Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚೀನಾದ ಕಿಂಗ್ಡಾವೊಗೆ ತೆರಳುವ ಮುನ್ನ ಪ್ರಧಾನಮಂತ್ರಿ ನೀಡಿದ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ಕಿಂಗ್ಡಾವೊಗೆ ಪ್ರಯಾಣ ಬೆಳೆಸುವ ಮುನ್ನ ನೀಡಿದ ಹೇಳಿಕೆಯ ಪಠ್ಯ ಈ ಕೆಳಗಿನಂತಿದೆ.

“ಶಾಂಘೈ ಸಹಕಾರ ಸಂಘಟನೆ(ಎಸ್ ಸಿ ಒ) ರಾಷ್ಟ್ರಗಳ ಮುಖ್ಯಸ್ಥರ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ನಾನು ಚೀನಾದ ಕಿಂಗ್ಡಾವೊಗೆ ಭೇಟಿ ನೀಡುತ್ತಿದ್ದೇನೆ. ಸಂಘಟನೆಯ ಪೂರ್ಣ ಸದಸ್ಯತ್ವ ಪಡೆದ ನಂತರ ಇದೇ ಮೊದಲ ಬಾರಿಗೆ ಭಾರತೀಯ ನಿಯೋಗದ ನೇತೃತ್ವವನ್ನು ವಹಿಸಲು ಉತ್ಸುಕವಾಗುತ್ತಿದೆ. ಎಸ್ ಸಿ ಒ ನಲ್ಲಿ ಸಹಕಾರ, ಭಯೋತ್ಪಾದನೆ ವಿರುದ್ಧ ಹೋರಾಟ, ಪ್ರತ್ಯೇಕತಾವಾದ ಮತ್ತು ನಕ್ಸಲ್ ವಿಷಯಗಳಲ್ಲದೆ ಕೃಷಿ, ಆರೋಗ್ಯ, ಕಾನೂನು, ಸುಂಕ, ವಾಣಿಜ್ಯ, ಸಂಪರ್ಕ ವಿಷಯಗಳಲ್ಲಿ ಪರಸ್ಪರ ಸಹಕಾರ ಉತ್ತೇಜನ, ಪ್ರವಾಹಗಳ ಮುನ್ನೆಚ್ಚರಿಕೆ ಮತ್ತು ಹವಾಮಾನ ರಕ್ಷಣೆ ಹಾಗೂ ಜನರ ನಡುವಿನ ಸಂಬಂಧಗಳನ್ನು ವೃದ್ಧಿಸುವ ವಿಷಯಗಳು ಚರ್ಚೆಯಾಗಲಿವೆ.

ಭಾರತ ಎಸ್ ಸಿ ಒ ಸಂಘಟನೆಯ ಪೂರ್ಣ ಸದಸ್ಯತ್ವ ಪಡೆದ ನಂತರ ಕಳೆದ ಒಂದು ವರ್ಷದಿಂದೀಚೆಗೆ ಸಂಘಟನೆಯ ಸದಸ್ಯ ರಾಷ್ಟ್ರಗಳೊಂದಿಗೆ ಈ ವಲಯಗಳಲ್ಲಿ ನಮ್ಮ ಸಮಾಲೋಚನೆಗಳು ಗಣನೀಯವಾಗಿ ಹೆಚ್ಚಾಗಿವೆ. ಈ ಕಿಂಗ್ಡಾವೊ ಶೃಂಗಸಭೆ ಎಸ್ ಸಿ ಒ ಸಂಘಟನೆಯ ವಿಷಯಗಳನ್ನು ಇನ್ನಷ್ಟು ಶ್ರೀಮಂತಗೊಳಿಸಲಿದೆ ಎಂದು ನಾನು ನಂಬಿದ್ದೇನೆ ಮತ್ತು ಇದರೊಂದಿಗೆ ಎಸ್ ಸಿ ಒ ಜತೆಗಿನ ಭಾರತದ ಬಾಂಧವ್ಯದಲ್ಲಿ ಹೊಸ ಶೆಖೆ ಆರಂಭವಾಗುವ ವಿಶ್ವಾಸವಿದೆ.

ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳೊಂದಿಗೆ ಭಾರತ ಅತ್ಯಂತ ನಿಕಟ ಗೆಳೆತನ ಮತ್ತು ಬಹು ಆಯಾಮದ ಸಂಬಂಧಗಳನ್ನು ಹೊಂದಿದೆ. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ವೇಳೆ ಎಸ್ ಸಿ ಒ ಸಂಘಟನೆಯ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರಲ್ಲದೆ ಇನ್ನಿತರ ನಾಯಕರನ್ನು ಭೇಟಿ ಮಾಡಿ, ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಸಿಗಲಿದೆ”.

***