Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜನಜಾತೀಯ ಗೌರವ್ ದಿವಸ್ ಅಚರಣೆ ಮೂಲಕ ದೇಶದ ಬುಡಕಟ್ಟು ಪರಂಪರೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುವುದು ಮತ್ತು ಆದಿವಾಸಿ ಜನಗಳ ಅಭಿವೃದಿಗಾಗಿ ಮಾಡುವ ನಿರ್ಣಯವು “ಪಂಚ ಪ್ರಾಣ” ಶಕ್ತಿಯ ಭಾಗವಾಗಿರುತ್ತದೆ.

ಜನಜಾತೀಯ ಗೌರವ್ ದಿವಸ್ ಅಚರಣೆ ಮೂಲಕ ದೇಶದ ಬುಡಕಟ್ಟು ಪರಂಪರೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುವುದು ಮತ್ತು ಆದಿವಾಸಿ ಜನಗಳ ಅಭಿವೃದಿಗಾಗಿ ಮಾಡುವ ನಿರ್ಣಯವು “ಪಂಚ ಪ್ರಾಣ” ಶಕ್ತಿಯ ಭಾಗವಾಗಿರುತ್ತದೆ.


ದೇಶವು  ಭಗವಾನ್ ಬಿರ್ಸಾ ಮುಂಡಾ ಮತ್ತು ಕೋಟ್ಯಂತರ ಬುಡಕಟ್ಟು ಧೈರ್ಯಶಾಲಿ ಜನಗಳ ಕನಸನ್ನು ನನ್ನಸು ಮಾಡಲು “ಪಂಚ ಪ್ರಾಣ” ಶಕ್ತಿಯೊಂದಿಗೆ ಮನ್ನೆಡೆಯುತ್ತಿದೆಯೆಂದು ಪ್ರಧಾನ ಮಂತ್ರಿ, ಶ್ರೀ ನರೇಂದ್ರ ಮೋದಿಯವರು ತಿಳಿಸಿದರು.

ಜನಜಾತೀಯ ಗೌರವ್ ದಿವಸ್ ಮೂಲಕ ದೇಶದ ಆದಿವಾಸಿ ಪರಂಪರೆಯಲ್ಲಿ ಹೆಮ್ಮೆ ವ್ಯಕ್ತಪಡಿಸುವುದು ಮತ್ತು ಆದಿವಾಸಿ ಜನಗಳ ಅಭಿವೃದಿಗಾಗಿನ ನಿರ್ಣಯವು “ಪಂಚ ಪ್ರಾಣ” ಶಕ್ತಿಯ ಭಾಗವಾಗಿರುತ್ತದೆಯೆಂದು ಅವರು ತಿಳಿಸಿದರು.

ಪ್ರಧಾನ ಮಂತ್ರಿಯವರು ಇಂದು ವಿಡಿಯೋ ಸಂದೇಶದ ಮೂಲಕ ಜನಜಾತೀಯ ದಿವಸದ ಅಂಗವಾಗಿ ಶುಭಾಶಯ ತಿಳಿಸಿದರು.

ಪ್ರಧಾನ ಮಂತ್ರಿಯವರು ಭಗವಾನ್ ಬಿರ್ಸಾ ಮುಂಡಾ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಭಗವಾನ್ ಬಿರ್ಸಾ ಮುಂಡಾ ಸ್ವಾತಂತ್ರ  ಹೋರಾಟದ ನಾಯಕ ಮಾತ್ರವಲ್ಲದೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಶಕ್ತಿಯ ರಾಯಭಾರಿಯು ಆಗಿರುವುದ್ದರಿಂದ, 15 ನೇ ನವಂಬರ್‌  ಬುಡಕಟ್ಟು ಹೆಮ್ಮೆಯ ದಿವಸವಾಗಿ ಅಚರಿಸುವ ಒಂದು ದಿನವಾಗಿರುತ್ತದೆಯೆಂದು ಹೇಳಿದರು

