Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚೀನಾದಲ್ಲಿ ನಡೆದ 31ನೇ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ಗಳ ಪ್ರದರ್ಶನಕ್ಕೆ  ಪ್ರಧಾನಮಂತ್ರಿಯವರಿಂದ ಶ್ಲಾಘನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 31ನೇ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 11 ಚಿನ್ನ, 5 ಬೆಳ್ಳಿ ಮತ್ತು 10 ಕಂಚು ಸೇರಿದಂತೆ ಒಟ್ಟು 26 ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದರು. 1959 ರಲ್ಲಿ ಪ್ರಾರಂಭವಾದಾಗಿನಿಂದ ಇದು ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಯಶಸ್ಸಿಗಾಗಿ ಕ್ರೀಡಾಪಟುಗಳು, ಅವರ ಕುಟುಂಬ ಮತ್ತು ತರಬೇತುದಾರರನ್ನು ಅಭಿನಂದಿಸಿದರು.

ಪ್ರಧಾನಮಂತ್ರಿಯವರ ಟ್ವೀಟ್ ಹೀಗಿದೆ:

 “ಇದೊಂದು ಶ್ರೇಷ್ಠ ಕ್ರೀಡಾ ಪ್ರದರ್ಶನವಾಗಿದ್ದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ!

31ನೇ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ಗಳು 26 ಪದಕಗಳ ದಾಖಲೆ ಮುರಿದು ಹಿಂದಿರುಗಿದ್ದಾರೆ! ಇದು ನಮ್ಮ ಅತ್ಯುತ್ತಮ ಪ್ರದರ್ಶನ, 11 ಚಿನ್ನ, 5 ಬೆಳ್ಳಿ ಮತ್ತು 10 ಕಂಚುಗಳನ್ನು ಒಳಗೊಂಡಿದೆ.

ದೇಶಕ್ಕೆ ಹೆಮ್ಮೆ ತಂದಿರುವ ಮತ್ತು ಭವಿಷ್ಯದ ಕ್ರೀಡಾ ಪಟುಗಳಿಗೆ ಸ್ಪೂರ್ತಿಯಾಗಿರುವ ಈ ಕ್ರೀಡಾ ಪಟುಗಳಿಗೆ ನಾನು ಗೌರವವನ್ನು ಸಲ್ಲಿಸುತ್ತೇನೆ.

“ವಿಶೇಷವಾಗಿ ಸಂತೋಷಪಡುವ ಸಂಗತಿಯೆಂದರೆ, ಭಾರತವು 1959 ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಒಟ್ಟು 18 ಪದಕಗಳನ್ನು ಗೆದ್ದಿತ್ತು.  ಹೀಗಾಗಿ ಈ ವರ್ಷ 26 ಪದಕಗಳು ನಿಜಕ್ಕೂ ವಿಶೇಷ, ಗಮನಾರ್ಹವಾದ  ವಿಷಯ.

ಈ ಅತ್ಯುತ್ತಮ ಪ್ರದರ್ಶನವು ನಮ್ಮ ಕ್ರೀಡಾಪಟುಗಳ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಈ ಯಶಸ್ಸಿಗಾಗಿ ನಾನು ಕ್ರೀಡಾಪಟುಗಳು, ಅವರ ಕುಟುಂಬ ಮತ್ತು ತರಬೇತುದಾರರನ್ನು ಶ್ಲಾಘಿಸುತ್ತೇನೆ. ಅವರ ಮುಂದಿನ ಪ್ರಯತ್ನಗಳಿಗೆ ನಾನು ಶುಭ ಹಾರೈಸುತ್ತೇನೆ.

*****