ನಮಸ್ಕಾರ ಜಿ !
ಛತ್ತೀಸ್ ಗಢದ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯ್ ಜಿ, ರಾಜ್ಯ ಸರ್ಕಾರದ ಎಲ್ಲಾ ಸಚಿವರೇ, ಶಾಸಕರೇ ಮತ್ತು ಇಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರೇ, ಜೈ ಜೋಹರ್ ಶುಭಾಶಯಗಳು.!
ನಾನು ಮಾತೆ ದಂತೇಶ್ವರಿ, ಮಾತೆ ಬಮಲೇಶ್ವರಿ ಮತ್ತು ಮಾತೆ ಮಹಾಮಾಯೆಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ. ಛತ್ತೀಸ್ಗಢದ ತಾಯಂದಿರು ಮತ್ತು ಸಹೋದರಿಯರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಎರಡು ವಾರಗಳ ಹಿಂದೆ ಛತ್ತೀಸ್ಗಢದಲ್ಲಿ 35,000 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದ್ದೆನು. ಇಂದು ಮಹಿಳೆಯರ ಸಬಲೀಕರಣಕ್ಕಾಗಿ ಮಹತಾರಿ ವಂದನಾ ಯೋಜನೆ ಪ್ರಾರಂಭಿಸುವ ಸವಾಲು ನನಗೆ ಸಿಕ್ಕಿದೆ. ಮಹತಾರಿ ವಂದನಾ ಯೋಜನೆಡಿ, ಛತ್ತೀಸ್ಗಢದ 70 ಲಕ್ಷಕ್ಕೂ ಅಧಿಕ ತಾಯಂದಿರು ಮತ್ತು ಸಹೋದರಿಯರಿಗೆ ಪ್ರತಿ ತಿಂಗಳು 1,000 ರೂಪಾಯಿಗಳನ್ನು ಒದಗಿಸುವ ಪ್ರತಿಜ್ಞೆ ಸೂಚಿಸಲಾಗಿದೆ. ಈ ಭರವಸೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. ಇಂದು ಮಹತಾರಿ ವಂದನಾ ಯೋಜನೆಯಡಿ ಮೊದಲ ಕಂತಿನ 655 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಾನು ಪರದೆಯ ಮೇಲೆ ಹಲವು ಸಹೋದರಿಯರನ್ನು ನೋಡುತ್ತಿದ್ದೇನೆ! ನಮ್ಮೆಲ್ಲ ಸಹೋದರಿಯರೇ ವಿವಿಧ ಸ್ಥಳಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೆರೆದು, ನಿಮ್ಮ ಆಶೀರ್ವಾದವನ್ನು ಧಾರೆಯೆರೆದಿರುವುದು ನಿಜಕ್ಕೂ ನಮ್ಮ ಅದೃಷ್ಟ. ಇಂದಿನ ಕಾರ್ಯಕ್ರಮದ ಪ್ರಾಮುಖ್ಯತೆಯು ಗಮನಾರ್ಹವಾದದು ಮತ್ತು ಆದರ್ಶಪೂರ್ಣವಾದುದು. ಛತ್ತೀಸ್ಗಢದಲ್ಲಿ ನಾನು ನಿಮ್ಮ ಮಧ್ಯೆ ಇರಬೇಕಿತ್ತು. ಆದರೆ, ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ನಾನು ಸದ್ಯ ಉತ್ತರ ಪ್ರದೇಶದಲ್ಲಿದ್ದೇನೆ. ತಾಯಂದಿರೇ ಮತ್ತು ಸಹೋದರಿಯರೇ, ನಾನು ಈ ವೇಳೆ ಕಾಶಿಯಿಂದ ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಕಳೆದ ರಾತ್ರಿ ನಾನು ಬಾಬಾ ವಿಶ್ವನಾಥರ ಪಾದಕ್ಕೆ ಶರಣಾಗಿ, ನನ್ನ ದೇಶವಾಸಿಗಳೆಲ್ಲರ ಒಳಿತಿಗಾಗಿ ಪ್ರಾರ್ಥಿಸಿ, ನಮಸ್ಕರಿಸಿದ್ದೇನೆ. ಇಂದು ಬಾಬಾ ವಿಶ್ವನಾಥರ ತಪೋ ಭೂಮಿಯಿಂದ, ಪವಿತ್ರ ಕಾಶಿ ನಗರದಿಂದ ನಿಮ್ಮೆಲ್ಲರೊಂದಿಗೆ ಮಾತನಾಡಲು ನನಗೆ ಅವಕಾಶ ದೊರೆತಿದೆ. ಆದ್ದರಿಂದ, ನಾನು ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಆದರೆ ಬಾಬಾ ವಿಶ್ವನಾಥರ ಎಲ್ಲಾ ಆಶೀರ್ವಾದಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ಎರಡು ದಿನಗಳ ಹಿಂದೆ ಶಿವರಾತ್ರಿ ಇತ್ತು, ಶಿವರಾತ್ರಿಯ ಕಾರಣ ಮಾರ್ಚ್ 8ರ ಮಹಿಳಾ ದಿನಾಚರಣೆಯಂದು ಈ ಕಾರ್ಯಕ್ರಮ ಆಯೋಜಿಸುವುದು ಸಾಧ್ಯವಾಗಿರಲಿಲ್ಲ. ಆದ್ದರಿಂದ, ಒಂದು ರೀತಿಯಲ್ಲಿ, ಮಾರ್ಚ್ 8 ರಂದು, ಮಹಿಳಾ ದಿನವು ಶಿವರಾತ್ರಿಯೊಂದಿಗೆ ಸರಿಯಾಗಿ ಹೊಂದಿಕೆಯಾಗಿದೆ. ಮತ್ತು ಇಂದು ನೀವು 1000 ರೂಪಾಯಿಗಳ ಆಶೀರ್ವಾದವನ್ನು ಪಡೆಯುತ್ತಿದ್ದೀರಿ ಮತ್ತು ಅದೇ ಸಮಯದಲ್ಲಿ ನೀವು ಹೆಚ್ಚು ಶಕ್ತಿಯುತವಾದದ್ದನ್ನು ಪಡೆಯುತ್ತಿದ್ದೀರಿ ಅಂದರೆ ಬಾಬಾ ನಗರದಿಂದ ಬಾಬಾ ಭೋಲೆಯವರ ಆಶೀರ್ವಾದವನ್ನು ಪಡೆಯುತ್ತೀರಿ ಎಂದರ್ಥ. ಈ ಹಣವನ್ನು ಯಾವುದೇ ಅನಾನುಕೂಲತೆ ಇಲ್ಲದೆ ಪ್ರತಿ ತಿಂಗಳು ನಿಮ್ಮ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ನಾನು ಪ್ರತಿಯೊಬ್ಬ ಮಹತಾರಿಗೆ (ತಾಯಿ) ಭರವಸೆ ನೀಡುತ್ತೇನೆ. ನಾನು ಛತ್ತೀಸ್ಗಢದ ಬಿಜೆಪಿ ಸರ್ಕಾರವನ್ನು ನಂಬುತ್ತೇನೆ, ಆದ್ದರಿಂದ ನಾನು ಈ ಭರವಸೆ ನೀಡುತ್ತೇನೆ.
