ಶ್ರೀ ಪೇಜಾವರ ಮಠದ ಪರಮ ಶ್ರದ್ಧಾಳುಗಳಾದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರೇ,
ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರೇ,
ಶ್ರೀ ರಾಘವೇಂದ್ರ ಮಠದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜೀ ಅವರೇ,
ಮತ್ತು
ಅಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಶ್ರದ್ಧಾಳುಗಳೇ,
ಭಾರತದಲ್ಲಿ ಭಕ್ತಿ ಆಂದೋಲನ ಸಮಯದ ಮಹಾನ್ ಸಂತರಲ್ಲಿ ಒಬ್ಬರಾದ ಮಧ್ವಾಚಾರ್ಯರ ಏಳನೆಯ ಶತಮಾನೋತ್ಸವ ಸಮಾರಂಭದಲ್ಲಿ ಉಪಸ್ಥಿತನಿರಲು ನನಗೆ ಅತೀವ ಸಂತೋಷವಾಗುತ್ತಿದೆ.
ಕಾರ್ಯ ಬಾಹುಳ್ಯದ ನಿಮಿತ್ತ ನಗೆ ಉಡುಪಿಗೆ ಬರಲು ಸಾಧ್ಯವಾಗುತ್ತಿಲ್ಲ. ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೆ ನಾನು ಆಲಿಘಡದಿಂದ ವಾಪಸಾದೆ. ನಿಮ್ಮೆಲ್ಲರ ಆಶೀರ್ವಾದಗಳನ್ನು ಪಡೆದು ಕೊಳ್ಳುವ ಶುಭ ಅವಕಾಶ ನನಗೆ ಪ್ರಾಪ್ತವಾಗಿರುವುದು ನನ್ನ ಪರಮ ಸೌಭಾಗ್ಯ.
ಮಾನವ ಜಾತಿಯ ನೈತಿಕ ಮತ್ತು ಆಧ್ಯಾತ್ಮಿಕ ಉತ್ಥಾನಕ್ಕಾಗಿ ಸಂತ ಮಧ್ವಾಚಾರ್ಯರ ಸಂದೇಶವನ್ನು ಪ್ರಚಾರ ಮತ್ತು ಪ್ರಸಾರ ಮಾಡುತ್ತಿರುವುದಕ್ಕಾಗಿ ನಾನು ಎಲ್ಲ ಆಚಾರ್ಯರಿಗೆ ಮತ್ತು ಪಂಡಿತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
ಕರ್ನಾಟಕದ ಪುಣ್ಯ ಭೂಮಿಗೂ ನನ್ನ ನಮಸ್ಕಾರಗಳು. ಮಧ್ವಾಚಾರ್ಯರಂತಹ ಇನ್ನೊಬ್ಬ ಸಂತ ಆಚಾರ್ಯ ಶ್ರೀ ಶಂಕರ ಮತ್ತು ಆಚಾರ್ಯ ಶ್ರೀ ರಾಮಾನುಜರಂತಹ ಪುಣ್ಯಾತ್ಮರು ಈ ನಾಡಿಗೆ ವಿಶೇಷ ಸ್ನೇಹ ತೋರಿದ್ದಾರೆ.
ಉಡುಪಿ ಶ್ರೀ ಮಧ್ವಾಚಾರ್ಯರ ಜನ್ಮಭೂಮಿ ಮತ್ತು ಕರ್ಮಭೂಮಿಯಾಗಿತ್ತು. ಆಚಾರ್ಯ ಮಧ್ವರು ತಮ್ಮ ಗೀತಾಭಾಷ್ಯವನ್ನು ಉಡುಪಿಯ ಈ ಪವಿತ್ರ ಭೂಮಿಯಲ್ಲಿ ರಚಿಸಿದರು.
ಶ್ರೀ ಮಧ್ವಾಚಾರ್ಯರು ಇಲ್ಲಿ ಶ್ರೀಕೃಷ್ಣ ಮಂದಿರವನ್ನೂ ಸ್ಥಾಪಿಸಿದರು. ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀಕೃಷ್ಣನ ಮೂರ್ತಿಯು ವಿಶಿಷ್ಟವಾದುದು [ಅದು ಗುಜರಾತಿನ ಸಮುದ್ರ ತೀರದಿಂದ ಬಂದುದು] ಇದರೊಂದಿಗೆ ನನಗೆ ವಿಶೇಷ ಸಂಬಂಧವಿದೆ.
ಉಡುಪಿಯೊಂದಿಗೆ ನನ್ನ ಆತ್ಮೀಯತೆ ಕೂಡ ವಿಭಿನ್ನವಾದುದೇ. ನನಗೆ ಅನೇಕ ವೇಳೆ ಉಡುಪಿಗೆ ಬರುವ ಅವಕಾಶ ಸಿಕ್ಕಿದೆ. 1968ರಿಂದ ನಾಲ್ಕು ದಶಕಗಳವರೆಗೆ ಹೆಚ್ಚಿನ ಸಂದರ್ಭಗಳಲ್ಲಿ ಉಡುಪಿ ಮುನಿಸಿಪಲ್ ಕಾರ್ಪೊರೇಶನ್ನಿನ ಜವಾಬ್ದಾರಿಯನ್ನು ಭಾರತೀಯ ಜನತಾ ಪಕ್ಷ ಮತ್ತು ಜನಸಂಘ ಪಕ್ಷಗಳು ನಿರ್ವಹಿಸಿವೆ. 1968ರಲ್ಲಿ mಚಿಟಿuಚಿಟ sಛಿಚಿveಟಿgiಟಿg ಅನ್ನು ನಿಷೇಧಿಸಿದ ಪ್ರಥಮ ಮುನಿಸಿಪಲ್ ಕಾರ್ಪೊರೇಶನ್ ಉಡುಪಿಯೇ. 1984 ಮತ್ತು 1989ರಲ್ಲಿ ಉಡುಪಿಯನ್ನು ಸ್ವಚ್ಛತೆಗಾಗಿ ಎರಡು ಬಾರಿ ಸನ್ಮಾನಿಸಲಾಯಿತು. ಸ್ವಚ್ಛತೆ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗಾಗಿ ಜನಶಕ್ತಿಯನ್ನು ಜಾಗೃತಗೊಳಿಸುವ ನಮ್ಮ ಬದ್ಧತೆಯನ್ನು ತೋರಿಸಲು ಉಡುಪಿ-ಪಟ್ಟಣ ಒಂದು ಜೀವಂತ ಉದಾಹಣೆ.
