Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಜನ್ಮದಿನದ ಹಿನ್ನೆಲೆಯಲ್ಲಿ ಶ್ರೀ ಅಯ್ಯ ವೈಕುಂಡ ಸ್ವಾಮಿಗಳಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ ಅವರಿಗೆ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅಯ್ಯ ವೈಕುಂಡ ಸ್ವಾಮಿಗಳ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಿದ್ದಾರೆ.

ಈ ಸಂಬಂಧ “ಎಕ್ಸ್‌” ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಪ್ರಧಾನ ಮಂತ್ರಿಗಳು,

“ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಶ್ರೀ ಅಯ್ಯ ವೈಕುಂಡ ಸ್ವಾಮಿಗಳಿಗೆ ನಾನು ನಮಿಸುತ್ತೇನೆ. ಬಡವರು, ಕಡು ಬಡವರನ್ನು ಸಬಲರನ್ನಾಗಿಸುವ ಸಹಾನುಭೂತಿ ಮತ್ತು ಸಾಮರಸ್ಯದ ಸಮಾಜ ನಿರ್ಮಿಸಲು ಅವರು ಕೈಗೊಂಡ ಅವಿರತ ಪ್ರಯತ್ನಗಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ಅವರ ಮಾನವೀಯತೆಗಾಗಿ ದೂರದರ್ಶಿತ್ವವನ್ನು ಸಾಕಾರಗೊಳಿಸುವಲ್ಲಿ ನಮ್ಮ ಬದ್ಧತೆ ಇರುವುದನ್ನು ಪುನರುಚ್ಚರಿಸಯತ್ತೇವೆ,ʼʼ ಎಂದು ಹೇಳಿದ್ದಾರೆ

***