Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚೆಸ್ ಚಾಂಪಿಯನ್ ಕೊನೇರು ಹಂಪಿ ಅವರಿಂದ ಪ್ರಧಾನಮಂತ್ರಿ ಭೇಟಿ


ಚೆಸ್ ಚಾಂಪಿಯನ್ ಕೊನೇರು ಹಂಪಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಕೊನೇರು ಹಂಪಿ ಅವರು ಭಾರತಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿರುವ ಶ್ರೀ ಮೋದಿ ಅವರು, ಹಂಪಿ ಅವರ ತೀಕ್ಷ್ಣ ಬುದ್ಧಿಮತ್ತೆ ಮತ್ತು ಅಚಲವಾದ ಬದ್ಧತೆಯು ಸ್ಪಷ್ಟವಾಗಿ ಗೋಚರಿಸಿದೆ ಎಂದು ಬಣ್ಣಿಸಿದ್ದಾರೆ. 

ಎಕ್ಸ್‌ ನಲ್ಲಿ ಕೊನೇರು ಹಂಪಿ ಅವರ ಪೋಸ್ಟ್‌ ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:

“ಕೊನೇರು ಹಂಪಿ ಮತ್ತು ಅವರ ಕುಟುಂಬವನ್ನು ಭೇಟಿಯಾಗಿರುವುದು ಸಂತಸ ತಂದಿದೆ. ಅವರು ಮಾದರಿ ಕ್ರೀಡಾಪಟು ಮತ್ತು ಮಹತ್ವಾಕಾಂಕ್ಷಿ ಆಟಗಾರರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅವರ ತೀಕ್ಷ್ಣವಾದ ಬುದ್ಧಿಶಕ್ತಿ ಮತ್ತು ಅಚಲವಾದ ಸಮರ್ಪಣೆಯು ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಭಾರತಕ್ಕೆ ಅಪಾರ ಹೆಮ್ಮೆ ತಂದಿರುವ ಜೊತೆಗೆ ಶ್ರೇಷ್ಠತೆ ಎಂದರೆ ಏನು ಎಂಬುದನ್ನು ಪುನರ್ ವ್ಯಾಖ್ಯಾನಿಸಿದ್ದಾರೆ.”

 

 

*****