ಸಮಾರಂಭದಲ್ಲಿ ವಿಶ್ವೇಶತೀರ್ಥ ಸ್ವಾಮಿಗಳು ಸ್ವಯಂ ಉಪಸ್ಥಿತರಿರುವುದು ನನಗೆ ಇಮ್ಮಡಿ ಸಂತೋಷವಾಗಿದೆ. ಎಂಟು ವರ್ಷದಷ್ಟು ಚಿಕ್ಕ ವಯಸ್ಸಿನಲ್ಲೇ ಸಂನ್ಯಾಸ ತೆಗೆದುಕೊಂಡು ಎಂಬತ್ತು ವರ್ಷಗಳ ಕಾಲ ನಮ್ಮ ದೇಶ ಮತ್ತು ಸಮಾಜವನ್ನು ಬಲಗೊಳಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದೇಶದ ಮೂಲೆಮೂಲೆಗೆ ಹೋಗಿ ಶಿಕ್ಷಣದ ಕೊರತೆ, ಗೋಹಿಂಸೆ, ಜಾತಿವಾದಗಳ ವಿರುದ್ಧ ಹೋರಾಟ ನಡೆಸಿದ್ದಾರೆ. ಇವರಿಗೆ ಐದನೆಯ ಪರ್ಯಾದ ಅವಕಾಶ ಸಿಕ್ಕಿರುವುದು ಸ್ವಾಮೀಜಿಯವರ ಪುಣ್ಯ ಕರ್ಮಗಳ ಪ್ರಭಾವವೇ ಸರಿ. ಇಂತಹ ಸಂತನಿಗೆ ನನ್ನ ನಮಸ್ಕಾರಗಳು.
ಸಹೋದರ ಸಹೋದರಿಯರೇ,
ನಮ್ಮ ದೇಶದ ಇತಿಹಾಸ ಸಾವಿರಾರು ವರ್ಷ ಹಳೆಯದು. ಸಾವಿರಾರು ವರ್ಷಗಳಿಂದ ಗಟ್ಟಿಯಾದ ನಮ್ಮ ದೇಶದಲ್ಲಿ ಸಮಯಕ್ಕೆ ಸರಿಯಾದ ಬದಲಾವಣೆಗಳಾಗುತ್ತಿವೆ: ವ್ಯಕ್ತಿ ಮಟ್ಟದಲ್ಲಿ ಬದಲಾವಣೆ, ಸಮಾಜಮಟ್ಟದಲ್ಲಿ ಬದಲಾವಣೆ [ಹೀಗೆ ಬದಲಾವಣೆಗಲ ವ್ಯಾಪ್ತಿ]. ಆದರೆ ಸಮಯ ಕಳೆದಂತೆ ಹಲವು ಕೆಡುಕುಗಳೂ ಸಮಾಜದಲ್ಲಿ ಹರಡಿವೆ.
ಕೆಡುಕುಗಳುಂಟಾದಾಗ ನಮ್ಮ ಸಮಾಜಮಧ್ಯದಿಂದಲೇ ಒಬ್ಬರು ಸುಧಾರಣೆಯ ಕಾರ್ಯವನ್ನು ಪ್ರಾರಂಭಿಸುವುದು ನಮ್ಮ ಸಮಾಜದ ಒಂದು ವಿಶೇಷ. ಇಂತಹ ಸುಧಾರಣೆಗಳ ನೇತೃತ್ವವನ್ನು ಸಾಧು ಸಂತರು ವಹಿಸಿಕೊಂಡಿರುವ ಹಲವು ಉದಾಹರಣೆಗಳಿವೆ. ಆಗಾಗ ಇಂತಹ ದೇವ ಸಮಾನ ಅದ್ಭುತ ಪುರುಷರು ಸಿಕ್ಕಿರುವುದು ಭಾರತೀಯ ಸಮಾಜದ ವಿಶೇಷ ಸಾಮರ್ಥ್ಯ; ಸ್ವಭಾವ. ಇವರು ಸಮಾಜದ ಕೆಡುಕುಗಳನ್ನು ಗುರುತಿಸಿದರು ಮತ್ತು ಅವುಗಳಿಂದ ಮುಕ್ತರಾಗುವ ದಾರಿಯನ್ನು ತೋರಿಸಿದರು.
ಶ್ರೀ ಮಧ್ವಾಚಾರ್ಯರು ಅಂತಹ ಸಂತರುಗಳಲ್ಲೊಬ್ಬರು. ತಮ್ಮ ಕಾಲದ ಅಗ್ರಗಣ್ಯ ದೂತರು. ತಮ್ಮ ಕಾಲದಲ್ಲಿ ಪ್ರಚಲಿತವಿದ್ದ ಕೆಟ್ಟ ರೀತಿಗಳ ವಿರುದ್ಧ ತಮ್ಮ ವಿಚಾರಗಳನ್ನು ಅವರು ಮಂಡಿಸಿದರು, ಸಮಾಜಕ್ಕೆ ಹೊಸ ದಾರಿಯನ್ನು ತೋರಿಸಿದರು. ಸಮಾಜದಲ್ಲಿ ಪಶುಬಲಿಯನ್ನು ಕೊನೆಗೊಳಿಸುವ ಸಮಾಜ ಸುಧಾರಣೆ ಮಧ್ವಾಚಾರ್ಯರಂತಹ ಮಹಾನ್ ಸಂತರ ಕೊಡುಗೆ.
ನೂರಾರು ವರ್ಷಗಳ ಮೊದಲೇ ನಮ್ಮ ಸಮಾಜದಲ್ಲಿದ್ದ ಸರಿಯಲ್ಲದ ರೀತಿಗಳನ್ನು ಸರಿಪಡಿಸಲು ಸಾಧು ಸಜ್ಜನರು ಜನಾಂದೋಲನವನ್ನೇ ಪ್ರಾರಂಭಿಸಿದ್ದಕ್ಕೆ ಇತಿಹಾಸವೇ ಸಾಕ್ಷಿ. ಅವರು ಈ ಜನಾಂದೋಲನವನ್ನು ಭಕ್ತಿಯೊಂದಿಗೆ ಜೋಡಿಸಿದರು. ಭಕ್ತಿಯ ಈ ಚಳುವಳಿ ದಕ್ಷಿಣ ಭಾರತದಿಂದ ಹೊರಟು ಮಹಾರಾಷ್ಟ್ರ, ಗುಜರಾತುಗಳಲ್ಲಿ ಪ್ರಸರಿಸಿ ಉತ್ತರಭಾರತದವರೆಗೆ ತಲುಪಿತ್ತು.