ತಾಯಂದಿರೇ ಮತ್ತು ಸಹೋದರಿಯರೇ,
ನಮ್ಮ ತಾಯಂದಿರುವ ಮತ್ತು ಸಹೋದರಿಯರು ಸಬಲೀಕರಣಗೊಂಡರೆ ಇಡೀ ಕುಟುಂಬಕ್ಕೆ ಶಕ್ತಿ ಬರಲಿದೆ. ಆದ್ದರಿಂದ ನಮ್ಮ ಡಬ್ಬಲ್ ಎಂಜಿನ್ ಸರ್ಕಾರದ ಮೊಲದ ಆದ್ಯತೆ ನಮ್ಮ ತಾಯಂದಿರು ಮತ್ತು ಸಹೋದರಿಯರ ಕಲ್ಯಾಣವಾಗಿದೆ. ಕುಟುಂಬಗಳು ಇಂದು ಪಕ್ಕಾ ಮನೆಗಳನ್ನು ಪಡೆಯುತ್ತಿವೆ – ಮತ್ತು ಅವುಗಳನ್ನು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗಿದೆ! ಕೈಗೆಟುಕುವ ಬೆಲೆಯಲ್ಲಿ ಉಜ್ವಲಾ ಅಡುಗೆ ಸಿಲಿಂಡರ್ಗಳು ಲಭ್ಯವಿವೆ – ಅವೂ ಸಹ ಮಹಿಳೆಯರ ಹೆಸರಿನಲ್ಲಿವೆ ! ಶೇ.50ಕ್ಕೂ ಅಧಿಕ ಜನ ಧನ್ ಖಾತೆಗಳು – ನಮ್ಮ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿವೆ. ವಿತರಿಸಲಾಗುತ್ತಿರುವ ಮುದ್ರಾ ಸಾಲಗಳಲ್ಲಿ, ಶೇಕಡ 65 ಕ್ಕಿಂತಲೂ ಅಧಿಕ ನಮ್ಮ ಮಹಿಳೆಯರು – ನಮ್ಮ ಸಹೋದರಿಯರು, ತಾಯಂದಿರು ಮತ್ತು ವಿಶೇಷವಾಗಿ ಚಿಕ್ಕ ಹೆಣ್ಣುಮಕ್ಕಳು – ಅವರು ನಿರ್ಣಾಯಕ ಹೆಜ್ಜೆಗಳನ್ನು ಇಡುತ್ತಿದ್ದಾರೆ ಮತ್ತು ಈ ಸಾಲಗಳೊಂದಿಗೆ ತಮ್ಮ ಉದ್ಯಮಗಳನ್ನು ಆರಂಭಿಸಿದ್ದಾರೆ ! ಕಳೆದ ಒಂದು ದಶಕದಲ್ಲಿ, ನಮ್ಮ ಸರ್ಕಾರವು 10 ಕೋಟಿಗೂ ಅಧಿಕ ಸ್ವಸಹಾಯ ಗುಂಪುಗಳ ಮಹಿಳೆಯರ ಜೀವನವನ್ನು ಪರಿವರ್ತಿಸಿದೆ. ನಮ್ಮ ಸರ್ಕಾರದ ಉಪಕ್ರಮಗಳಿಗೆ ಧನ್ಯವಾದಗಳು, ರಾಷ್ಟ್ರದಾದ್ಯಂತ 1 ಕೋಟಿಗೂ ಅಧಿಕ “ಲಖಪತಿ ದೀದಿಗಳು” ಹೊರಹೊಮ್ಮಿದ್ದಾರೆ, ಪ್ರತಿ ಹಳ್ಳಿಯಲ್ಲೂ ಗಮನಾರ್ಹ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತಿದ್ದಾರೆ. ಈ ಯಶಸ್ಸಿನಿಂದ ಉತ್ತೇಜಿತರಾಗಿ, ನಾವು ದೇಶದ 3 ಕೋಟಿ ಮಹಿಳೆಯರನ್ನು “ಲಖಪತಿ ದೀದಿಗಳಾಗಲು” ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದೇವೆ. ನಮೋ ಡ್ರೋನ್ ದೀದಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ನಾಳೆ, ನಾನು ನಮೋ ಡ್ರೋನ್ ದೀದಿಯ ಪ್ರಮುಖ ಕಾರ್ಯಕ್ರಮ ಆಯೋಜಿಸುತ್ತಿದ್ದೇನೆ. ನಮೋ ಡ್ರೋನ್ ದೀದಿ ಕೈಗೊಳ್ಳುತ್ತಿರುವ ಗಮನಾರ್ಹ ಕಾರ್ಯವನ್ನು ವೀಕ್ಷಿಸಲು ಬೆಳಿಗ್ಗೆ 10-11 ಗಂಟೆಗೆ ನಿಮ್ಮ ಟಿವಿಗಳಿಗೆ ಟ್ಯೂನ್ ಮಾಡಿ ಎಂದು ನಾನು ನಿಮನ್ನು