ಪ್ರಧಾನಮಂತ್ರಿ ಜನ್ ಧನ್ ಯೋಜನಾ ಮುಂದುವರಿಸಲು ಸಂಪುಟ ಅಸ್ತು.
14-08-2018 ರ ನಂತರವೂ ರಾಷ್ಟ್ರೀಯ ಆರ್ಥಿಕ ಸೇರ್ಪಡೆಯ ಮಿಷನ್ – ಪಿ.ಎಮ್.ಜೆ.ಡಿ.ವೈ ಮುಂದುವರಿಕೆ
ಖಾತೆ ತೆರೆಯುವ ಲಕ್ಷ್ಯ “ಪ್ರತಿಯೊಂದೂ ಕುಟುಂಬದಿಂದ ಪ್ರತಿಯೊಬ್ಬ ವಯಸ್ಕ”
ಓವರ್ ಡ್ರಾಫ್ಟ್ ಮಿತಿಯನ್ನು ರೂ. 5000 ರಿಂದ ರೂ 10000ಕ್ಕೆ ಏರಿಕೆ.
ರೂ. 2000 ತನಕದ ಓವರ್ ಡ್ರಾಫ್ಟ್ ಗಳಿಗೆ ಯಾವುದೇ ಷರತ್ತು ಇಲ್ಲ
ಓವರ್ ಡ್ರಾಫ್ಟ್ ಸೌಲಭ್ಯತೆಯ ಲಭ್ಯತೆಗಾಗಿ ವಯಸ್ಸಿನ ಮಿತಿಯನ್ನು 18-60 ವರ್ಷಗಳಿಂದ 18-65 ವರ್ಷಗಳಿಗೆ ಏರಿಕೆ.
28-08-2018ರ ನಂತರ ತೆರೆದಿರುವ ಪಿ.ಎಮ್.ಜೆ.ಡಿ.ವೈ( ಜನ್ ಧನ್ ) ಖಾತೆದಾರರಿಗೆ ನೀಡುವ ಹೊಸ ರೂಪೇ ಕಾರ್ಡ್ ನಲ್ಲಿ ಅಪಘಾತವಿಮೆ ರೂ 1 ಲಕ್ಷದಿಂದ ರೂ 2 ಲಕ್ಷಕ್ಕೆ ಏರಿಕೆ.
ಜನಪರ ಮತ್ತು ಬಡವರಪರ ಉಪಕ್ರಮಗಳ ಚೇತರಿಕೆಗೆ ಅತಿದೊಡ್ಡ ಪ್ರೋತ್ಸಾಹವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 05-09-2018ರಂದು ನಡೆದ ಕೇಂದ್ರ ಸಂಪುಟದ ಸಭೆಯಲ್ಲಿ ಈ ಕೆಳಗಿನ ಬದಲಾವಣೆಗಳೊಂದಿಗೆ ರಾಷ್ಟ್ರೀಯ ಆರ್ಥಿಕ ಸೇರ್ಪಡೆಯ ಮಿಷನ್ ನ – ಪ್ರಧಾನಮಂತ್ರಿ ಜನ್ ಧನ್ ಯೋಜನಾ ಮುಂದುವರಿಸಲು ಅಂಗೀಕಾರ:-
“ಪ್ರತಿಯೊಂದೂ ಕುಟುಂಬದಿಂದ ಪ್ರತಿಯೊಬ್ಬ ವಯಸ್ಕ” ಎಂಬ ಹೆಚ್ಚುವರಿ ವ್ಯಾಪ್ತಿಯಲ್ಲಿ 28-08-2018ರ ನಂತರ ಹೊಸ ರೂಪೇ ಕಾರ್ಡ್ ಖಾತೆದಾರರಿಗೆ ಅಪಘಾತವಿಮೆ ರೂ 1 ಲಕ್ಷದಿಂದ ರೂ 2 ಲಕ್ಷಕ್ಕೆ ಏರಿಕೆ.