ಆ ಭಕ್ತಿಯುಗದ ಅವಧಿಯಲ್ಲಿ ಹಿಂದೂಸ್ತಾನದ ಪ್ರತಿ ಕ್ಷೇತ್ರದಲ್ಲಿ ಅಂದರೆ ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಎಲ್ಲ ದಿಕ್ಕುಗಳಲ್ಲಿ, ಪ್ರತಿಯೊಂದು ಭಾಷೆಯಲ್ಲಿ ಮತ್ತು ಪ್ರತಿಯೊಂದು ಕಡೆಯೂ ದೇವಸ್ಥಾನ, ಮಂದಿರ, ಮಠಗಳಿಂದ ಹೊರಬಂದು ನಮ್ಮ ಸಂತರು ಚೇತನವನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಮಾಡಿದರು; ಭಾರತದ ಆತ್ಮವನ್ನು ಎಚ್ಚರಿಸುವ ಕೆಲಸವನ್ನು ಮಾಡಿದರು.
ಭಕ್ತಿಪಂಥವನ್ನು ದಕ್ಷಿಣದಲ್ಲಿ ಮಧ್ವಾಚಾರ್ಯರು, ನಿಂಬಾರ್ಕಾಚಾರ್ಯರು, ವಲ್ಲಭಾಚಾರ್ಯರು, ರಾಮಾನಾಜುಚಾರ್ಯರು, ಪಶ್ಚಿಮದಲ್ಲಿ ಮೀರಾ ಬಾಯಿ, ಏಕನಾಥರು, ತುಕಾರಾಮರು, ರಾಮದಾಸರು, ನರಸೀ ಮೆಹತಾ ಅವರು, ಉತ್ತರದಲ್ಲಿ ರಾಮಾನಂದರು, ಕಬಿರದಾಸರು, ಗೋಸ್ವಾಮೀ ತುಲಸೀ ದಾಸರು, ಸೂರದಾಸರು, ಗುರುನಾನಕ ದೇವರು, ಸಂತ ರೈದಾಸರು, ಪೂರ್ವದಲ್ಲಿ ಚೈತನ್ಯ ಮಹಾಪ್ರಭುಗಳು ಮತ್ತು ಶಂಕರದೇವರು ಇಂತಹ ಸಂತರುಗಳ ವಿಚಾರಗಳಂದ ದೇಶ ಸಶಕ್ತವಾಗಿದೆ. ಇದೇ ಸಂತರು ಮತ್ತು ಮಹಾ ಪುರುಷರ ಪ್ರಭಾವದಿಂದಲೇ ಹಿಂದೂಸ್ತಾನ ಆ ದಿನಗಳಲ್ಲಿ ವಿಪತ್ತುಗಳಿಂದ ಪಾರಾಗಿ, [ಕಷ್ಟಗಳನ್ನು] ಸಹಿಸಿ ಮುನ್ನಡೆಯಲು ಸಾಧ್ಯವಾಯಿತು; ತನ್ನನ್ನು ತಾನು ಸಂರಕ್ಷಿಸಿಕಳ್ಳು ಸಾಧ್ಯವಾಯಿತು.
ಆದಿಶಂಕರಾಚಾರ್ಯರು ದೇಶದ ನಾಲ್ಕೂ ದಿಕ್ಕುಗಳಲ್ಲಿ ಸಂಚರಿಸಿ ಸಂಸಾರದಿಂದ ಮೇಲೆದ್ದು ಈಶ್ವರನಲ್ಲಿ ಸೇರುವ ರಸ್ತೆಯನ್ನು ಜನರಿಗೆ ತೋರಿಸಿದರು. ಶ್ರೀ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತದ ವ್ಯಾಖ್ಯಾನ ಮಾಡಿದರು. ಅವರೂ ಕೂಡ ಜಾತಿಯ ಪರಿಮಿತಿಗಳಿಂದ ಹೊರಬಂದು ಪರಮಾತ್ಮನನ್ನು ಹೊಂದುವ ದಾರಿಯನ್ನು ತೋರಿದರು. ಕರ್ಮ, ಜ್ಞಾನ ಮತ್ತು ಭಕ್ತಿಗಳು ಈಶ್ವರನೆಡೆಗೆ ನಮ್ಮನ್ನು ಒಯ್ಯುತ್ತವೆ ಎಂದು ಅವರು ಬೋಧಿಸಿದರು. ಅವರು ತೋರಿದ ರಸ್ತೆಯಲ್ಲಿಯೇ ನಡೆದು ಸಂತ ರಾಮಾನಂದರು ಎಲ್ಲ ಜಾತಿ ಮತ್ತು ಧರ್ಮಗಳ ಜನರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ ಜಾತಿವಾದಕ್ಕೆ ದೊಡ್ಡ ಹೊಡೆತವನ್ನು ಕೊಟ್ಟರು. ಸಂತ ಕಬೀರದಾಸರು ಕೂಡ ಜಾತಿವ್ಯಸ್ಥೆ ಮತ್ತು ಕರ್ಮಕಾಂಡಗಳಿಂದ ಸಮಾಜವನ್ನು ಮುಕ್ತಗೊಳಿಸಲು ಪ್ರಯತ್ನಿಸಿದರು.
ಅವರು ಹೇಳುತ್ತಿದ್ದರು – पानी केरा बुलबुला- अस मानस की जात…[ನೀರಿನ ಮೇಲಿನ ಗುಳ್ಳೆಗಳ ತರಹ ಮನುಷ್ಯನ ಜಾತಿಗಳು] ಜೀವನದ ಇಷ್ಟು ದೊಡ್ಡ ಸತ್ಯವನ್ನು ಅವರು ಇಷ್ಟೊಂದು ಸುಲಭ ಮಾತುಗಳಲ್ಲಿ ನಮ್ಮ ಸಮಾಜದ ಮುಂದಿಟ್ಟಿದ್ದಾರೆ.
ಗುರುನಾನಕರು ಹೇಳುತ್ತಿದ್ದರು – मानव की जात सभो एक पहचानबो। [ಇಡೀ ಮಾನವ ಜಾತಿಯನ್ನು ಒಂದಾಗಿ ಗುರುತಿಸಯ್ಯಾ]
ಸಂತ ವಲ್ಲಭಾಚಾರ್ಯರು ಸ್ನೇಹ ಮತ್ತು ಪ್ರೇಮಗಳ ಮಾರ್ಗದಲ್ಲಿ ನಡೆಯುತ್ತಾ ಮುಕ್ತಿ ಪಡೆಯುವ ಮಾರ್ಗವನ್ನು ತೆರೆದಿಟ್ಟರು
ಚೈತನ್ಯ ಮಹಾಪ್ರಭುಗಳೂ ಕೂಡ ಅಸ್ಪೃಶ್ಯತೆಯನ್ನು ವಿರೋಧಿಸಿ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದರು.
