಕ್ಷಿ ಜಿಲ್ಲೆಗಳಿಗೆ 150 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. 37 ಸಾವಿರ ಸ್ವಸಹಾಯ ಗುಂಪುಗಳನ್ನು 2,500 ವನ್ ಧನ್ ವಿಕಾಸ್ ಕೇಂದ್ರಗಳ ಜತೆ ಜೋಡಿಸಲಾಗಿದ್ದು, ಇದರಿಂದ 7 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 20 ಲಕ್ಷ ಪಟ್ಟಾ ಭೂಮಿ ಹಕ್ಕುಗಳನ್ನು ನೀಡಲಾಗಿದೆ ಮತ್ತು ಬುಡಕಟ್ಟು ವಲಯದ ಯುವ ಜನಾಂಗಕ್ಕೆ ಶಿಕ್ಷಣ ದೊರಕಿಸಿಕೊಡುವ ಮತ್ತು ಕೌಶಲ್ಯ ವೃದ್ಧಿಸಲು ಆದ್ಯತೆ ನೀಡಲಾಗುತ್ತಿದೆ. ಕಳೆದ 7 ವರ್ಷಗಳಲ್ಲಿ 9 ಹೊಸ ಬುಡಕಟ್ಟು ಸಂಶೋಧನಾ ಕೇಂದ್ರಗಳನ್ನು ತೆರೆದು ಈ ವಲಯಕ್ಕೆ ಸೇರ್ಪಡೆ ಮಾಡಲಾಗಿದೆ. ನೂತನ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಒತ್ತು ನೀಡಿರುವುದರಿಂದ ಬುಡಕಟ್ಟು ಜನರಿಗೆ ನೆರವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
***
Addressing the Janjatiya Gaurav Divas Mahasammelan in Bhopal. https://t.co/WrVPZrqni0
— Narendra Modi (@narendramodi) November 15, 2021
आज भारत, अपना पहला जनजातीय गौरव दिवस मना रहा है।
— PMO India (@PMOIndia) November 15, 2021
आज़ादी के बाद देश में पहली बार इतने बड़े पैमाने पर, पूरे देश के जनजातीय समाज की कला-संस्कृति, स्वतंत्रता आंदोलन और राष्ट्रनिर्माण में उनके योगदान को गौरव के साथ याद किया जा रहा है, उन्हें सम्मान दिया जा रहा है: PM @narendramodi
आजादी की लड़ाई में जनजातीय नायक-नायिकाओं की वीर गाथाओं को देश के सामने लाना, उसे नई पीढ़ी से परिचित कराना, हमारा कर्तव्य है।
— PMO India (@PMOIndia) November 15, 2021
गुलामी के कालखंड में विदेशी शासन के खिलाफ खासी-गारो आंदोलन, मिजो आंदोलन, कोल आंदोलन समेत कई संग्राम हुए: PM @narendramodi
गोंड महारानी वीर दुर्गावती का शौर्य हो या फिर रानी कमलापति का बलिदान, देश इन्हें भूल नहीं सकता।
— PMO India (@PMOIndia) November 15, 2021
वीर महाराणा प्रताप के संघर्ष की कल्पना उन बहादुर भीलों के बिना नहीं की जा सकती जिन्होंने कंधे से कंधा मिलाकर लड़ाई लड़ी और बलिदान दिया: PM @narendramodi
‘पद्म विभूषण’ बाबासाहेब पुरंदरे जी ने छत्रपति शिवाजी महाराज के जीवन को, उनके इतिहास को सामान्य जन तक पहुंचाने में जो योगदान दिया है, वो अमूल्य है।
— PMO India (@PMOIndia) November 15, 2021
यहां की सरकार ने उन्हें कालिदास पुरस्कार भी दिया था: PM @narendramodi
छत्रपति शिवाजी महाराज के जिन आदर्शों को बाबासाहेब पुरंदरे जी ने देश के सामने रखा, वो आदर्श हमें निरंतर प्रेरणा देते रहेंगे।
— PMO India (@PMOIndia) November 15, 2021
मैं बाबासाहेब पुरंदरे जी को अपनी भावभीनी श्रद्धांजलि देता हूं: PM @narendramodi
आज जब हम राष्ट्रीय मंचों से, राष्ट्र निर्माण में जनजातीय समाज के योगदान की चर्चा करते हैं, तो कुछ लोगों को हैरानी होती है।
— PMO India (@PMOIndia) November 15, 2021