ಆಗ್ರಹಿಸುತ್ತೇನೆ. ನೀವು ಅದನ್ನು ಪ್ರತ್ಯಕ್ಷವಾಗಿ ನೋಡುತ್ತೀರಿ ಮತ್ತು ಭವಿಷ್ಯದಲ್ಲಿ ಉತ್ಸಾಹದಿಂದ ಭಾಗವಹಿಸಲು ಉತ್ತೇಜನ ನೀಡುತ್ತೀರಿ. ಈ ಯೋಜನೆಯಡಿಯಲ್ಲಿ, ಬಿಜೆಪಿ ಸರ್ಕಾರವು ಮಹಿಳೆಯರಿಗೆ ಡ್ರೋನ್ಗಳನ್ನು ಒದಗಿಸುತ್ತದೆ ಮತ್ತು ಡ್ರೋನ್ ಪೈಲಟ್ಗಳಾಗಲು ಸಹಾಯ ಮಾಡಲು ಅಗತ್ಯ ತರಬೇತಿ ನೀಡುತ್ತದೆ. ”ನನಗೆ ಬೈಸಿಕಲ್ ಓಡಿಸಲು ಸಹ ತಿಳಿದಿರಲಿಲ್ಲ, ಮತ್ತು ಇಂದು ನಾನು ಡ್ರೋನ್ ದೀದಿ ಪೈಲಟ್ ಆಗಿದ್ದೇನೆ’’ ಎಂದು ಹೇಳಿದ ಮಹಿಳೆಯೊಂದಿಗಿನ ಸಂದರ್ಶನ ನಾನು ನೆನಪಿಸಿಕೊಳ್ಳುತ್ತೇನೆ. ಈ ಉಪಕ್ರಮವು ಕೃಷಿಯನ್ನು ಆಧುನೀಕರಿಸುತ್ತದೆ ಮತ್ತು ಮಹಿಳೆಯರಿಗೆ ಹೆಚ್ಚುವರಿ ಆದಾಯ ನೀಡುತ್ತದೆ. ನಾಳೆ ದೆಹಲಿಯಲ್ಲಿ ನಾನು ಈ ಯೋಜನೆಗೆ ಚಾಲನೆ ನೀಡುತ್ತಿದ್ದೇನೆ ಮತ್ತು ಮತ್ತೊಮ್ಮೆ ನನ್ನೊಂದಿಗೆ ಸೇರಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ.
ತಾಯಂದಿರೇ ಮತ್ತು ಸಹೋದರಿಯರೇ,
ಕುಟುಂಬದ ಸದಸ್ಯರು ಆರೋಗ್ಯವಾಗಿದ್ದರೆ ಕುಟುಂಬವು ಸಮೃದ್ಧವಾಗುತ್ತದೆ ಮತ್ತು ಕುಟುಂಬದ ಸ್ವಾಸ್ಥ್ಯವು ಅದರ ಮಹಿಳೆಯರ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ಹಿಂದೆ, ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವು ಆತಂಕ ಮತ್ತು ಕಳವಳಕಾರಿಯಾಗಿತ್ತು. ಅದನ್ನು ನಿವಾರಿಸಲು ಉಚಿತ ಲಸಿಕೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಹೆಚ್ಚುವರಿಯಾಗಿ ಗರ್ಭಿಣಿಯರಿಗೆ 5 ಸಾವಿರ ರೂ. ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈಗ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯುವ ಅವಕಾಶಪಡೆದಿದ್ದಾರೆ. ಹಿಂದೆ, ಮನೆಗಳಲ್ಲಿ ಶೌಚಾಲಯ ಇಲ್ಲದಿರುವುದು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಬಹಳ ತೊಂದರೆ ಮತ್ತು ಅವಮಾನವನ್ನು ಉಂಟುಮಾಡಿತ್ತು. ಇಂದು, ಪ್ರತಿ ಮನೆಯಲ್ಲೂ ಮಹಿಳೆಯರಿಗೆ ‘ಇಜ್ಜತ್ಘರ್’ ಅಥವಾ ಶೌಚಾಲಯವಿದೆ, ಇದು ಅವರ ಕಷ್ಟಗಳನ್ನು ಗಮನಾರ್ಹವಾಗಿ ತಗ್ಗಿಸಿದೆದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿದೆ.