ಸಂತರ ಇಂತಹ ಸರಣಿ ಭಾರತದ ಜೀವಂತ ಸಮಾಜದ ಪ್ತಿಬಿಂಬವೇ ಆಗಿದೆ. ಸಮಾಜದಲ್ಲಿ ಯಾವುದೇ ಸವಾಲು ಎದುರಾದರೆ ಅದರ ಉತ್ತರವು ಆಧ್ಯಾತ್ಮಿಕ ರೂಪದಲ್ಲಿ ಪ್ರಕಟವಾಗುತ್ತದೆ. ಆದ್ದರಿಂದ ಪೂರಾ ದೇಶದಲ್ಲಿ ಒಬ್ಬ ಸಂತ ಜನ್ಮ ನೀಡಿರದ ಜಿಲ್ಲೆ ಅಥವ ತಾಲ್ಲೂಕು ಎಂಬುದೇ ಇಲ್ಲ. ಸಂತ ಭಾರತೀಯ ಸಮಾಜದ ಪೀಡಾ ನಾಶನ ಉಪಾಯವಾಗಿ ಬಂದಿದ್ದಾರೆ.
ತಮ್ಮ ಜೀವನ, ತಮ್ಮ ಉಪದೇಶ ಮತ್ತು ತಾವು ರಚಿಸಿದ ಸಾಹಿತ್ಯದಿಂದ ಅವರು ಸಮಾಜ ಸುಧಾರಣೆಯ ಕೆಲಸ ಮಾಡಿದ್ದಾರೆ.
ಭಕ್ತಿ ಚಳುವಳಿಯ ಮೂಲಕ ಧರ್ಮ ದರ್ಶನ ಮತ್ತು ಸಾಹಿತ್ಯದ ೊಂದು ತ್ರಿವೇಣೀ ಸಂಗಮ ಹೀಗೆ ಸ್ಥಾಪಿತವಾಯಿತು. ಅದು ಇಂದಿಗೂ ನಮ್ಮೆಲ್ಲರಿಗೆ ಪ್ರೇರಣೆ ನೀಡುತ್ತಿದೆ. ಇದೇ ಸಂದರ್ಭದಲ್ಲಿ ರಹೀಮ ಹೇಳಿದ್ದರು :
वे रहीम नर धन्य हैं,
पर उपकारी अंग,
बांटन वारे को लगे,
ज्यों मेहंदी को रंग…
ಅಂದರೆ ಯಾವ ರೀತಿಯಲ್ಲಿ ಮೆಹಂದಿ ಹಾಕುವವನ ಕೈಗೆ ಮೆಹಂದಿಯ ಬಣ್ಣ ಹತ್ತಿಕೊಳ್ಳುತ್ತದೆಯೋ ಅದೇ ತರಹ ಯಾರು ಪರೋಪಕಾರ ಮಾಡುತ್ತಾನೋ, ಇನ್ನೊಬ್ಬರಿಗೆ ಸಹಾಯ ಮಾಡುತ್ತಾನೊ, ಪರರಿಗೆ ಒಳ್ಳೆಯದಾಗುವಂತಹ ಕೆಲಸಗಳನ್ನು ಮಾಡುತ್ತಾನೋ, ಅಂತಹವನ ಪ್ರಗತಿ ತಾನೇ ತಾನಾಗಿ ಆಗುತ್ತದೆ.
ಭಕ್ತಿ ಪಂಥದ ಈ ಅವಧಿಯಲ್ಲಿ ರಸಖಾನ್, ಸೂರದಾಸ, ಮಲಿಕ್ ಮೊಹಮ್ಮದ್ ಜಾಯ್ಸೀ, ಕೇಶವ ದಾಸ, ವಿದ್ಯಾಪತಿ, ಇವರಂತಹ ಮಹಾನ್ ವ್ಯಕ್ತಿಗಳು ಆಗಿ ಹೋದರು. ಇವರುಗಳು ತಮ್ಮ ನಡೆ ಮತ್ತು ಸಾಹಿತ್ಯದಿಂದ ಸಮಾಜಕ್ಕೆ ಕನ್ನಡಿ ತೋರಿಸಿದರು ಮಾತ್ರವಲ್ಲ, ಅದನ್ನು ಸುಧಾರಿಸುವ ಪ್ರಯತ್ನಗಳನ್ನೂ ಮಾಡಿದರು.
ಮನುಷ್ಯನ ಜೀವನದಲ್ಲಿ ಕರ್ಮ[ಕ್ಕೆ ಮಹತ್ವವಿದೆ]. [ಅಂದರೆ] ಮಾನವನ ಆಚರಣೆಗಳಿಗೆ ಮಹತ್ವ. ಅದಕ್ಕೆಂದೇ ನಮ್ಮ ಸಾಧು ಸಂತರು ಇಂತಹ ಆಚರಣೆಗಳನ್ನು ಸದಾ ಎಲ್ಲಕ್ಕಿಂತ ಮೇಲಿಟ್ಟರು. ಗುಜರಾತಿನ ಮಹಾನ್ ಸಂತ ನರಸೀ ಮೆಹತಾ ಹೇಳುತ್ತಿದ್ದರು – वाच-काछ-मन निश्चल राखे, परधन नव झाले हाथ रे। ಅಂದರೆ ವ್ಯಕ್ತಿ ತನ್ನ ನುಡಿ,ನಡೆ ಮತ್ತು ಯೋಚನೆಗಳನ್ನು ಸದಾ ಪವಿತ್ರವಾಗಿಟ್ಟುಕೊಂಡಿರಬೇಕು. ತನ್ನ ಕೈಯಿಂದ ಇನ್ನೊಬ್ಬರ ಧನವನ್ನು ಎಂದೂ ಮುಟ್ಟ ಬಾರದು. ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಇಷ್ಟು ದೊಡ್ಡ ಹೋರಾಟ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ವಿಚಾರ ಎಷ್ಟೊಂದು ಪ್ರಸ್ತುತವಾಗಿದೆ!