ಪ್ರಧಾನಮಂತ್ರಿಯವರು ಸ್ವಾತಂತ್ರ ಹೋರಾಟದಲ್ಲಿ ಬುಡಕಟ್ಟು ಸಮುದಾಯದ ಕೊಡುಗೆಗಳನ್ನು ಸ್ಮರಿಸಿಕೊಂಡರು ಮತ್ತು ಸ್ವಾತಂತ್ರ ಹೋರಾಟದ ಪ್ರಮುಖ ಬುಡಟ್ಟು ಚಳುವಳಿಗಳನ್ನು ಮತ್ತು ಸ್ವಾತಂತ್ರ ಕದನಗಳನ್ನು ನೆನಪಿಸಿಕೊಂಡರು .ಪ್ರಧಾನಿಯವರು ತಿಲಕ್ ಮಾಂಜಿ ನೇತೃತ್ವದ ದಾಮಿನ್ ಸಂಗ್ರಾಮ್, ಬುದ್ ಭಾಗತ್ ನೇತೃತ್ವದ ಲಾರ್ಕ ಚಳುವಳಿ,ಸಿದ್ದು ಕನ್ಹೊ ಕ್ರಾಂತಿ, ತಾನ ಭಗತ್ ಚಳುವಳಿ, ವೇಗ್ದ ಚಳುವಳಿ,ನಾಯ್ಕಡ ಚಳುವಳಿ, ಸಂತ್ ಜೋರಿಯಾ ಪರಮೇಶ್ವರ್ ಮತ್ತು ರೊಪ್ ಸಿಂಗ್ ನಾಯಕ್, ಲಿಮ್ದಿ ದಾಯೋದ್ ಯುದ್ದ, ಮನಘ್ರಾದಗೋವಿಂಗ್ ಗುರುಜೀಯನ್ನು ಮತ್ತು ಅಲೂರಿ ಸೀತಾರಾಮ ನೇತೃತ್ವದ ರಾಂಪ ಚಳುವಳಿಯನ್ನು ನೆನಪಿಸಿಕೊಂಡರು.

ಪ್ರಧಾನ ಮಂತ್ರಿಯವರು ಆದಿವಾಸಿಗಳ ಕೊಡುಗೆಯನ್ನು ಒಪ್ಪಿಕೊಳ್ಳಲು ಮತ್ತು ಅಚರಿಸಲು ಮಾನದಂಡಗಳನ್ನು ಪಟ್ಟಿಮಾಡಿದರು. ಪ್ರಧಾನ ಮಂತ್ರಿಯವರು ದೇಶದ ಹಲವು ಭಾಗಗಳಲ್ಲಿನ ವಸ್ತು ಸಂಗ್ರಾಹಲಯಗಳ ಬಗ್ಗೆ ಮತ್ತು  ಜನ್ ಧನ್,ಗೋಬರ್ ಧನ್,ವನ್ ಧನ್,ಸ್ವ ಸಹಾಯ ಸಂಘಗಳ,ಸ್ವಚ ಭಾರತ,ಪಿ.ಎಂ.ಅವಾಸ್ ಯೋಜನೆ,ಮಾತೃವಂದನಾ ಯೋಜನೆ,ಗ್ರಾಮೀಣ ಸಡಕ್ ಯೋಜನೆ,ಮೊಬೈಲ್ ಸಂಪರ್ಕ,ಏಕಲವ್ಯ ಶಾಲೆ,ಅರಣ್ಯ ಉತ್ಪನ್ನಗಳ್ಳಿಗೆ ಶೇಕಡ 90ರಷ್ಷು ಬೆಂಬಲ ಬೆಲೆ,ಸಿಕಲ್ ಸೆಲ್ ಅನೀಮಿಯ, ಬುಡಕಟ್ಟು ಸಂಶೋಧನೆ ಸಂಸ್ಧೆ,ಉಚಿತ ಕರೋನ ಲಸಿಕೆ ಮತ್ತು ಭಾರಿ ಪ್ರಮಾಣದಲ್ಲಿ ಬುಡಕಟ್ಟು ಸಮುದಾಯಕ್ಕೆ ಅನುಕೊಲವಾಗಿರುವ ಮಿಷನ್ ಇಂದ್ರಧನುಷ್ ನಂತಹ ಯೋಜನೆಗಳ ಬಗ್ಗೆ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆದಿವಾಸಿ ಜನಾಂಗದ ಶೌರ್ಯ,ಸಮುದಾಯಜೀವನ,ಒಳ್ಳಗೊಳ್ಳುವಿಕೆಯ ಬಗ್ಗೆ ಪ್ರಸ್ತಾಪಿಸಿದರು.ಭಾರತವು ಭವ್ಯವಾದ ಆದಿವಾಸಿ ಪರಂಪರೆಯಿಂದ ಕಲಿಯುವ ಮೂಲಕ ಅದರ ಭವಿಷ್ಯಕ್ಕೆ ರೂಪು ನೀಡಬೇಕು.ಇದಕ್ಕೆ ಜನಜಾತೀಯ ಗೌರವ್ ದಿವಸ್ ಒಂದು ಅವಕಾಶ ಮತ್ತು ಮಾಧ್ಯಮವಾಗುತ್ತದೆಯೆಂದು ನಾನು ವಿಶ್ವಾಸವಿಟ್ಟಿರುತ್ತೇನೆಂದು ಮಾತು ಮುಗಿಸಿದರು.

*****