Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಚೆನ್ನೈ ಕನೆಕ್ಟ್’ನಿಂದ ಭಾರತ-ಚೀನಾ ಸಂಬಂಧ ಸಹಕಾರದಲ್ಲಿ ಹೊಸ ಶೆಕೆ ಆರಂಭ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿಕೆ


ಭಾರತದಲ್ಲಿನ ಭಾರತ-ಚೀನಾ ಸಂಬಂಧಗಳಿಗೆ ವುಹಾನ್ ಶೃಂಗಸಭೆಯಿಂದ ಹೆಚ್ಚಿದ ಸ್ಥಿರತೆ ಮತ್ತು ಹೊಸ ವೇಗ: ಚೀನಾದ ಎರಡನೇ ಅನೌಪಚಾರಿಕ ಶೃಂಗಸಭೆ ಮಾಮಲ್ಲಪುರಂನಲ್ಲಿ ಮುಕ್ತಾಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮಿಳುನಾಡಿನ ಚೆನ್ನೈ ಸಮೀಪದ ಮಾಮಲ್ಲಪುರಂನಲ್ಲಿ ಆರಂಭವಾದ ಎರಡನೇ ಅನೌಪಚಾರಿಕ ಶೃಂಗಸಭೆಯನ್ನು ಭಾರತ ಮತ್ತು ಚೀನಾ ನಡುವೆ ‘ಸಹಕಾರದ ಹೊಸ ಶೆಕೆ’ ಆರಂಭ ಎಂದು ಬಣ್ಣಿಸಿದ್ದಾರೆ.

ಪ್ರಧಾನಮಂತ್ರಿ ಅವರು ಮಾಮಲ್ಲಪುರಂನಲ್ಲಿ ನಡೆಯುತ್ತಿರುವ ಅನೌಪಚಾರಿಕ ಶೃಂಗಸಭೆಯ ಎರಡನೇ ದಿನವಾದ ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಿಯೋಗ ಮಟ್ಟದ ಮಾತುಕತೆ ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷ ವೂಹಾನ್ ನಲ್ಲಿ ನಡೆದ ಉಭಯ ದೇಶಗಳ ಮೊದಲ ಅನೌಪಚಾರಿಕ ಶೃಂಗಸಭೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಅದು ‘ನಮ್ಮ ಸಂಬಂಧಗಳಿಗೆ ಸ್ಥಿರತೆ ಹೆಚ್ಚಿಸಿದೆ ಮತ್ತು ಹೊಸ ವೇಗ ತಂದಿದೆ’ ಎಂದರು.

ಅವರು ‘ಉಭಯ ದೇಶಗಳ ನಡುವೆ ಕಾರ್ಯತಂತ್ರ ಸಂವಹನ ಹೆಚ್ಚಳವಾಗಿದೆ’ ಎಂದು ಹೇಳಿದರು.

ಪ್ರಧಾನಮಂತ್ರಿ ಅವರು, “ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಾಜ್ಯಗಳನ್ನಾಗಲು ಬಿಡದೆ, ಅತ್ಯಂತ ವಿವೇಕದಿಂದ ನಿರ್ವಹಿಸಲು ನಿರ್ಧರಿಸಿದ್ದೇವೆ, ಇಬ್ಬರೂ ಪರಸ್ಪರರ ಕಾಳಜಿಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧಗಳು ಜಾಗತಿಕ ಶಾಂತಿ ಮತ್ತು ಸ್ಥಿರತೆ ನಿಟ್ಟಿನಲ್ಲಿ ಮುನ್ನಡೆಯಲಿವೆ ಎಂದು ಹೇಳಿದರು.

ಮಾಮಲ್ಲಪುರಂನಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗಸಭೆಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿ, “ಚೀನಾ ಶೃಂಗಸಭೆಯಲ್ಲಿ ನಾವು ಈವರೆಗೆ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಶ್ರೇಷ್ಠ ವಿನಿಮಯ ಮಾಡಿಕೊಂಡಿದ್ದೇವೆ. ವೂಹಾನ್ ಶೃಂಗಸಭೆ ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವೇಗ ಕೊಟ್ಟಿದೆ. ಇಂದು ನಮ್ಮ ಚೆನ್ನೈ ಕನೆಕ್ಟ್ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಸಹಕಾರದ ಹೊಸ ಶೆಕೆಯನ್ನು ಆರಂಭಿಸಿದೆ” ಎಂದರು.

“ನಮ್ಮ ಎರಡನೇ ಅನೌಪಚಾರಿಕ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿದ ಅಧ್ಯಕ್ಷ ಕ್ಸಿ ಜಿನ್ಪಿಂ ಗ್ ಅವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ”. ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಿಗೆ ಚೈನಾ ಕನೆಕ್ಟ್ ಇನ್ನೂ ಹೆಚ್ಚಿನ ವೇಗವನ್ನು ನೀಡುತ್ತದೆ. ಇದರಿಂದ ನಮ್ಮ ರಾಷ್ಟ್ರಗಳು ಮತ್ತು ವಿಶ್ವದ ಜನತೆಗೆ ಪ್ರಯೋಜನವಾಗಲಿದೆ” ಎಂದು ಹೇಳಿದರು.

Doordarshan News
✔@DDNewsLive

PM @narendramodi: ಭಾರತ ಮತ್ತು ಚೀನಾ ಹಿಂದೆಯೂ ಪ್ರಮುಖ ಆರ್ಥಿಕ ಶಕ್ತಿಗಳಾಗಿದ್ದವು. #MamallapuramSummit