ಲೋಕಕ್ಕೆ ಅನುಭವ ಮಂಟಪ ಅಥವ ಮೊದಲ ಸಂಸತ್ತಿನ ಮಂತ್ರವನ್ನು ನೀಡಿದ ಮಹಾನ್ ಸಮಾಜ ಸುಧಾರಕ ಬಸವೇಶ್ವರರು ಕೂಡ ಮನುಷ್ಯನ ಜೀವನ ನಿಸ್ವಾರ್ಥ ಕರ್ಮ ಯೋಗದಿಂದ ಪ್ರಕಾಶಿತವಾಗುತ್ತದೆ ಎಂದು ಹೇಳುತ್ತಿದ್ದರು. ಸಾಮಾಜಿಕ ಮತ್ತು ವೈಯಕ್ತಿಕ ಆಚರಣೆಗಳಲ್ಲಿ ಸ್ವಾರ್ಥ ಬರುವುದೇ ಭ್ರಷ್ಟಾಚಾರದ ಮೊದಲ ಕಾರಣವಾಗುತ್ತದೆ. ನಿಸ್ವಾರ್ಥ ಕರ್ಮಾಚರಣೆಗೆ ಎಷ್ಟು ಮಹತ್ವ ನೀಡಲಾಗುತ್ತದೋ ಅಷ್ಟುಮಟ್ಟಿಗೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ.
ಶ್ರೀ ಮಧ್ವಾಚಾರ್ಯರು ಯಾವುದೇ ಕೆಲಸ ಚಿಕ್ಕದು ದೊಡ್ಡದು ಆಗಿರುವುದಿಲ್ಲ ಎಂಬುದನ್ನು ಒತ್ತುಕೊಟ್ಟು ಹೇಳಿದರು.
ಪೂರ್ಣ ನಿಷ್ಠೆ ಮತ್ತು ಅರ್ಪಣಾ ಭಾವದಿಂದ ಕರ್ತವ್ಯವನ್ನು ಮಾಡಿದರೆ ಭಗವಂತನ ಪೂಜೆ ಮಾಡಿದ ಹಾಗೇ ಆಗುತ್ತದೆ.
ಅವರು ಹೇಳುತ್ತಿದ್ದರು –ನಾವು ಸರಕಾರಕ್ಕೆ ತೆರಿಗೆ ನೀಡುವುದು ಹೇಗೋ, ಹಾಗೆ ಮಾನವನ ಸೇವೆ ಮಾಡುವುದು ಪರಮಾತ್ಮನಿಗೆ ನಾವು ಕೊಡುವ ತೆರಿಗೆ.
ಹಿಂದೂಸ್ತಾನದಲ್ಲಿ ಇಂತಹ ಮಹಾನ್ ಪರಂಪರೆ ಇದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಇಂತಹ ಮಹಾನ್ ಸಂತ ಮುನಿಗಳು ಆಗಿದ್ದಾರೆ, ಋಷಿ ಮುನಿಗಳು ಮಹಾ ಪುರುಷರು ಆಗಿ ಹೋಗಿದ್ದಾರೆ. ಇವರುಗಳು ತಮ್ಮ ತಪಸ್ಸು ಮತ್ತು ತಮ್ಮ ಜ್ಞಾನದ ಉಪಯೋಗವನ್ನು ರಾಷ್ಟ್ರದ ಭಾಗ್ಯವನ್ನು ಬದಲಿಸಲು, ರಾಷ್ಟ್ರ ನಿರ್ಮಾಣ ಕಾರ್ಯವನ್ನು ನೆರವೇರಿಸಲು ಬಳಸಿದರು.
ನಮ್ಮ ಸಂತರು ಇಡೀ ಸಮಾಜಕ್ಕೆ:
ಜಾತಿಯಿಂದ ಜಗತ್ತಿನ ಕಡೆಗೆ
ವ್ಯಷ್ಟಿಯಿಂದ ಸಮಷ್ಟಿಯ ಕಡೆಗೆ
ನಾನುವಿನಿಂದ ನಾವು ಕಡೆಗೆ
ಜೀವನಿಂದ ಈಶ್ವರನೆಡೆಗೆ
ಜೀವಾತ್ಮನಿಂದ ಪರಮಾತ್ಮನೆಡೆಗೆ
ಹೋಗಲು ಪ್ರೇರಣೆ ನೀಡಿದರು.
ಸ್ವಾಮೀ ದಯಾನಂದ ಸರಸ್ವತಿ, ಸ್ವಾಮೀ ವಿವೇಕಾನಂದ, ರಾಜಾರಾಮ ಮೋಹನ ರಾಯ್, ಈಶ್ವರ ಚಂದ್ರ ವಿದ್ಯಾ ಸಾಗರ್, ಜ್ಯೋತಿಬಾ ಫುಲೆ, ಡಾ ಭೀಮರಾವ್ ಅಂಬೇಡ್ಕರ್, ಮಹಾತ್ಮಾ ಗಾಂಧಿ, ಪಾಂಡುರಂಗ ಶಾಸ್ತ್ರೀ ಅಠಾವಳೆ, ವಿನೋಬಾ ಭಾವೆ, – ಇವರಂತಹ ಅಗಣಿತ ಸಂತ ಪುರುಷರು ಭಾರತದ ಆಧ್ಯಾತ್ಮಿಕ ಧಾರೆಯನ್ನು ಸದಾ ಚೈತನ್ಯ ಮಯವಾಗಿ ಇಟ್ಟಿದ್ದಾರೆ. ಸಮಾಜದಲ್ಲಿ ನಡೆದು ಬರುತ್ತಿದ್ದ ಕೆಟ್ಟ ರೀತಿಗಗಳ ವಿರುದ್ಧ ಜನಾಂದೋಲನವನ್ನು ಪ್ರಾರಂಭಿಸಿದರು. ಜಾತಿ ಗೀತಿಗಳನ್ನು ಹೋಗಲಾಡಿಸುವುದರಿಂದ ಹಿಡಿದು ಜನ ಜಾಗೃತಿಯವರೆಗೆ; ಭಕ್ತಿಯಿಂದ ಹಿಡಿದು ಜನಶಕ್ತಿಯ ವರೆಗೆ; ಸತೀ ಪದ್ಧತಿಯನ್ನು ಹೋಗಲಾಡಿಸುವುದರಿಂದ ಹಿಡಿದು ಸ್ವಚ್ಛತೆ ಕಾಪಾಡುವವರೆಗೆ ; ಸಾಮಾಜಿಕ ಸಮರಸತೆಯಿಂದ ಹಿಡಿದು ಶಿಕ್ಷಣದವರೆಗೆ; ಸ್ವಾಸ್ಥ್ಯದಿಂದ ಸಾಹಿತ್ಯದ ವರೆಗೆ , ಇವರೆಲ್ಲ ತಮ್ಮ ಛಾಪನ್ನು ಬಿಟ್ಟು ಹೋಗಿದ್ದಾರೆ; ಆಗಿಂದಾಗ ಜನ ಮಾನಸವನ್ನು ಬದಲಿಸಿದ್ದಾರೆ. ಇವರಂತಹಮಹಾನ್ ವಿಭೂತಿ ಪುರುಷರು ದೇಶಕ್ಕೆ ಅದ್ಭುತವಾದ ಸಾಟಿ ಇಲ್ಲದ ಶಕ್ತಿಯನ್ನು ನೀಡಿದ್ದಾರೆ.