ತಾಯಂದಿರೇ ಮತ್ತು ಸಹೋದರಿಯರೇ,
ಹಲವು ಪಕ್ಷಗಳು ಚುನಾವಣೆಗೆ ಮುನ್ನ ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತವೆ, ಆಕಾಶದಿಂದ ನಕ್ಷತ್ರಗಳನ್ನು ತಂದು ನಿಮ್ಮ ಪಾದದ ಬಳಿ ಇಡುತ್ತೇವೆ ಎಂದು ಹೇಳಿಕೊಳ್ಳುತ್ತವೆ. ಆದರೆ, ಬಿಜೆಪಿಯಂತಹ ಸ್ಪಷ್ಟ ಉದ್ದೇಶ ಹೊಂದಿರುವ ಪಕ್ಷ ಮಾತ್ರ ತನ್ನ ಭರವಸೆಗಳನ್ನು ಈಡೇರಿಸುತ್ತದೆ. ಆದ್ದರಿಂದಲೇ ಬಿಜೆಪಿ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಮಹತಾರಿ ವಂದನಾ ಯೋಜನೆಯ ಭರವಸೆ ಈಡೇರಿದೆ. ಈ ಸಾಧನೆಗಾಗಿ ನಾನು ನಮ್ಮ ಮುಖ್ಯಮಂತ್ರಿ ವಿಷ್ಣು ದೇವ್ ಜಿ, ಅವರ ಇಡೀ ತಂಡ ಮತ್ತು ಛತ್ತೀಸ್ಗಢ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದಕ್ಕಾಗಿಯೇ ಜನರು ಹೇಳುತ್ತಾರೆ – “ಮೋದಿಯವರ ಗ್ಯಾರಂಟಿ ಎಂದರೆ ಅದು ಈಡೇರುವ ಪಕ್ಕಾ ಗ್ಯಾಂರಟಿ’’ ಎಂದು. ಚುನಾವಣಾ ಸಂದರ್ಭದಲ್ಲಿ ಛತ್ತೀಸ್ಗಢದ ಅಭಿವೃದ್ಧಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಬಿಜೆಪಿ ಸರ್ಕಾರ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಛತ್ತೀಸ್ಗಢದಲ್ಲಿ 18 ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಲು ನಾನು ವಾಗ್ದಾನ ಮಾಡಿದ್ದೇನೆ ಅಥವಾ ಭರವಸೆ ನೀಡಿದ್ದೇನೆ. ಸರ್ಕಾರ ರಚನೆಯಾದ ಮರುದಿನವೇ ವಿಷ್ಣು ದೇವ್ ಸಾಯಿ ಜಿ, ಅವರ ಸಂಪುಟ ಮತ್ತು ಛತ್ತೀಸ್ಗಢ ಸರ್ಕಾರವು ಈ ಯೋಜನೆ ಆರಂಭಿಸಿತು. ಛತ್ತೀಸ್ಗಢದ ಭತ್ತದ ರೈತರಿಗೆ ಎರಡು ವರ್ಷಗಳ ಬಾಕಿ ಬೋನಸ್ ನೀಡಲಾಗುವುದು ಎಂದು ನಾನು ಭರವಸೆ ನೀಡಿದ್ದೇನೆ. ಛತ್ತೀಸ್ಗಢ ಸರ್ಕಾರವು ಅಟಲ್ ಜಿ ಅವರ ಜನ್ಮದಿನದಂದು ರೈತರ ಖಾತೆಗೆ ರೂ 3,700 ಕೋಟಿ ಬೋನಸ್ ಜಮಾ ಮಾಡಿದೆ. ನಮ್ಮ ಸರ್ಕಾರ ಇಲ್ಲಿ ಪ್ರತಿ ಕ್ವಿಂಟಲ್ಗೆ 3100 ರೂ.