Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜನವರಿ 27 ರಂದು ಕಾರಿಯಪ್ಪ ಮೈದಾನದಲ್ಲಿ ಎನ್.ಸಿ.ಸಿ. ಪ್ರಧಾನಮಂತ್ರಿ ಪಥಸಂಚಲನವನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 27 ಜನವರಿ, 2024 ರಂದು ಸಂಜೆ 4:30 ಕ್ಕೆ ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ನಡೆಯಲಿರುವ ವಾರ್ಷಿಕ ಎನ್.ಸಿ.ಸಿ. ಪ್ರಧಾನಮಂತ್ರಿ ಪಥಸಂಚಲನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಸಮಾರಂಭವು ‘ಅಮೃತ್ ಕಾಲ್ ಕಿ ಎನ್ಸಿಸಿ’ ವಿಷಯದ ಮೇಲೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ, ಇದು ಅಮೃತ್ ಕಾಲದ ಕೊಡುಗೆ ಮತ್ತು ಸಬಲೀಕರಣದ ಪರಿಕಲ್ಪನೆಯನ್ನು ಪ್ರದರ್ಶಿಸಲಿದೆ. ವಸುಧೈವ ಕುಟುಂಬಕಮ್ ತತ್ವದ ನಿಜವಾದ ಭಾರತೀಯ ಸ್ಪೂರ್ತಿಯಲ್ಲಿ, 24 ವಿದೇಶಗಳ ಯುವ ಕೆಡೆಟ್ಗಳು ಸೇರಿದಂತೆ 2,200 ಕ್ಕೂ ಹೆಚ್ಚು ಎನ್.ಸಿ.ಸಿ. ಕೆಡೆಟ್ಗಳು ಮತ್ತು ಈ ವರ್ಷದ ಪಥಸಂಚಲದಲ್ಲಿ ಭಾಗವಹಿಸಲಿದ್ದಾರೆ.

ವಿಶೇಷ ಅತಿಥಿಗಳಾಗಿ, ದೇಶದ ವಿವಿಧ ಭಾಗಗಳಿಂದ ವೈವಿದ್ಯಮಯ ಗ್ರಾಮಗಳ 400 ಕ್ಕೂ ಹೆಚ್ಚು ಸರಪಂಚರು ಮತ್ತು ವಿವಿಧ ಸ್ವ-ಸಹಾಯ ಗುಂಪುಗಳಿಗೆ ಸೇರಿದ 100 ಕ್ಕೂ ಹೆಚ್ಚು ಮಹಿಳೆಯರು ಎನ್.ಸಿ.ಸಿ ಪ್ರಧಾನಮಂತ್ರಿ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.

****