ಸಹೋದರ ಸಹೋದರಿಯರೇ,
ಸಾಮಾಜಿಕ ಕೆಡುಕುಗಳನ್ನು ಕೊನೆಗೊಳಿಸುತ್ತಾ ಇರುವ ಇಂತಹ ಸಂತ ಪರಂಪರೆ ಇರುದರಿಂದಲೇ ನಾವು ಯುಗ ಯುಗಗಳಿಂದ ನಮ್ಮ ಸಂಸ್ಕೃತಿಯೆಂಬ ಆಸ್ತಿಯನ್ನುಉಳಿಸಿಕೊಂಡು ಬರಲು ಸಾಧ್ಯವಾಗುತ್ತಿದೆ. ಇಂತಹ ಸಂತ ಪರಂಪರೆ ಇರುವುದರಿಂದಲೇ ನಮ್ಮ ರಾಷ್ಟ್ರೀಯ ಏಕೀಕರಣ ಮತ್ತು ರಾಷ್ಟ್ರ ನಿರ್ಮಾಣದ ಅವಧಾರಣೆಯನ್ನು ಸರಕಾರಗಳು ಮಾಡುತ್ತಾ ಬಂದಿವೆ.
ಇಂತಹ ಸಂತರು ಯಾವುದೇ ಯುಗಕ್ಕೆ ಸೀಮಿತರಾಗಿ ಉಳಿದಿಲ್ಲ; ಅವರು ಯುಗ ಯುಗಗಳ ವರೆಗೆ ತಮ್ಮ ಪ್ರಭಾವವನ್ನು ಬೀರುತ್ತಾ ಇದ್ದಾರೆ.
ನಮ್ಮ ದೇಶದ ಸಂತರುಗಳು: ಎಲ್ಲ ಧರ್ಮಗಳನ್ನು ಮೀರಿದ ಯಾವುದಾದರೂ ಧರ್ಮವಿದ್ದರೆ ಅದು ಮಾನವ ಧರ್ಮ ಎಂಬುದರತ್ತ ಸದಾ ಪ್ರೇರಣೆ ನೀಡಿದ್ದಾರೆ.
ಈಗಲೂ ನಮ್ಮ ದೇಶದ ಮುಂದೆ ಸವಾಲುಗಳು ಎದುರು ನಿಂತಿವೆ. ಈ ಸವಾಲುಗಳನ್ನ ಎದುರಿಸಲು ಸಂತ ಸಮಾಜ ಮತ್ತು ಮಠ ಮಾನ್ಯಗಳ ದೊಡ್ಡ ಕೊಡುಗೆ ಇದೆ. ಸಂತಸಮಾಜ ಸ್ವಚ್ಛತೆಯೇ ಈಶ್ವವರ ಎಂದು ಹೇಳಿದರೆ ಅದರ ಪ್ರಭಾವ ಸರಕಾರದ ಆಂದೋಲನದ ಮೇಲೆ ದೊಡ್ಡದಾಗಿ ಆಗುತ್ತದೆ.
ಆರ್ಥಿಕ ಸ್ವಚ್ಛತೆಗೆ ಪ್ರೇರಣೆ ಕೂಡ ಇದರ ಹಾಗೆ. ಭ್ರಷ್ಟ ಆಚರಣೆ ಇಂದಿನ ಸಮಾಜದ ಒಂದು ಸವಾಲು. ಅದರ ಪರಿಹಾರೋಪಾಯವನ್ನು ಕೂಡ ಇಂದಿನ ಆಧುನಿಕ ಸಂತ ಸಮಾಜ ನೀಡಬಲ್ಲುದು.
ಪರಿಸರ ಸಂರಕ್ಷಣೆಯಲ್ಲಿ ಕೂಡ ಸಂತ ಸಮಾಜದ ದೊಡ್ಡ ಪಾತ್ರವಿದೆ. ನಮ್ಮ ಸಂಸ್ಕೃತಿಯಲ್ಲಿ ವೃಕ್ಷಗಳನ್ನು ಚೈತನ್ಯ ಪೂರ್ಣವೆಂದು ಗೌರವಿಸುತ್ತೇವೆ; ಜೀವ ಇರುವುವೆಂದು ತಿಳಿಯುತ್ತೇವೆ. ಅನಂತರ ಭಾರತದ ಸುಪುತ್ರರೇ ಆದ ಖ್ಯಾತ ವಿಜ್ಞಾನಿ ಡಾ ಜಗದೀಶ್ಚಂದ್ರ ಬೋಸ್ ಇವರು ವಿಶ್ವದ ಮುಂದೆ ಸಾಧಿಸಿಯೂ ತೋರಿಸಿದರು. ಇಲ್ಲದಿದ್ದರೆ ಇದಕ್ಕಿಂತ ಮೊದಲು ವಿಶ್ವ ಇದನ್ನು ನಂಬುತ್ತಲೇ ಇರಲಿಲ್ಲ; ನಮ್ಮನ್ನು ತಮಾಶೆ ಮಾಡಿ ನಗುತ್ತಿದ್ದರು.
ನಮಗಾದರೋ ಪ್ರಕೃತಿ ತಾಯಿಯಾಗಿದೆ; ಪ್ರಯೋಜನ ಪಡೆಯುವುದಕ್ಕಾಗಿ ಅಲ್ಲ; ಸೇವೆ ಮಾಡಲು. ನಮ್ಮಲ್ಲಿ ವೃಕ್ಷಗಳಿಗಾಗಿ ತಮ್ಮ ಪ್ರಾಣವನ್ನೇ ಕೊಡುವ ಪರಂಪರೆ ಇದೆ. ಕೊಂಬೆ ಕಡಿಯುವಾಗ ಕೂಡ ಮೊದಲು ಪ್ರಾರ್ಥನೆ ಮಾಡಲಾಗುತ್ತದೆ. ಜೀವ ಜಂತು ಮತ್ತು ವನಸ್ಪತಿಗಳ ಬಗ್ಗೆ ಸಂವೇದನೆಯನ್ನು ನಮಗೆ ಬಾಲ್ಯದಿಂದ ಕಲಿಸಲಾಗುತ್ತದೆ.