ಪರಿಣಾಮ:
ಈ ಮಿಷನ್ ನ ( ಸಂಕಲ್ಪ ಯೋಜನೆಯ ) ಮುಂದುವರಿಕೆಯು ದೇಶದ ಎಲ್ಲ ವಯಸ್ಕ /ಕುಟುಂಬ ಕನಿಷ್ಟ ಇತರ ಹಣಕಾಸು ಸೇವೆಗಳಿಗೆ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಮತ್ತು ರೂ. 10000 ತನಕದ ಓವರ್ ಡ್ರಾಫ್ಟ್ಗಳ ಲಭ್ಯತೆಗಾಗಿ ಸಾಮಾನ್ಯ ಬ್ಯಾಂಕ್ ಖಾತೆ ತೆರೆಯಲು ಅನುಕೂಲ ಮಾಡುತ್ತದೆ. ಇದು ಅವರುಗಳನ್ನು ಹಣಕಾಸಿನ ಮುಖ್ಯ ಸೇವಾದಾರಿಯಲ್ಲಿ ತರುತ್ತದೆ ಮತ್ತು ಸರಕಾರದ ವಿವಿಧ ಯೋಜನೆಗಳ ಅನುದಾನಗಳ ಪ್ರಯೋಜನಗಳ ನೇರ ವರ್ಗಾವಣೆ ಸಾಧ್ಯವಾಗುತ್ತದೆ.
ಪಿ.ಎಮ್.ಜೆ.ಡಿ.ವೈ ಯಡಿ ಸಾಧನೆಗಳು:
ಅತಿ ಮಹತ್ವಪೂರ್ಣ ಪಿ.ಎಮ್.ಜೆ.ಡಿ.ವೈ. ಯ ಮುಂದುವರಿಕೆಗೆ ನಿರ್ಧಾರ ಮಾಡಿದ್ದು, ಇದರಲ್ಲಿ ಪ್ರತಿಯೊಂದೂ ಕುಟುಂಬದಿಂದ ಪ್ರತಿಯೊಬ್ಬ ವಯಸ್ಕನ ವರೆಗೆ ಖಾತೆಗಳನ್ನು ತೆರೆಯುವ ಲಕ್ಷ್ಯ ಎಂಬ ಬದಲಾವಣೆ ಮಾಡಲಾಗಿದೆ.
ಈ ರೀತಿಯ ಚಟುವಟಿಕೆಗಳಿಗೆ ಜನ್ ಧನ್- ಆಧಾರ್- ಮೊಬೈಲ್ ( ಜೆ.ಎ.ಎಮ್) ಬೆನ್ನೆಲುಬಾಗಿ ( ಆಧಾರ ಸ್ಥಂಬವಾಗಿ ) ಕಾರ್ಯನಿರ್ವಹಿಸಿ, ಆಮೂಲಕ ಡಿಜಿಟಲ್ ಘಟ್ಟದ ಆರ್ಥಿಕ ಸೇರ್ಪಡೆಯ & ಸುರಕ್ಷಿತ ( ವಿಮಾಭದ್ರತೆ)ಯ ಸಮಾಜವನ್ನು ನಿರ್ಮಿಸಲಿದೆ.
ಹಿನ್ನಲೆ:
ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಸಿಕೊಳ್ಳುವುದು ಸಾಂದ್ರತೆಯಲ್ಲಿ ಹೆಚ್ಚಳಗೊಳಿಸುವುದು, ಹಣಕಾಸು ಸೇರ್ಪಡೆಯ ಪ್ರಚಾರ,ದೇಶದಾದ್ಯಂತ ಪ್ರತಿಯೊಂದೂ ಕುಟುಂಬ ಕನಿಷ್ಟ ಒಂದು ಖಾತೆಯನ್ನು ಹೊಂದಿರುವುದು ಮುಂತಾದ ವಿಷಯಗಳಿಗಾಗಿ ರಾಷ್ಟ್ರೀಯ ಆರ್ಥಿಕ ಸೇರ್ಪಡೆಯ ಮಿಷನ್ ( ಪಿ.ಎಮ್.ಜೆ.ಡಿ.ವೈ.) ಯನ್ನು 15ನೇ ಆಗಸ್ಟ್ 2014ರಂದು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಹಾಗೂ ಯೋಜನೆಯು 2ನೇ ಆಗಸ್ಟ್ 2014ರಂದು ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.