ಗೆ ಭತ್ತ ಖರೀದಿಸಲಿದೆ ಎಂದು ಭರವಸೆ ನೀಡಿದ್ದೆ. ನಮ್ಮ ಸರ್ಕಾರವು ಈ ಭರವಸೆಯನ್ನು ಉಳಿಸಿಕೊಂಡಿದೆ ಮತ್ತು 145 ಲಕ್ಷ ಟನ್ ಭತ್ತವನ್ನು ಖರೀದಿಸುವ ಮೂಲಕ ಹೊಸ ದಾಖಲೆಯನ್ನು ಮಾಡಿರುವುದು ನನಗೆ ಆನಂದ ತಂದಿದೆ. ಹೆಚ್ಚುವರಿಯಾಗಿ, ಕೃಷಿಕ್ ಉನ್ನತಿ ಯೋಜನೆಯನ್ನು ಆರಂಭಿಸಲಾಗಿದೆ ಮತ್ತು ಈ ವರ್ಷ ಖರೀದಿಸಿದ ಭತ್ತದ ವ್ಯತ್ಯಾಸದ ಮೊತ್ತವನ್ನು ಶೀಘ್ರದಲ್ಲೇ ರೈತ ಸಹೋದರರಿಗೆ ವಿತರಿಸಲಾಗುವುದು. ಎಲ್ಲಾ ತಾಯಂದಿರು ಮತ್ತು ಸಹೋದರಿಯರ ಮಹತ್ವದ ಪಾಲ್ಗೊಳ್ಳುವಿಕೆಯೊಂದಿಗೆ ಮುಂದಿನ ಐದು ವರ್ಷಗಳಲ್ಲಿ ಈ ಕಲ್ಯಾಣ ಉಪಕ್ರಮಗಳನ್ನು ನಿರ್ಣಾಯಕವಾಗಿ ಮುನ್ನಡೆಸಲಾಗುವುದು. ಛತ್ತೀಸ್ಗಢದ ಡಬಲ್ ಇಂಜಿನ್ ಸರ್ಕಾರವು ಈ ರೀತಿಯಲ್ಲಿ ನಿಮ್ಮ ಸೇವೆಯನ್ನು ಮುಂದುವರಿಸುತ್ತದೆ ಮತ್ತು ಅದರ ಎಲ್ಲಾ ಬದ್ಧತೆಗಳನ್ನು (ಖಾತರಿಗಳನ್ನು) ಪೂರೈಸುತ್ತದೆ ಎಂಬ ವಿಶ್ವಾಸ ನನಗಿದೆ. ನನ್ನ ಮುಂದೆ ಲಕ್ಷಗಟ್ಟಲೆ ಸಹೋದರಿಯರನ್ನು ನೋಡುತ್ತೇನೆ. ಈ ದೃಶ್ಯವು ಅಭೂತಪೂರ್ವ ಮತ್ತು ಅವಿಸ್ಮರಣೀಯವಾಗಿದೆ. ಇಂದು ನಾನು ನಿಮ್ಮೊಂದಿಗೆ ಇರಬೇಕೆಂದು ಬಯಸುತ್ತೇನೆ, ಆದರೆ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಬಾಬಾ ವಿಶ್ವನಾಥನ ನೆಲದಿಂದ, ಕಾಶಿಯಿಂದ ಮಾತನಾಡುವಾಗ, ನಿಮ್ಮೆಲ್ಲರಿಗೂ ಬಾಬಾರ ಆಶೀರ್ವಾದವನ್ನು ತಿಳಿಸುತ್ತೇನೆ. ತುಂಬಾ ಧನ್ಯವಾದಗಳು, ಮತ್ತು ನಾನು ನಿಮಗೆ ಶುಭ ಹಾರೈಸುತ್ತೇನೆ.
ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಮಾತನಾಡಿದರು.
***
हमारी सरकार के बीते 10 वर्ष महिलाओं के मान-सम्मान, समृद्धि और सुरक्षा को समर्पित रहे हैं। छत्तीसगढ़ में महतारी वंदन योजना कार्यक्रम में शामिल होकर सम्मानित महसूस कर रहा हूं।https://t.co/6B1eZFi6fj
— Narendra Modi (@narendramodi) March 10, 2024