ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 15 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10:30ರ ಸುಮಾರಿಗೆ, ಪ್ರಧಾನಮಂತ್ರಿಯವರು ಮೂರು ಮುಂಚೂಣಿ ಯುದ್ಧ ನೌಕೆಗಳಾದ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್‌ಗಳನ್ನು ಮುಂಬೈನ ನೌಕಾ ನೌಕಾನೆಲೆಯಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ನಂತರ, ಮಧ್ಯಾಹ್ನ 3:30ರ ಸುಮಾರಿಗೆ ಅವರು ನವಿ ಮುಂಬೈನ ಖಾರ್ಘರ್‌ನಲ್ಲಿ ಇಸ್ಕಾನ್ ದೇವಾಲಯವನ್ನು ಉದ್ಘಾಟಿಸಲಿದ್ದಾರೆ.
ಮೂರು ಪ್ರಮುಖ ನೌಕೆಗಳು ರಕ್ಷಣಾ ಉತ್ಪಾದನೆ ಮತ್ತು ಕಡಲ ಭದ್ರತೆಯಲ್ಲಿ ಜಾಗತಿಕ ನಾಯಕನಾಗುವ ಭಾರತದ ದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಮುನ್ನಡೆಯನ್ನು ಸೂಚಿಸುತ್ತದೆ. INS ಸೂರತ್, P15B ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಪ್ರಾಜೆಕ್ಟ್‌ನ ನಾಲ್ಕನೇ ಹಡಗು ಆಗಿದ್ದು, ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ ಗುಣಮಟ್ಟದ ಯುದ್ಧ ನೌಕೆ ಎಂಬ ಸ್ಥಾನ ಪಡೆದಿದೆ. ಇದು 75% ರಷ್ಟು ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದೆ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ-ಸೆನ್ಸರ್ ಪ್ಯಾಕೇಜ್‌ಗಳು ಮತ್ತು ಸುಧಾರಿತ ನೆಟ್‌ವರ್ಕ್-ಕೇಂದ್ರಿತ ಸಾಮರ್ಥ್ಯಗಳನ್ನು ಹೊಂದಿದೆ. INS ನೀಲಗಿರಿ, P17A ಸ್ಟೆಲ್ತ್ ಫ್ರಿಗೇಟ್ ಪ್ರಾಜೆಕ್ಟ್‌ನ ಮೊದಲ ಹಡಗನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ ಮತ್ತು ಮುಂದಿನ ಪೀಳಿಗೆಯ ಸ್ಥಳೀಯ ಯುದ್ಧನೌಕೆಗಳನ್ನು ಪ್ರತಿಬಿಂಬಿಸುವ ವರ್ಧಿತ ಸಾಮರ್ಥ್ಯ ಹೊಂದಿದೆ, ಸೀಕೀಪಿಂಗ್ ಮತ್ತು ಸ್ಟೆಲ್ತ್‌ಗಾಗಿ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. P75 ಸ್ಕಾರ್ಪೀನ್ ಪ್ರಾಜೆಕ್ಟ್‌ನ ಆರನೇ ಮತ್ತು ಅಂತಿಮ ಜಲಾಂತರ್ಗಾಮಿ INS ವಾಘ್‌ಶೀರ್, ಜಲಾಂತರ್ಗಾಮಿ ನಿರ್ಮಾಣದಲ್ಲಿ ಭಾರತದ ಉನ್ನತ ಪರಿಣತಿಯನ್ನು ಪ್ರತಿನಿಧಿಸುತ್ತದೆ ಮತ್ತು ಇದನ್ನು ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ ನಿರ್ಮಿಸಲಾಗಿದೆ.
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚಿಸುವ ಅವರ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ನವಿ ಮುಂಬೈನ ಖಾರ್ಘರ್‌ನಲ್ಲಿ ಇಸ್ಕಾನ್ ಶ್ರೀ ರಾಧಾ ಮದನಮೋಹನಜಿ ದೇವಸ್ಥಾನವನ್ನು ಉದ್ಘಾಟಿಸಲಿದ್ದಾರೆ. ಒಂಬತ್ತು ಎಕರೆಗಳಲ್ಲಿ ಹರಡಿರುವ ಈ ಯೋಜನೆಯು ಹಲವಾರು ದೇವತೆಗಳನ್ನು ಹೊಂದಿರುವ ಬೃಹತ್ ದೇವಾಲಯವಾಗಿದೆ, ವೇದ ಶಿಕ್ಷಣ ಕೇಂದ್ರ, ಪ್ರಸ್ತಾವಿತ ವಸ್ತುಸಂಗ್ರಹಾಲಯಗಳು ಮತ್ತು ಸಭಾಂಗಣ, ಹೀಲಿಂಗ್ ಸೆಂಟರ್, ಇತ್ಯಾದಿಗಳನ್ನು ಒಳಗೊಂಡಿದೆ. ಇದು ವೈದಿಕ ಬೋಧನೆಗಳ ಮೂಲಕ ಸಾರ್ವತ್ರಿಕ ಸಹೋದರತ್ವ, ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
*****