ನಾವು ಪ್ರತಿ ದಿನ ಆರತಿಯ ನಂತರ ಶಾಂತಿ ಮಂತ್ರದಲ್ಲಿ “ वनस्पतय: शांति आप: शांति” ಎಂದು ಹೇಳುತ್ತೇವೆ. [ಹೀಗಿದೆ ನಮ್ಮ ಸಸ್ಯ ಪ್ರೇಮ]. ಆದರೆ ಇದೂ ಸತ್ಯ: ಕಾಲಕ್ರಮದಲ್ಲಿ ಈ ಪರಂಪರೆಗೆ ಲೋಪ ಬಂದಿದೆ. [ದೇಶದ ಸ್ಸಯ ಸಂಪತ್ತನ್ನು ಸ್ವಾರ್ಥಕ್ಕಾಗಿ ನಾಶ ಮಾಡುವುದು ಕಂಡು ಬರುತ್ತಿದೆ]. ಇಂದು ಸಂತ ಪರಂಪರೆ ಈ ಬಗ್ಗೆ ಕೂಡ ಪ್ರಯತ್ನಗಳನ್ನು ತೀವ್ರಗೊಳಿಸಬೇಕಾಗಿದೆ. ನಮ್ಮ ಗ್ರಂಥಗಳಲ್ಲಿರುವಂಥ, ಪರಂಪರೆಯ ಭಾಗವಾಗಿ ನಮಗೆ ವರ್ಗವಾಗಿ ಬಂದಿರುವಂಥ ಇಂತಹವುಗಳನ್ನು ಆಚರಣೆಯಲ್ಲಿ ತರುವುದರಿಂದ ಕೂಡ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ.
ಇಂದೂ ಕೂಡ ನೋಡಿ, ಇಡೀ ವಿಶ್ವದ ದೇಶಗಳಲ್ಲಿ ಬದುಕಿನ ಹಾದಿಯಲ್ಲಿ ಏನಾದರೂ ಸಂಕಷ್ಟಗಳು ಬಂದವು ಎಂದಾದರೆ ಪ್ರಪಂಚದ ದೃಷ್ಟಿ ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಕಡೆಗೆ ಬಂದು ನಿಂತು ಬಿಡುತ್ತದೆ.
ಒಂದು ರೀತಿಯಲ್ಲಿ ವಿಶ್ವದ ಎಲ್ಲ ಸಮಸ್ಯೆಗಳಿಗೆ ಉತ್ತರ ಭಾರತೀಯ ಸಂಸ್ಕೃತಿಯಲ್ಲಿ ಸಿಗುತ್ತದೆ. ಒಬ್ಬ ಭಗವಂತನನ್ನು ಅನೇಕ ರೂಪಗಳಲ್ಲಿತಿಳಿದು ಪೂಜೆ ಮಾಡಬಹುದು ಎಂಬುದನ್ನು ಭಾರತದಲ್ಲಿ ಸಹಜವಾಗಿ ಸ್ವೀಕರಿಸುತ್ತೇವೆ. ಋಗ್ವೇದದಲ್ಲಿ एकम् सत् विप्राः बहुधा वदन्ति – ಒಬ್ಬನೇ ಪರಮಾತ್ಮನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ಎಂದು ಹೇಳಲಾಗಿದೆ. ವೈವಿಧ್ಯವನ್ನು ನಾವು ಸ್ವೀಕರಿಸುತ್ತೇವೆ ಮಾತ್ರವಲ್ಲ; ಅದನ್ನು ಒಂದು ಉತ್ಸವವಾಗಿ ಆಚರಿಸುತ್ತೇವೆ.
ನಾವು ವಸುಧೈವ ಕುಟುಂಬಕಂ – ಇಡೀ ಭೂಮಿ ಒಂದು ಕುಟುಂಬ ಎಂದು ಭಾವಿಸುವ ಜನ. ನಾವು ಸಹನಾವವತು, ಸಹನೌಭುನಕ್ತು… ‘ಎಲ್ಲರ ಪೋಷಣೆಯಾಗಲಿ, ಎಲ್ಲರಿಗೂ ಶಕ್ತಿ ತುಂಬಲಿ, ಯಾರೂ ಯಾರೊಂದಿಗೂ ದ್ವೇಷ ಮಾಡುವುದು ಬೇಡ’ ಎಂದು ಹೇಳುತ್ತೇವೆ. ಕಟ್ಟರತೆ [ಮತಾಂಧತೆ]ಗೆ ಇದೇ ಸಮಾಧಾನ. ಭಯೋತ್ಪಾದನೆಯ ಮೂಲ ಇರುವುದು ಈ ಕಟ್ಟರತೆಯಲ್ಲಿಯೇ. ಅಂದರೆ ನನ್ನದೇ ಮಾರ್ಗ ಸರಿ ಎಂಬ ಮನೋಭಾವ. ಏಕೆಂದರೆ ಭಾರತದಲ್ಲಿ ಸಿದ್ಧಾಂತಗಳ [ಮೇಲಾಟಕ್ಕೆ ಅವಕಾಶವಿಲ್ಲ]. ಅನೇಕ ಪೂಜಾ ಪದ್ಧತಿಗಳ ಜನರು ಯುಗಗಳಿಂದ ಒಟ್ಟಿಗೆ ಇರುತ್ತಾ ಬಂದಿದ್ದಾರೆ. ನಾವು ‘ಸರ್ವ ಪಂಥ ಸಮಭಾವ’ವನ್ನು ಗೌರವಿಸುವ ಜನರು.
ಇಂದಿನ ಈ ಯುಗದಲ್ಲಿ ನಾವೆಲ್ಲರೂ ಕೂಡಿಕೊಂಡು ಬಾಳುತ್ತಿದ್ದೇವೆ, ದೇಶದ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದೇವೆ, ಸಮಾಜದಲ್ಲಿ ವ್ಯಾಪಿಸಿರುವ ಕೆಡುಕುಗಳನ್ನು ಹೋಗಲಾಡಿಸಲು ಪ್ರಯತ್ನ ಶೀಲರಾಗಿದ್ದೇವೆ ಎಂದಾದರೆ, ಇದಕ್ಕೆ ಬಹುದೊಡ್ಡ ಕಾರಣ ಸಾಧು ಸಂತರು ನೀಡಿದ ಜ್ಞಾನ ಕರ್ಮ ಭಕ್ತಿಗಳ ಪ್ರೇರಣೆ ಎಂಬುದು ನನ್ನ ತಿಳಿವಳಿಕೆ.