ऐसे लोगों को विश्वास ही नहीं होता कि जनजातीय समाज का भारत की संस्कृति को मजबूत करने में कितना बड़ा योगदान रहा है: PM @narendramodi
इसकी वजह ये है कि जनजातीय समाज के योगदान के बारे में या तो देश को बताया ही नहीं गया और अगर बताया भी गया तो बहुत ही सीमित दायरे में जानकारी दी गई।
— PMO India (@PMOIndia) November 15, 2021
ऐसा इसलिए हुआ क्योंकि आज़ादी के बाद दशकों तक जिन्होंने देश में सरकार चलाई, उन्होंने अपनी स्वार्थ भरी राजनीति को ही प्राथमिकता दी: PM
आज चाहे गरीबों के घर हों, शौचालय हों,
— PMO India (@PMOIndia) November 15, 2021
मुफ्त बिजली और गैस कनेक्शन हों,
स्कूल हो, सड़क हो, मुफ्त इलाज हो,
ये सबकुछ जिस गति से देश के बाकी हिस्से में हो रहा है, उसी गति से आदिवासी क्षेत्रों में भी हो रहा है: PM @narendramodi
देश का जनजातीय क्षेत्र, संसाधनों के रूप में, संपदा के मामले में हमेशा समृद्ध रहा है।
— PMO India (@PMOIndia) November 15, 2021
लेकिन जो पहले सरकार में रहे, वो इन क्षेत्रों के दोहन की नीति पर चले।
हम इन क्षेत्रों के सामर्थ्य के सही इस्तेमाल की नीति पर चल रहे हैं: PM @narendramodi
अभी हाल में पद्म पुरस्कार दिए गए हैं।
— PMO India (@PMOIndia) November 15, 2021
जनजातीय समाज से आने वाले साथी जब राष्ट्रपति भवन पहुंचे तो दुनिया हैरान रह गई।
आदिवासी और ग्रामीण समाज में काम करने वाले ये देश के असली हीरे हैं: PM @narendramodi
आज पहले जनजातीय गौरव दिवस पर आजादी के बाद देश में पहली बार इतने बड़े पैमाने पर जनजातीय समाज की कला-संस्कृति, स्वतंत्रता आंदोलन और राष्ट्रनिर्माण में उनके योगदान को गौरव के साथ याद किया जा रहा है, उन्हें सम्मान दिया जा रहा है। pic.twitter.com/9tIli3QrrV
— Narendra Modi (@narendramodi) November 15, 2021
भारत की सांस्कृतिक यात्रा में जनजातीय समाज का योगदान अटूट रहा है। pic.twitter.com/X7sz2dimHb
— Narendra Modi (@narendramodi) November 15, 2021
जब देश ने 2014 में सेवा का मौका दिया, तो जनजातीय समुदाय का हित केंद्र सरकार की सर्वोच्च प्राथमिकता बनी।
— Narendra Modi (@narendramodi) November 15, 2021
वहीं पहले की सरकारों ने कभी आदिवासी समाज को उचित महत्व नहीं दिया, लेकिन अभावों की पूर्ति के नाम पर उनके वोट से बार-बार सत्ता पाई। pic.twitter.com/oMAxcXzVZs
आज केंद्र सरकार जितनी भी कल्याणकारी योजनाएं बना रही है, उनमें आदिवासी समाज बाहुल्य जिलों को प्राथमिकता दी जा रही है। pic.twitter.com/hPKVDR2Yuz
— Narendra Modi (@narendramodi) November 15, 2021
जनजातीय समुदायों को छोटी-छोटी आवश्यकताओं के लिए लंबा इंतजार करवाया गया। लेकिन अब उन्हें आत्मनिर्भर बनाने के लिए निरंतर प्रयास किए जा रहे हैं। pic.twitter.com/qzaBTrCpL8
— Narendra Modi (@narendramodi) November 15, 2021