Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಛತ್ತೀಸಗಢಕ್ಕೆ ಪ್ರಧಾನಿ ಭೇಟಿ, ಕಾನನ ಸಫಾರಿ ಉದ್ಘಾಟನೆ, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣ, ರಾಜ್ಯೋತ್ಸವದ ಉದ್ಘಾಟನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಛತ್ತೀಸಗಢದ ನಯ ರಾಯ್ಪರಕ್ಕೆ ಭೇಟಿ ನೀಡಿದ್ದರು. ಅವರು ನಗರದ ಕಾನನ ಸಫಾರಿ ಉದ್ಘಾಟಿಸಿ, ಕೆಲ ಕಾಲ ವೀಕ್ಷಿಸಿದರು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆಯನ್ನು ಅನಾವರಣ ಮಾಡಿದ ಪ್ರಧಾನಿ, ಸೆಂಟ್ರಲ್ ಬೌಲೆವರ್ಡ್ ಅನ್ನು ಏಕಾತ್ಮ ಪಥವಾಗಿ ಸಮರ್ಪಿಸಿದರು ಮತ್ತು ನಯ ರಾಯ್ಪರ ಬಿ.ಆರ್.ಟಿ.ಎಸ್. ಯೋಜನೆಯನ್ನು ಉದ್ಘಾಟಿಸಿದರು.

“ಹಮ್ಮಾರ್ ಛತ್ತೀಸ್ ಗಢ ಯೋಜನಾ’’ ಸ್ಪರ್ಧಿಗಳನ್ನು ಭೇಟಿ ಮಾಡಿದ ಪ್ರಧಾನಿ, ರಾಜ್ಯೋತ್ಸವವನ್ನು ಉದ್ಘಾಟಿಸಿದರು. ಓಡಿಎಫ್ ಅಭಿಯಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ ಎರಡು ಜಿಲ್ಲೆ ಹಾಗೂ 15 ಬ್ಲಾಕ್ ಗಳ ಕಾರ್ಯಕರ್ತರಿಗೆ ಪ್ರಮಾಣ ಪತ್ರ ವಿತರಿಸಿದರು. ಉಜ್ವಲ ಯೋಜನೆ ಅಡಿಯಲ್ಲಿ ಎಲ್.ಪಿ.ಜಿ. ಸಂಪರ್ಕವನ್ನು ವಿತರಿಸಿದ ಅವರು, ಸೌರ ಉಜಾಲ ಯೋಜನೆ ಉದ್ಘಾಟನೆ ಅಂಗವಾಗಿ ಆಯ್ದ ಫಲಾನುಭವಿಗಳಿಗೆ ಸೌರ ಪಂಪ್ ವಿತರಿಸಿದರು.

ಶಾಂತಿಯುತ ಮತ್ತು ಸೌಹಾರ್ದಯುತ ಮಾದರಿಯಲ್ಲಿ ಛತ್ತೀಸಗಢ ಸೇರಿದಂತೆ ಮೂರು ಹೊಸ ರಾಜ್ಯಗಳ ರಚನೆಯ ಖಾತ್ರಿಯನ್ನು ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ್ದರು ಎಂಬುದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು.

ಹೇಗೆ ಚಿಕ್ಕ ರಾಜ್ಯವೊಂದು ಅಭಿವೃದ್ಧಿಯ ಹೊಸ ಎತ್ತರಕ್ಕೆ ಏರಬಲ್ಲದು ಎಂಬುದನ್ನು ಛತ್ತೀಸಗಢ ತೋರಿದೆ ಎಂದ ಅವರು ಇದಕ್ಕಾಗಿ ಮುಖ್ಯಮಂತ್ರಿ ಡಾ. ರಮಣ ಸಿಂಗ್ ಮತ್ತು ರಾಜ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಛತ್ತೀಸಗಢದಲ್ಲಿ ಈ ಅಭಿವೃದ್ಧಿ ಉಪಕ್ರಮಗಳು ಮುಂದಿನ ಪೀಳಿಗೆಗೂ ಲಾಭವನ್ನು ತರಲಿದೆ ಎಂದು ಪ್ರಧಾನಿ ಹೇಳಿದರು. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಬಹು ದೊಡ್ಡ ಅವಕಾಶ ಇದೆ ಎಂದ ಅವರು, ಇದು ಬಡವರಲ್ಲೇ ಬಡವರಿಗೂ ಹೊಸ ಆರ್ಥಿಕ ಅವಕಾಶ ನೀಡುವುದಾಗಿದೆ ಎಂದು ತಿಳಿಸಿದರು.

ರೈತರಿಗಾಗಿ ಮೌಲ್ಯಯುತ ಉಪಕ್ರಮ ಕೈಗೊಂಡ ಛತ್ತೀಸಗಢ ರಾಜ್ಯವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

****

AKT/AK