ಇವತ್ತಿನ ಕಾಲದ ಅಗತ್ಯವೆಂದರೆ ಪೂಜೆಯ ದೇವನ ಜೊತೆ ಜೊತೆಗೇ ರಾಷ್ಟ್ರ ದೇವನ ಕುರಿತು ಮಾತನಾಡ ಬೇಕಿರುವುದು; ಇಷ್ಟ ದೈವದ ಜೊತೆಗೆ ಭಾರತ ಮಾತೆಯ ಪೂಜೆ ಕೂಡ ಆಗಬೇಕಾಗಿರುವುದು. ಶಿಕ್ಷಣದ ಕೊರತೆ, ಅಜ್ಞಾನ, ಕುಪೋಷಣೆ, ಕಪ್ಪು ಹಣ,ಭ್ರಷ್ಟಾಚಾರಗಳಂತಹ ಕೆಡುಕುಗಳು ಭಾರತ ಮಾತೆಯನ್ನು ಹಿಡಿದಿಟ್ಟುಕೊಂಡು ಬಿಟ್ಟಿವೆ. ಅವುಗಳಿಂದ ಭಾರತ ಮಾತೆಯನ್ನು ಮುಕ್ತಗೊಳಿಸುವುದಕ್ಕಾಗಿ ಸಂತ ಸಮಾಜ ದೇಶಕ್ಕೆ ದಾರಿ ತೋರಿಸುತ್ತಿರಬೇಕು.
ತಾವುಗಳು ಅಧ್ಯಾತ್ಮದ ಮೂಲಕ ನಮ್ಮ ದೇಶದ ಪ್ರಾಣ ಶಕ್ತಿಯ ಅನುಭವವನ್ನು ಜನ ಜನರಿಗೆ ತಲುಪಿಸುತ್ತಿರುತ್ತೀರಿ ಎಂಬುದು ನನ್ನ ಬಯಕೆ. ವಯಮ್ ಅಮೃತಸ್ಯ ಪುತ್ರಾಹಾ, ಎಂಬುದರ ಅನುಭವದಿಂದ ಜನ ಶಕ್ತಿ ಮತ್ತಷ್ಟು ಶಕ್ತಿಯುತವಾಗುತ್ತದೆ. ಈ ಮಾತುಗಳ ಮೂಲಕ ನಾನು ತಮಗೆಲ್ಲ ಕೃತಜ್ಞತೆಯನ್ನು ಅರ್ಪಿಸುತ್ತೇನೆ.
ತಮಗೆಲ್ಲರಿಗೂ ತುಂಬು ವಂದನೆಗಳು.
1968 से लेकर चार दशक से भी ज्यादा तक उडुपी म्यूनिसिपल कॉरपोरेशन की जिम्मेदारी भारतीय जनता पार्टी और भारतीय जनसंघ ने संभाली है: PM Modi
— PMO India (@PMOIndia) February 5, 2017
1968 में उडुपी पहली ऐसी म्यूनिसिपल कॉरपोरेशन बनी थी जिसने manual scavenging पर रोक लगाई थी: PM Modi
— PMO India (@PMOIndia) February 5, 2017
ये हमारे समाज की विशेषता है कि जब भी बुराइयां आई हैं, तो सुधार का काम समाज के बीच में ही किसी ने शुरू किया है: PMhttps://t.co/4QUomqKFZv
— PMO India (@PMOIndia) February 5, 2017
ये भारतीय समाज की अद्भुत क्षमता है कि समय-समय पर हमें ऐसे महापुरुष मिले, जिन्होंने इन बुराइयों को पहचाना, उनसे मुक्ति का रास्ता दिखाया: PM
— PMO India (@PMOIndia) February 5, 2017
हमारा इतिहास गवाह है कि हमारे संतों ने जो गलत रीतियां चली आ रही थीं, उन्हें सुधारने के लिए जनआंदोलन शुरू किया, इस जनआंदोलन को भक्ति से जोड़ा
— PMO India (@PMOIndia) February 5, 2017
आदि शंकराचार्य ने देश के चारों कोनों में जाकर लोगों को सांसारिकता से ऊपर उठकर ईश्वर में लीन होने का रास्ता दिखाया: PM @narendramodi
— PMO India (@PMOIndia) February 5, 2017
संत कबीर ने भी जाति प्रथा और कर्मकांडों से समाज को मुक्ति दिलाने के लिए अथक प्रयास किया: PM Modi
— PMO India (@PMOIndia) February 5, 2017
भक्ति आंदोलन के दौरान धर्म, दर्शन और साहित्य की एक ऐसी त्रिवेणी स्थापित हुई, जो आज भी हम सभी को प्रेरणा देती है: PM Modi
— PMO India (@PMOIndia) February 5, 2017
गुजरात के महान संत नरसिंह मेहता कहते थे: वाच-काछ-मन निश्चल राखे, परधन नव झाले हाथ रे: PM Modi
— PMO India (@PMOIndia) February 5, 2017
श्री मध्वाचार्य जी ने हमेशा जोर दिया कि कोई भी काम छोटा या बड़ा नहीं होता, पूरी निष्ठा से किया गया कार्य ईश्वर की पूजा करने की तरह होता है
— PMO India (@PMOIndia) February 5, 2017
वो कहते थे कि जैसे हम सरकार को टैक्स देते हैं, वैसे ही जब हम मानवता की सेवा करते हैं, तो वो ईश्वर को टैक्स देने की तरह होता है: PM Modi
— PMO India (@PMOIndia) February 5, 2017
हिंदुस्तान के पास ऐसे महान संत-मुनि रहे हैं रहे हैं जिन्होंने अपनी तपस्या, ज्ञान का उपयोग राष्ट्र का निर्माण करने के लिए किया: PM Modi
— PMO India (@PMOIndia) February 5, 2017
सामाजिक बुराइयों को खत्म करते रहने की महान संत परंपरा के कारण ही हम सदियों से अपनी सांस्कृतिक विरासत को सहेज पाए हैं: PM @narendramodi
— PMO India (@PMOIndia) February 5, 2017
विश्व के देशों में जीवन जीने के मार्ग में जब भी किसी प्रकार की बाधा आती है तब दुनिया की निगाहें भारत की संस्कृति टिक जाती हैं: PM Modi
— PMO India (@PMOIndia) February 5, 2017
विविधता को हम केवल स्वीकार नहीं करते उसका उत्सव मनाते है: PM @narendramodi
— PMO India (@PMOIndia) February 5, 2017
अशिक्षा, अज्ञानता, कुपोषण, कालाधन, भष्टाचार जैसी बुराइयों ने भारतमाता को जकड़ रखा है, उससे मुक्त कराने के लिए संत समाज रास्ता दिखाए: PM Modi
— PMO India (@PMOIndia) February 5, 2017